ದಾನಿಯೇಲನ ಪ್ರವಾದನೆ ಪುಸ್ತಕವನ್ನು ಅಭ್ಯಾಸಿಸುವುದು
1 ಏಪ್ರಿಲ್ 17ರ ವಾರದಿಂದ ಆರಂಭಿಸಿ, ಸಭಾ ಪುಸ್ತಕ ಅಭ್ಯಾಸದಲ್ಲಿ ನಾವು ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕವನ್ನು ಅಭ್ಯಾಸಿಸುವೆವು. ಈ ಚಿತ್ತಾಕರ್ಷಕ ಪುಸ್ತಕವನ್ನು ಈಗಾಗಲೇ ಅನೇಕರು ಓದಿದ್ದಾರಾದರೂ, ಈ ಪುಸ್ತಕವನ್ನು ಒಟ್ಟಾಗಿ ಚರ್ಚಿಸುವುದರಿಂದ ಬರುವ ಪ್ರಯೋಜನಗಳನ್ನು ಆನಂದಿಸಲು ಈಗ ನಮಗೆ ಸದವಕಾಶವಿದೆ. ಬೈಬಲಿನ ದಾನಿಯೇಲ ಪುಸ್ತಕದ ಈ ಗಹನವಾದ ಅಭ್ಯಾಸಕ್ಕಾಗಿ ಪ್ರತಿ ವಾರ ಹಾಜರಿರುವಂತೆ, ಎಲ್ಲ ಪ್ರಚಾರಕರು, ಆಸಕ್ತ ಜನರು ಮತ್ತು ಮಕ್ಕಳು ಆಮಂತ್ರಿಸಲ್ಪಟ್ಟಿದ್ದಾರೆ ಹಾಗೂ ಉತ್ತೇಜಿಸಲ್ಪಟ್ಟಿದ್ದಾರೆ.—ಧರ್ಮೋ. 31:12, 13.
2 ಅಭ್ಯಾಸದ ಶೆಡ್ಯೂಲ್ ಮತ್ತು ಸೂಚನೆಗಳು: ದಾನಿಯೇಲನ ಪ್ರವಾದನೆ ಪುಸ್ತಕಕ್ಕಾಗಿರುವ ಅಭ್ಯಾಸದ ಪೂರ್ಣ ಶೆಡ್ಯೂಲನ್ನು ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿ ಕೊಡಲಾಗಿದೆ. ಇದರ ಒಂದು ಪ್ರತಿಯನ್ನು ನಿಮ್ಮ ಅಭ್ಯಾಸದ ಪುಸ್ತಕದೊಂದಿಗೆ ಇಟ್ಟುಕೊಳ್ಳಲು ಮರೆಯದಿರಿ. ಈ ಶೆಡ್ಯೂಲ್, ಪ್ರತಿ ವಾರದ ಅಭ್ಯಾಸ ಅವಧಿಯಲ್ಲಿ ಆ ಪುಸ್ತಕದಿಂದ ಚರ್ಚಿಸಲ್ಪಡಲಿರುವ ಅಧ್ಯಾಯ ಮತ್ತು ಪ್ಯಾರಗ್ರಾಫ್ಗಳನ್ನು ಮಾತ್ರವಲ್ಲ, ದಾನಿಯೇಲ ಪುಸ್ತಕದ ವಚನಗಳನ್ನು ಸಹ ತೋರಿಸುತ್ತದೆ. ಪುಸ್ತಕದಲ್ಲಿರುವ ಕೆಲವು ವಿಷಯವನ್ನು ಹೇಗೆ ಮತ್ತು ಯಾವಾಗ ಪರಿಗಣಿಸಲಾಗುವುದು