ಬೌದ್ಧ ಧರ್ಮದ ವ್ಯಕ್ತಿಗೆ ನೀವೇನನ್ನು ಹೇಳಸಾಧ್ಯವಿದೆ?
1 ಕೆಲವು ದೇಶಗಳಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿರುವವರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜನರು ಬೌದ್ಧ ಧರ್ಮದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಸತ್ಯದ ಕಡೆಗೆ ಇಂತಹವರನ್ನು ಯಾವುದು ಆಕರ್ಷಿಸುತ್ತಿದೆ? ಬೌದ್ಧ ಧರ್ಮದ ಒಬ್ಬ ವ್ಯಕ್ತಿಗೆ ನೀವು ಸುವಾರ್ತೆಯನ್ನು ಹೇಗೆ ಪ್ರಸ್ತುತಪಡಿಸಬಲ್ಲಿರಿ?
2 ನಿಜವಾದ ಹಿತಚಿಂತನೆಯನ್ನು ತೋರಿಸಿರಿ: ಸತ್ಯದ ಕಡೆಗೆ ತಮ್ಮನ್ನು ಆಕರ್ಷಿಸಿದಂಥದ್ದು ಅಗಾಧವಾದ ತರ್ಕವಲ್ಲವೆಂದು ಹಿಂದೆ ಬೌದ್ಧರಾಗಿದ್ದ ವ್ಯಕ್ತಿಗಳು ಹೇಳಿದ್ದಾರೆ. ಬದಲಾಗಿ, ಅವರ ಹೃದಯವನ್ನು ಸ್ಪರ್ಶಿಸಿದ ಸಂಗತಿಯು, ಅವರ ಕಡೆಗೆ ತೋರಿಸಲ್ಪಟ್ಟ ನಿಜವಾದ ವೈಯಕ್ತಿಕ ಹಿತಚಿಂತನೆಯೇ ಆಗಿದೆ. ಅಮೆರಿಕದಲ್ಲಿ ವಾಸಿಸುತ್ತಿರುವ ಒಬ್ಬ ಏಷ್ಯಾದ ಸ್ತ್ರೀಯು, ತನ್ನನ್ನು ಭೇಟಿಮಾಡಿದ ಸಹೋದರಿಯ ಸ್ನೇಹಭಾವಕ್ಕೆ ಎಷ್ಟು ಮಾರುಹೋದಳೆಂದರೆ, ಅವಳು ಬೈಬಲ್ ಅಭ್ಯಾಸಕ್ಕಾಗಿ ಒಪ್ಪಿಕೊಂಡಳು. ಆ ಸ್ತ್ರೀಗೆ ಇಂಗ್ಲಿಷ್ ಭಾಷೆ ಅಷ್ಟು ಚೆನ್ನಾಗಿ ಬರುತ್ತಿರಲಿಲ್ಲವಾದರೂ ಸಹೋದರಿಯು ತುಂಬ ತಾಳ್ಮೆಯುಳ್ಳವಳಾಗಿದ್ದಳು. ಅವಳು ಅಭ್ಯಾಸವನ್ನು ಮಾಡಲಾಗದಷ್ಟು ದಣಿದವಳಾಗಿರುತ್ತಿದ್ದಾಗ ಅಥವಾ ಅಶಕ್ತಳಾಗಿರುವಾಗ, ಸಹೋದರಿಯು ಒಂದು ಸ್ನೇಹಭಾವದ ಭೇಟಿಯನ್ನು ನೀಡಿ, ಮುಂದಿನ ಅಭ್ಯಾಸಕ್ಕಾಗಿ ಏರ್ಪಾಡನ್ನು ಮಾಡುತ್ತಿದ್ದಳು. ಕಟ್ಟಕಡೆಗೆ, ಆ ಸ್ತ್ರೀಯು, ಅವಳ ಇಬ್ಬರು ಪುತ್ರರು ಮತ್ತು ಅವಳ ವೃದ್ಧ ತಾಯಿಯು ದೀಕ್ಷಾಸ್ನಾನ ಪಡೆದುಕೊಂಡರು. ಅವಳು ತನ್ನ ತಾಯ್ನಾಡಿಗೆ ಹಿಂದಿರುಗಿ, ಅಲ್ಲಿ ಇತರರು ಸತ್ಯವನ್ನು ಕಲಿತುಕೊಳ್ಳುವಂತೆ ಅನೇಕರಿಗೆ ಸಹಾಯಮಾಡಿದಳು. ಅವಳ ಪುತ್ರರಲ್ಲಿ ಒಬ್ಬನು ಈಗ ಬ್ರಾಂಚ್ ಆಫೀಸಿನಲ್ಲಿ ಸೇವೆಸಲ್ಲಿಸುತ್ತಿದ್ದಾನೆ. ಯೆಹೋವನ ‘ದಯೆ ಮತ್ತು ಪ್ರೀತಿಯನ್ನು’ ಪ್ರತಿಬಿಂಬಿಸುವುದರಿಂದ ಎಂತಹ ಆಶೀರ್ವಾದಗಳು ಲಭಿಸಿದವು!—ತೀತ 3:4, NW.
3 ಬೌದ್ಧ ಧರ್ಮದವರ ವಿಚಾರ: ಬೌದ್ಧರು ಸಾಮಾನ್ಯವಾಗಿ ಇತರರ ಅಭಿಪ್ರಾಯಗಳ ಕಡೆಗೆ ಸಹಿಷ್ಣುತೆಯನ್ನು ತೋರಿಸುತ್ತಾರಾದರೂ, ನಿರ್ದಿಷ್ಟ ಸಿದ್ಧಾಂತಕ್ಕೆ ಅಂಟಿಕೊಳ್ಳುವ ಅಗತ್ಯವಿದೆಯೆಂದು ಅವರಿಗನಿಸುವುದಿಲ್ಲ. ಆದುದರಿಂದ ಅವರಲ್ಲಿ ಪ್ರತಿಯೊಬ್ಬರ ನಂಬಿಕೆಗಳು ಭಿನ್ನಭಿನ್ನವಾಗಿರುತ್ತವೆ. ಬೌದ್ಧ ಧರ್ಮದ ಬೋಧನೆಯ ಒಂದು ವಿಭಾಗದಲ್ಲಿ ಸಾಮಾನ್ಯ ವಿಷಯವೇನೆಂದರೆ, ಜೀವನವು ಕಷ್ಟತೊಂದರೆಗಳಿಂದ ತುಂಬಿರುವುದಾದರೂ, ಜ್ಞಾನೋದಯದ ಮೂಲಕ, ಒಬ್ಬನು ಅತೃಪ್ತಿಕರ ಜೀವಿತದಿಂದ ಕೂಡಿದ ಪುನರ್ಜನ್ಮದ ನಿರಂತರ ಚಕ್ರವನ್ನು ನಿಲ್ಲಿಸಸಾಧ್ಯವಿದೆ. ಈ ಚಕ್ರದಿಂದ ಬಿಡುಗಡೆಯನ್ನು ಹೊಂದಲು, ಒಬ್ಬನು ಮುಕ್ತಿಯನ್ನು ಪಡೆದುಕೊಳ್ಳಬೇಕೆಂದು ಹೇಳಲಾಗುತ್ತದೆ. ಈ ಸ್ಥಿತಿಯನ್ನು ವರ್ಣಿಸಸಾಧ್ಯವಿಲ್ಲ ಏಕೆಂದರೆ ಅದು ಸ್ಥಾನ ಅಥವಾ ಘಟನೆಯಾಗಿರುವುದಿಲ್ಲ, ಬದಲಾಗಿ ನೋವು ಮತ್ತು ದುಷ್ಟತನವಿಲ್ಲದ ಒಂದು ಶೂನ್ಯತೆಯಾಗಿದೆ. (ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?, [ಇಂಗ್ಲಿಷ್] ಪುಟಗಳು 9-10ನ್ನು ನೋಡಿರಿ.) ಇದು ನಮಗೆ ಏನನ್ನು ಹೇಳುತ್ತದೆ? ಜನರನ್ನು ಬೌದ್ಧ ತತ್ತ್ವದ ಕುರಿತು ವಾಗ್ವಾದಗಳಲ್ಲಿ ಒಳಗೂಡಿಸುವುದು, ವಿರುದ್ಧ ಪರಿಣಾಮವನ್ನು ಉಂಟುಮಾಡುವುದು. ಅದಕ್ಕೆ ಬದಲು, ಎಲ್ಲರಿಗೂ ಚಿಂತೆಯ ವಿಷಯವಾಗಿರುವ ಸಾಮಾನ್ಯ ಸಮಸ್ಯೆಗಳನ್ನು ಚರ್ಚಿಸಿರಿ.
4 ಪರಸ್ಪರ ಅಭಿರುಚಿಗಳಿಗೆ ಪ್ರಾಶಸ್ತ್ಯವನ್ನು ಕೊಡಿರಿ: ಬೌದ್ಧರು ಸಾಮಾನ್ಯವಾಗಿ ಈ ಭೂಮಿಯ ಮೇಲಿನ ಜೀವಿತವನ್ನು ಕಷ್ಟಾನುಭವದೊಂದಿಗೆ ಸಮೀಕರಿಸುವುದರಿಂದ, ಈ ಭೂಮಿಯ ಮೇಲೆ ಅನಂತಕಾಲದ ಜೀವಿತದ ಕಲ್ಪನೆಯು ಅವರಿಗೆ ವಿಚಿತ್ರವಾಗಿ ತೋರಬಹುದು. ಆದರೂ, ಸಂತೋಷಕರವಾದ ಕುಟುಂಬ ಜೀವಿತವನ್ನು ಆನಂದಿಸುವ, ಕಷ್ಟಾನುಭವವು ಇನ್ನಿಲ್ಲದೆ ಹೋಗುವುದನ್ನು ನೋಡುವ ಮತ್ತು ಜೀವಿತದ ಅರ್ಥವೇನು ಎಂಬುದನ್ನು ಕಂಡುಕೊಳ್ಳುವ ಇಚ್ಛೆಯು ನಮಗೆಲ್ಲರಿಗೂ ಇದೆ. ಅಂತಹ ಪರಸ್ಪರ ಅಗತ್ಯಗಳನ್ನು ಹೇಗೆ ಎತ್ತಿತೋರಿಸಸಾಧ್ಯವಿದೆ ಎಂಬುದನ್ನು ಗಮನಿಸಿರಿ.
5 ಈ ಪೀಠಿಕೆಯನ್ನು ನೀವು ಪ್ರಯತ್ನಿಸಬಹುದು:
◼“ಅನೇಕ ಅಮಾಯಕ ಜನರು ಕಷ್ಟಾನುಭವಿಸುತ್ತಿರುವ ಲೋಕದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಕಷ್ಟದುಃಖಗಳನ್ನು ಅಂತ್ಯಗೊಳಿಸಲು ಏನು ಅಗತ್ಯವಾಗಿದೆಯೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನನಗೆ ಬಹಳ ಸಾಂತ್ವನದಾಯಕವಾಗಿರುವ ಒಂದು ಪುರಾತನ ವಾಗ್ದಾನವಿದೆ. [ಪ್ರಕಟನೆ 21:4ನ್ನು ಓದಿರಿ.] ಆ ಸಮಯವು ಇನ್ನೂ ಬಂದಿಲ್ಲ ಎಂಬುದು ವಾಸ್ತವವೇ, ಆದರೆ ಅದು ಬರುವಾಗ ನಾವು ಅದನ್ನು ನೋಡಲು ಇಷ್ಟಪಡುವೆವು ಅಲ್ಲವೇ?” ಅನಂತರ, ಕಷ್ಟಾನುಭವವು ಹೇಗೆ ಅಂತ್ಯಗೊಳ್ಳುವುದು ಎಂಬುದನ್ನು ವಿವರಿಸುವ ಒಂದು ಪ್ರಕಾಶನವನ್ನು ನೀಡಿರಿ.
