ನಮ್ಮ ಮಹಾನ್ ಸೃಷ್ಟಿಕರ್ತನು ನಮ್ಮ ಬಗ್ಗೆ ಚಿಂತಿಸುತ್ತಾನೆ!
1 ಇಸ್ರಾಯೇಲ್ಯರು ಅವಿಧೇಯರಾಗಿದ್ದರು ಮತ್ತು ಅವರೊಂದಿಗೆ ಮಾತಾಡುತ್ತಿದ್ದಾಗ ಯೆಹೋವನು ಕೇಳಿದ್ದು: “ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರದೇವರೂ ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ.” (ಯೆಶಾ. 40:28) ನಾವು ನಮ್ಮ ಮಹಾನ್ ಸೃಷ್ಟಿಕರ್ತನನ್ನು ಅರಿತಿದ್ದೇವೆ ಮತ್ತು ಆತನು ನಮ್ಮ ಬಗ್ಗೆ ಎಷ್ಟು ಕಾಳಜಿವಹಿಸುತ್ತಾನೆಂಬುದನ್ನು ಸಹ ನಾವು ಕಾಣುತ್ತೇವೆ. ಆದರೂ, ಕೋಟ್ಯಂತರ ಜನರು ಆತನ ಅಸ್ತಿತ್ವವನ್ನು ಸಂದೇಹಿಸುತ್ತಾರೆ ಅಥವಾ ಅವರ ಕಲ್ಪನೆಯು ಬೈಬಲಿಗೆ ವಿರುದ್ಧವಾಗಿರುತ್ತದೆ. ನಾವು ಅಂತಹವರಿಗೆ ಹೇಗೆ ಸಹಾಯಮಾಡಸಾಧ್ಯವಿದೆ?
2 ಅಂತಹ ಜನರಿಗೆ ಸಹಾಯಮಾಡಲಿಕ್ಕಾಗಿ ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನಿದ್ದಾನೋ? (ಇಂಗ್ಲಿಷ್) ಎಂಬ ಹೊಸ ಪುಸ್ತಕವು ರಚಿಸಲ್ಪಟ್ಟಿದೆ. ವಾಸ್ತವಾಂಶಗಳ ಬಗ್ಗೆ ವಿಮರ್ಶಿಸಲು ಅದು ಜನರನ್ನು ಆಹ್ವಾನಿಸುತ್ತದೆ. ಈ ಪುಸ್ತಕದಲ್ಲಿರುವ ತಲ್ಲೀನಗೊಳಿಸುವಂಥ ವಿಷಯಗಳು ಮತ್ತು ಮನವೊಪ್ಪಿಸುವ ತರ್ಕಗಳು ಓದುಗರ ಮನಸೆಳೆಯಬೇಕು.
3 ಸೃಷ್ಟಿಕರ್ತ ಪುಸ್ತಕದ ಪರಿಚಯಮಾಡಿಕೊಳ್ಳಿರಿ: ಅದರ ಪರಿವಿಡಿಗಳ ಮುಖ್ಯಾಂಶಗಳು ಮನಸ್ಸಿನಲ್ಲಿರಲಿ. 2ರಿಂದ 5ರ ವರೆಗಿನ ಅಧ್ಯಾಯಗಳು, ವಿಶ್ವ, ಜೀವನ ಮತ್ತು ಮಾನವನು ಹೇಗೆ ಅಸ್ತಿತ್ವಕ್ಕೆ ಬಂದನು ಮತ್ತು ಇವುಗಳೆಲ್ಲದ್ದರ ಹಿಂದೆ ಏನಿದೆ ಎಂಬುದನ್ನು ಪರಿಗಣಿಸುತ್ತವೆ. 6ರಿಂದ 9ರ ವರೆಗಿನ ಅಧ್ಯಾಯಗಳು ಬೈಬಲು ಮತ್ತು ಅದರ ಕರ್ತೃವಿನ ಕುರಿತಾಗಿ ತಿಳಿಸುತ್ತವೆ. ವಿಶೇಷವಾಗಿ ಆದಿಕಾಂಡದಲ್ಲಿರುವ ಸೃಷ್ಟಿಯ ಕುರಿತಾದ ವೃತ್ತಾಂತವು ವಿಶ್ವಾಸಾರ್ಹವೂ ಎಂಬುದರ ಕುರಿತಾಗಿ ಪರಿಶೋಧಿಸುತ್ತವೆ. “ಸೃಷ್ಟಿಕರ್ತನು ಚಿಂತಿಸುವಾತನಾಗಿರುವಲ್ಲಿ, ಇಷ್ಟೊಂದು ಕಷ್ಟಾನುಭವವೇಕೆ?” ಎಂದು ವ್ಯಕ್ತಿಯೊಬ್ಬನು ಕೇಳುವ ಅತ್ಯಂತ ಜಟಿಲವಾದ ಪ್ರಶ್ನೆಗೆ ತೃಪ್ತಿದಾಯಕ ಉತ್ತರವನ್ನು 10ನೇ ಅಧ್ಯಾಯವು ಕೊಡುತ್ತದೆ.
