ದೇವಪ್ರಭುತ್ವ ವಾರ್ತೆ
◼ ಅರ್ಮೇನಿಯ: ಶುಶ್ರೂಷೆಯಲ್ಲಿ ಸುಮಾರು 4,741 ಪ್ರಚಾರಕರಲ್ಲಿ ಒಬ್ಬೊಬ್ಬರು ಸರಾಸರಿ 16 ತಾಸುಗಳನ್ನು ವ್ಯಯಿಸಿದ್ದನ್ನು ಡಿಸೆಂಬರ್ ವರದಿಯು ತೋರಿಸಿತು. ಪ್ರಚಾರಕರ ಈ ಹೊಸ ಉಚ್ಚಾಂಕವು ಕಳೆದ ವರ್ಷದ ಸರಾಸರಿಗಿಂತ 17 ಪ್ರತಿಶತ ವೃದ್ಧಿಯಾಗಿದೆ.
◼ ಚಿಲಿ: ಪಯನೀಯರರಿಗಾಗಿ ಹೊಸ ತಾಸಿನ ಆವಶ್ಯಕತೆಯನ್ನು ಉತ್ಸಾಹದಿಂದ ಸ್ವೀಕರಿಸಲಾಯಿತು. ಇದು ಜನವರಿ ತಿಂಗಳಿನಲ್ಲಿ 4,351 ರೆಗ್ಯುಲರ್ ಪಯನೀಯರರ ಉಚ್ಚಾಂಕವನ್ನು ಪ್ರಥಮ ಬಾರಿಗೆ ವರದಿ ಮಾಡುವ ಮೂಲಕ ರುಜುಪಡಿಸಲ್ಪಟ್ಟಿತು. ಹಾಗೂ 5,175 ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದರು. ಇದು ಸಹ ಈ ಸೇವಾ ವರ್ಷಕ್ಕಾಗಿ ಇಷ್ಟರ ವರಗೆ ವರದಿಸಲ್ಪಟ್ಟಿರುವುದರಲ್ಲಿಯೇ ಅತ್ಯಂತ ಉತ್ತಮ ಸಂಖ್ಯೆಯಾಗಿದೆ.
◼ ಯೂಕ್ರೇನ್: ಜನವರಿ ತಿಂಗಳಿನಲ್ಲಿ ವರದಿಸಿದ 1,00,129 ಪ್ರಚಾರಕರಲ್ಲಿ, ಸುಮಾರು 12 ಶೇಕಡದಷ್ಟು ಮಂದಿ ಯಾವುದಾದರೂ ಒಂದು ರೀತಿಯ ಪೂರ್ಣ ಸಮಯದ ಸೇವೆಯಲ್ಲಿದ್ದರು. ಯೂಕ್ರೇನಿನಲ್ಲಿ 5,516 ಮಂದಿ ರೆಗ್ಯುಲರ್ ಪಯನೀಯರರಾದರು. ಇದು 27ನೇ ಆನುಕ್ರಮಿಕ ಉಚ್ಚಾಂಕವಾಗಿದೆ, ಮತ್ತು ಇನ್ನೂ 6,468 ಪ್ರಚಾರಕರು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದರು.