ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/99 ಪು. 7
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 1999 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಾವು ನಮ್ಮ ಆರಾಧನಾ ಸ್ಥಳವನ್ನು ಸುಸ್ಥಿತಿಯಲ್ಲಿಡೋಣ
    2003 ನಮ್ಮ ರಾಜ್ಯದ ಸೇವೆ
  • ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ನೆರವಾಗುವಿರಿ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ಇದು ನಮ್ಮ ಆರಾಧನಾ ಸ್ಥಳ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಯೆಹೋವನ ಆರಾಧನೆಗಾಗಿ ಇರುವ ಸ್ಥಳಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
ಇನ್ನಷ್ಟು
1999 ನಮ್ಮ ರಾಜ್ಯದ ಸೇವೆ
km 11/99 ಪು. 7

ಪ್ರಶ್ನಾ ರೇಖಾಚೌಕ

◼ ರಾಜ್ಯ ಸಭಾಗೃಹವನ್ನು ಶುಚಿಗೊಳಿಸುವುದು ಯಾರ ಜವಾಬ್ದಾರಿಯಾಗಿದೆ?

ಸ್ವಚ್ಛ ಹಾಗೂ ಆಕರ್ಷಕವಾಗಿರುವ ಒಂದು ರಾಜ್ಯ ಸಭಾಗೃಹವು ನಾವು ಸಾರುವ ಸಂದೇಶದ ಕುರಿತು ಒಳ್ಳೆಯ ಅಭಿಪ್ರಾಯವನ್ನು ಮೂಡಿಸುತ್ತದೆ. (1 ಪೇತ್ರ 2:12 ನ್ನು ಹೋಲಿಸಿರಿ.) ಸಭಾಗೃಹವನ್ನು ನೀಟಾಗಿ ಮತ್ತು ಶುಚಿಯಾಗಿ ಇಡುವುದು ಅತ್ಯಾವಶ್ಯಕವಾಗಿರುತ್ತದೆ ಮತ್ತು ಅದನ್ನು ಸುಸ್ಥಿತಿಯಲ್ಲಿಡುವುದರಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳ​ಬಹುದು. ಕೇವಲ ಕೆಲವೇ ಮಂದಿ ಇಡೀ ಹೊರೆಯನ್ನು ಹೊರುವಂತೆ ನಾವು ನಿರೀಕ್ಷಿಸಬಾರದು. ಸಾಮಾನ್ಯವಾಗಿ, ಸ್ವಚ್ಛಗೊಳಿಸುವಿಕೆಯ ಕೆಲಸವು ಸಭೆಯ ಪುಸ್ತಕ ಅಭ್ಯಾಸ ಗುಂಪುಗಳಿಗೆ ಅನುಗುಣವಾಗಿ ಏರ್ಪಡಿಸಲಾಗುತ್ತದೆ, ಮತ್ತು ಅಭ್ಯಾಸ ನಿರ್ವಾಹಕನು ಅಥವಾ ಅವನ ಸಹಾಯಕನು ಮುಂದಾಳುತ್ವವನ್ನು ವಹಿಸುತ್ತಾನೆ. ಒಂದಕ್ಕಿಂತಲೂ ಹೆಚ್ಚು ಸಭೆಗಳು ಕೂಡಿಬರುವ ಸಭಾಗೃಹಗಳಲ್ಲಿ, ಸುಸ್ಥಿತಿಯಲ್ಲಿಡುವ ಕೆಲಸದಲ್ಲಿ ಎಲ್ಲ ಸಭೆಗಳು ಪಾಲ್ಗೊಳ್ಳುವಂತೆ ಹಿರಿಯರು ವ್ಯವಸ್ಥೆಮಾಡುತ್ತಾರೆ.