4 ಸಂದೇಹವನ್ನು ವ್ಯಕ್ತಪಡಿಸುವವರೊಂದಿಗೆ ತಾರ್ಕಿಕವಾಗಿ ಮಾತಾಡಲು ಪ್ರಯತ್ನಿಸಿರಿ: ಸೃಷ್ಟಿಕರ್ತನು ಪುಸ್ತಕದ 78-9ನೇ ಪುಟಗಳು, ದೇವರ ಕುರಿತಾಗಿ ಸರಿಯಾದ ನಿರ್ಧಾರಕ್ಕೆ ಬರುವಂತೆ ಇತರರಿಗೆ ಸಹಾಯಮಾಡಲು ನೀವು ಉಪಯೋಗಿಸಸಾಧ್ಯವಿರುವ ತರ್ಕವನ್ನು ಒದಗಿಸುತ್ತದೆ. ಮೊದಲನೆಯಾದಾಗಿ ಅವರಿಗೆ ಹೀಗೆ ಕೇಳಿರಿ: “ವಿಶ್ವಕ್ಕೆ ಆರಂಭವಿತ್ತೋ?” ಹೆಚ್ಚಿನವರು ಹೌದೆಂದು ಹೇಳುವರು. ಹಾಗೆ ಹೇಳಿದಾಗ, ಈ ಪ್ರಶ್ನೆಯನ್ನು ಕೇಳಿರಿ: “ಅದು ಸೃಷ್ಟಿಸಲ್ಪಟ್ಟಿತೋ ಇಲ್ಲವೇ ತನ್ನಿಂದ ತಾನೇ ಉಂಟಾಯಿತೋ?” ಹೆಚ್ಚಿನವರು ಅದು ಸೃಷ್ಟಿಸಲ್ಪಟ್ಟಿತೆಂದು ಉತ್ತರ ಕೊಡುವರು. ಇದು ಅಂತಿಮ ಪ್ರಶ್ನೆಗೆ ನಡೆಸುತ್ತದೆ: “ವಿಶ್ವದ ಆರಂಭವು ಯಾವುದೋ ಸನಾತನ ವಸ್ತುವಿನಿಂದಾಯಿತೋ ಅಥವಾ ಯಾವುದೋ ಒಬ್ಬ ಸನಾತನ ವ್ಯಕ್ತಿಯಿಂದಾಯಿತೋ?” ಈ ರೀತಿಯ ಪ್ರಶ್ನೆಯನ್ನು ಕೇಳುವ ಮೂಲಕ ಒಬ್ಬ ಸೃಷ್ಟಿಕರ್ತನಿರಲೇಬೇಕು ಎಂಬುದನ್ನು ತಿಳಿದುಕೊಳ್ಳಲು ಅನೇಕರನ್ನು ಪ್ರೋತ್ಸಾಹಿಸಸಾಧ್ಯವಿದೆ.
5 ಸೃಷ್ಟಿಕರ್ತ ಎಂಬ ಪುಸ್ತಕವು ಅನೇಕರಿಗೆ ಅತ್ಯಗತ್ಯವಾದ ಪುಸ್ತಕವಾಗಿದೆ. ನಿಮ್ಮ ಸಂಬಂಧಿಕರು, ಸಹೋದ್ಯೋಗಿಗಳು, ಶಾಲಾ ಸಹಪಾಠಿಗಳು, ಮತ್ತು ನಿಮಗೆ ಗೊತ್ತಿರುವ ವ್ಯಕ್ತಿಗಳೊಂದಿಗೆ ಅದನ್ನು ಹಂಚಿಕೊಳ್ಳಿರಿ. ಶುಶ್ರೂಷೆಗೆ ಹೋಗುವಾಗ ಅದನ್ನು ಕೊಂಡೊಯ್ಯಿರಿ ಮತ್ತು ಅಲ್ಲಿ ದೇವರ ಅಸ್ತಿತ್ವದ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸುವ ವ್ಯಕ್ತಿಗಳಿಗೆ ಅದನ್ನು ಕೊಡಬಹುದು. ಈ ಪುಸ್ತಕವನ್ನು ನಾವು ಚೆನ್ನಾಗಿ ಓದಿದಷ್ಟೂ, ನಮ್ಮ ಸೃಷ್ಟಿಕರ್ತನ ಕಡೆಗಿರುವ ನಮ್ಮ ಪ್ರೀತಿಯು ಇನ್ನೂ ಹೆಚ್ಚು ಬಲಗೊಳ್ಳುವುದು ಮತ್ತು ಇದು ಆತನ ಉಚ್ಚ ಮಟ್ಟಗಳಿಗನುಸಾರವಾಗಿ ನಡೆಯುತ್ತಾ ಇರುವಂತೆ ನಮಗೆ ಸಹಾಯಮಾಡುವುದು.—ಎಫೆ. 5:1; ಪ್ರಕ. 4:11.