6 ಒಬ್ಬ ವೃದ್ಧ ವ್ಯಕ್ತಿಗೆ ನೀವು ಹೀಗೆ ಹೇಳಸಾಧ್ಯವಿದೆ:
◼“ಈಗೀಗ ಹೆಚ್ಚಾಗುತ್ತಿರುವ ಕೀಳ್ಮಟ್ಟದ ವಿಚಾರಗಳು ಮತ್ತು ಅದರಿಂದ ನಮ್ಮ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮದ ಕುರಿತು ನನ್ನಂತೆಯೇ ನೀವು ಸಹ ಚಿಂತಿತರಾಗಿರಬಹುದು. ಯುವ ಜನರ ಮಧ್ಯೆ ಅನೈತಿಕತೆಯು ಏಕೆ ಹೆಚ್ಚುತ್ತಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮುಸ್ಲಿಮ್, ಕ್ರಿಶ್ಚಿಯನ್, ಮತ್ತು ಹಿಂದೂ ಧರ್ಮಗಳು ಸ್ಥಾಪನೆಯಾಗುವ ಬಹಳ ಸಮಯದ ಹಿಂದೆಯೇ ಬರೆಯಲ್ಪಡಲು ಆರಂಭಿಸಲ್ಪಟ್ಟ ಪುಸ್ತಕವೊಂದರಲ್ಲಿ ಇದು ಮುಂತಿಳಿಸಲ್ಪಟ್ಟಿತ್ತು ಎಂಬುದು ನಿಮಗೆ ಗೊತ್ತಿದೆಯೋ? [2 ತಿಮೊಥೆಯ 3:1-3ನ್ನು ಓದಿರಿ.] ವಿದ್ಯೆಯನ್ನು ಪಡೆದುಕೊಳ್ಳುತ್ತಿರುವುದಾದರೂ, ಇಂತಹ ಪರಿಸ್ಥಿತಿಗಳು ಈಗಲೂ ಇವೆ. [ವಚನ 7ನ್ನು ಓದಿರಿ.] ಅನೇಕ ಜನರು ಎಂದಿಗೂ ಕಲಿಯದಿರುವಂತಹ ಸತ್ಯವನ್ನು ಅರ್ಥಮಾಡಿಕೊಳ್ಳಲು ಈ ಸಾಹಿತ್ಯವು ನನಗೆ ಸಹಾಯಮಾಡಿತು. ನೀವು ಅದನ್ನು ಓದಲು ಇಷ್ಟಪಡುತ್ತೀರೋ?” ಸೂಕ್ತವಾದ ಪುಸ್ತಕ ಅಥವಾ ಬ್ರೋಷರನ್ನು ನೀಡಿರಿ.
7 ಬೌದ್ಧರು ಸಾಮಾನ್ಯವಾಗಿ ಬೈಬಲನ್ನು ಪವಿತ್ರ ಬರವಣಿಗೆಯೋಪಾದಿ ಗೌರವಿಸುತ್ತಾರೆ. ಆದುದರಿಂದ ವಿಷಯವನ್ನು ಅದರಿಂದ ನೇರವಾಗಿ ಓದಿ ತಿಳಿಸಿರಿ. (ಇಬ್ರಿ. 4:12) ಆ ವ್ಯಕ್ತಿಯು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುವಲ್ಲಿ, ಬೈಬಲ್ ಬರಹಗಾರರು ಏಷ್ಯಾದವರಾಗಿದ್ದರು ಎಂಬ ವಿಷಯವನ್ನು ಅವನಿಗೆ ತಿಳಿಸಿರಿ.