ನಾವು ಈ ಜವಾಬ್ದಾರಿಯನ್ನು ಹೇಗೆ ಅತ್ಯುತ್ತಮವಾಗಿ ನಿರ್ವಹಿಸಬಹುದು? ರಾಜ್ಯ ಸಭಾಗೃಹವನ್ನು ಶುಚಿಗೊಳಿಸಲು ಒಂದು ಕ್ರಮವಾದ ಶೆಡ್ಯೂಲ್‌ ಇರಬೇಕು. ಶುಚಿಗೊಳಿಸುವಿಕೆಗೆ ಬೇಕಾಗಿರುವ ಸರಬರಾಯಿಗಳು ಮತ್ತು ಸಲಕರಣೆಗಳು ಸುಲಭವಾಗಿ ಕೈಗೆ ಸಿಗುವಂತಿರಬೇಕು. ಕೆಲಸಮಾಡುವವರು ಏನನ್ನು ಮಾಡಬೇಕೆಂಬುದನ್ನು ನೋಡಿ ತಿಳಿದುಕೊಳ್ಳುವಂತೆ, ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ನೋಟಿಸ್‌ ಬೋರ್ಡಿನಲ್ಲಿ ಅಂಟಿಸಿಟ್ಟಿರಬೇಕು. ಎರಡು ಬೇರೆ-ಬೇರೆ ಪಟ್ಟಿಗಳನ್ನು ಮಾಡಬಹುದು. ಒಂದು, ಪ್ರತಿಯೊಂದು ಕೂಟದ ನಂತರ ಮಾಡಬೇಕಾಗಿರುವ ಹಗುರ ಶುಚಿಗೊಳಿಸುವಿಕೆ. ಮತ್ತೊಂದು, ಪ್ರತಿವಾರ ಮಾಡಬೇಕಾಗಿರುವ ಹೆಚ್ಚು ಸಂಪೂರ್ಣವಾದ ಶುಚಿಗೊಳಿಸುವಿಕೆಯ ಪಟ್ಟಿ. ಪುಸ್ತಕ ಅಭ್ಯಾಸ ನಿರ್ವಾಹಕನು ಸಂಪೂರ್ಣವಾದ ಶುಚಿಗೊಳಿಸುವಿಕೆಯನ್ನು ನೇಮಿಸಲ್ಪಟ್ಟಿರುವವರೆಲ್ಲರಿಗೆ ಅನುಕೂಲಕರವಾಗಿರುವ ದಿನ ಮತ್ತು ಸಮಯದಲ್ಲಿ ಶೆಡ್ಯೂಲ್‌ ಮಾಡತಕ್ಕದ್ದು. ಗಿಡಗಳಿಗೆ ಮತ್ತು ಹೂವುಗಳಿಗೆ ಸಹ ಕ್ರಮವಾಗಿ ಗಮನವನ್ನು ಕೊಡಬೇಕು. ಕಾಲುದಾರಿ ಮತ್ತು ಪಾರ್ಕಿಂಗ್‌ ಸ್ಥಳವು ಕಸವಿಲ್ಲದೆ ಇರಬೇಕು. ಪ್ರತಿ ವರ್ಷ, ಪ್ರಾಯಶಃ ಜ್ಞಾಪಕಾಚರಣೆಯ ಸಮಯಕ್ಕೆ ಮುಂಚಿತವಾಗಿ ಸಂಪೂರ್ಣವಾದ ಶುಚಿಗೊಳಿಸುವ ಕೆಲಸವನ್ನು ಮಾಡತಕ್ಕದ್ದು. ಇದರಲ್ಲಿ ಪರದೆಗಳು, ಕಿಟಕಿ ಮತ್ತು ಗೋಡೆಗಳ ತೊಳೆಯುವಿಕೆಯು ಸೇರಿರಬಹುದು.

ಸಭಾಗೃಹದ ಒಳಗೆ ಅಥವಾ ಹೊರಗೆ ಕಸವನ್ನು ಹಾಕದಿರುವ ಮೂಲಕ ನಾವೆಲ್ಲರೂ ಖಂಡಿತವಾಗಿಯೂ ಹೊರೆಯನ್ನು ಹಗುರಗೊಳಿಸಬಲ್ಲೆವು. ನಾವು ಶೌಚಾಲಯವನ್ನು ಉಪಯೋಗಿಸಿದ ನಂತರ, ಮುಂದಿನ ವ್ಯಕ್ತಿಯ ಉಪಯೋಗಕ್ಕೆ ಅದನ್ನು ಶುಚಿಯಾಗಿಡಬಹುದು. ಸಲಕರಣೆಗಳನ್ನು ಮುರಿದುಹಾಕದಂತೆ ಅಥವಾ ಪೀಠೋಪಕರಣಗಳನ್ನು ಹಾನಿಗೊಳಿಸದಂತೆ ಯಾವಾಗಲೂ ಜಾಗ್ರತೆ ವಹಿಸಿರಿ. ಹಾಳಾಗಿರುವ ಕುರ್ಚಿಗಳು, ಕೊಳಾಯಿ ವ್ಯವಸ್ಥೆಯ ಸಮಸ್ಯೆಗಳು, ಉರಿಯದಿರುವ ಬಲ್ಬುಗಳು, ಮುಂತಾದವುಗಳನ್ನು ನೀವು ಗಮನಿಸಿರುವಲ್ಲಿ, ಅದನ್ನು ರಾಜ್ಯ ಸಭಾಗೃಹದ ದುರಸ್ತಿಯನ್ನು ನೋಡಿಕೊಳ್ಳುವ ಸಹೋದರರಿಗೆ ತಡಮಾಡದೆ ವರದಿಸಿರಿ.

ನಾವೆಲ್ಲರೂ ನಮ್ಮ ಪಾಲನ್ನು ಮಾಡಲು ಸಿದ್ಧರಾಗಿರೋಣ. ಇದು ರಾಜ್ಯ ಸಭಾಗೃಹವನ್ನು ಸ್ವೀಕಾರಯೋಗ್ಯವಾದ ಆರಾಧನಾಲಯವನ್ನಾಗಿ ಮಾಡುವುದು ಮತ್ತು ಯೆಹೋವನನ್ನು ಗೌರವಿಸುವ ಶುದ್ಧ ಜನರಾಗಿ ನಮ್ಮನ್ನು ಇತರರಿಂದ ಭಿನ್ನರಾಗಿಸುವುದು.—1 ಪೇತ್ರ 1:16.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