8 ಯಾವ ಪ್ರಕಾಶನಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ? ಅನೇಕ ಪ್ರಚಾರಕರು ಈ ಮುಂದಿನ ಪ್ರಕಾಶನಗಳನ್ನು ಯಶಸ್ವಿಕರವಾಗಿ ಉಪಯೋಗಿಸಿದ್ದಾರೆ: ಕುಟುಂಬ ಸಂತೋಷದ ರಹಸ್ಯ, ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಮತ್ತು ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕಗಳು; “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಮತ್ತು ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಎಂಬ ಬ್ರೋಷರುಗಳು ಮತ್ತು ಇನ್ನೂ ಲಭ್ಯವಿರುವುದಾದರೆ, ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ? ಎಂಬ ರಾಜ್ಯ ವಾರ್ತೆ ನಂ. 35. ಈಗ ಸತ್ಯವನ್ನು ಕಲಿತುಕೊಳ್ಳುತ್ತಿರುವ ಅನೇಕ ಬೌದ್ಧರು, ಮೊದಲು ಅಪೇಕ್ಷಿಸು ಬ್ರೋಷರಿನ ಅಧ್ಯಯನ ಮಾಡಿ, ಅನಂತರ ಜ್ಞಾನ ಪುಸ್ತಕವನ್ನು ಅಧ್ಯಯನಮಾಡುತ್ತಿದ್ದಾರೆ.
9 ಪೌಲನು ಅಥೇನೆಯಲ್ಲಿ ಪ್ರಚಾರಮಾಡಿದ ಸುಮಾರು 400 ವರ್ಷಗಳ ಮುಂಚೆಯೇ ಬೌದ್ಧ ಮಿಷನೆರಿಗಳು ಅಲ್ಲಿಗೆ ಬಂದಿದ್ದರು ಎಂದು ಹೇಳಲಾಗುತ್ತದಾದರೂ, ಬೌದ್ಧ ಧರ್ಮದ ವಿಚಾರದಿಂದ ಪ್ರಭಾವಿತನಾಗಿದ್ದ ಒಬ್ಬ ವ್ಯಕ್ತಿಯನ್ನಾದರೂ ಅವನು ಸಂಧಿಸಿದನೋ ಇಲ್ಲವೋ ಎಂಬುದು ಅನಿಶ್ಚಿತವಾದ ವಿಷಯವಾಗಿದೆ. ಆದರೂ, ಎಲ್ಲ ರೀತಿಯ ಜನರಿಗೆ ಸಾಕ್ಷಿಯನ್ನು ನೀಡುವುದರಲ್ಲಿ ಪೌಲನಿಗೆ ಹೇಗನಿಸಿತು ಎಂಬುದು ಮಾತ್ರ ನಮಗೆ ಖಂಡಿತವಾಗಿಯೂ ಗೊತ್ತಿದೆ. ಅವನು “ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು” ತನ್ನನ್ನು ‘ಎಲ್ಲರಿಗೂ ಅಧೀನಮಾಡಿಕೊಂಡನು.’ (1 ಕೊರಿಂ. 9:19-23) ಜನರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮೂಲಕ ಮತ್ತು ನಾವು ಸಂಧಿಸುವ ಪ್ರತಿಯೊಬ್ಬರಿಗೂ ಸಾಕ್ಷಿ ನೀಡುತ್ತಾ, ನಮಗೆಲ್ಲರಿಗೂ ಇರುವ ಏಕೈಕ ನಿರೀಕ್ಷೆಗೆ ಪ್ರಾಶಸ್ತ್ಯವನ್ನು ಕೊಡುವ ಮೂಲಕ ನಾವಿದನ್ನು ಮಾಡಸಾಧ್ಯವಿದೆ.