ಎಂಬುದನ್ನು ಪಾದಟಿಪ್ಪಣಿಗಳು ವಿವರಿಸುತ್ತವೆ. ಪ್ರತಿ ವಾರದ ಅಭ್ಯಾಸದ ಕೊನೆಯಲ್ಲಿ, ಶೆಡ್ಯೂಲ್ನಲ್ಲಿ ಆ ವಾರಕ್ಕಾಗಿ ಪಟ್ಟಿಮಾಡಲ್ಪಟ್ಟಿರುವ ದಾನಿಯೇಲ ಪುಸ್ತಕದ ನಿರ್ದಿಷ್ಟ ವಚನಗಳನ್ನು ತನ್ನ ಗುಂಪಿನೊಂದಿಗೆ ಪುನರ್ವಿಮರ್ಶಿಸುವಂತೆ ಅಭ್ಯಾಸ ಚಾಲಕನಿಗೆ ಪ್ರೋತ್ಸಾಹಿಸಲಾಗಿದೆ. ಸಮಯವು ಅನುಮತಿಸಿದಂತೆ, ಆ ವಚನಗಳನ್ನು ಓದಿಸಿ, ಹೇಳಿಕೆಗಳನ್ನು ಪಡೆಯಬಹುದು. ಕೆಲವೊಂದು ವಚನಗಳ ಅನ್ವಯದ ಚರ್ಚೆಯು ಒಂದಕ್ಕಿಂತ ಹೆಚ್ಚು ವಾರಗಳ ವರೆಗೆ ಮುಂದುವರಿಯುವುದು.
3 ಗಹನವಾದ ಅಭ್ಯಾಸಕ್ಕಾಗಿ ತಯಾರಿಮಾಡಿರಿ: ನೇಮಿತ ವಿಷಯವನ್ನು ತರಾತುರಿಯಿಲ್ಲದೆ ನಿಧಾನಗತಿಯಲ್ಲಿ ಚರ್ಚಿಸಲಿಕ್ಕಾಗಿ, ಪ್ರತಿ ವಾರ ಸಾಕಷ್ಟು ಸಮಯವನ್ನು ಕೊಡಲು ಪ್ರಯತ್ನಿಸಲಾಗಿದೆ. ನಾಲ್ಕು ಪಾಠಗಳು ಮಾತ್ರ ಸ್ವಲ್ಪ ಚಿಕ್ಕದಾಗಿವೆ. ಆದುದರಿಂದ, ಜೂನ್ 5ರ ವಾರಕ್ಕಾಗಿರುವ ಅಭ್ಯಾಸದ ಕೊನೆಯಲ್ಲಿ, ಅಭ್ಯಾಸ ಚಾಲಕನು ದಾನಿಯೇಲ 2:1-40ರ ಪುನರ್ವಿಮರ್ಶೆಯನ್ನು ಒಳಗೂಡಿಸಬಹುದು. ಜೂನ್ 26ರ ವಾರಕ್ಕಾಗಿ ಅವನು ದಾನಿಯೇಲ 3:1-30ನೆಯ ವಚನಗಳನ್ನು ಪುನರ್ವಿಮರ್ಶಿಸಬಹುದು. ಸೆಪ್ಟೆಂಬರ್ 4ರ ವಾರದಲ್ಲಿ, 139ನೆಯ ಪುಟದಲ್ಲಿರುವ ಚಿತ್ರಗಳು ಮತ್ತು ಶಾಸ್ತ್ರವಚನಗಳ ಸಮಗ್ರ ಚರ್ಚೆಯು ಒಳಗೂಡಿಸಲ್ಪಡತಕ್ಕದ್ದು. ಅಕ್ಟೋಬರ್ 2ನೆಯ ವಾರಕ್ಕಾಗಿರುವ ಅಭ್ಯಾಸದಲ್ಲಿ, 188 ಮತ್ತು 189ನೆಯ ಪುಟಗಳಲ್ಲಿರುವ ಚಾರ್ಟನ್ನು ಚರ್ಚಿಸತಕ್ಕದ್ದು.
4 ಪ್ರತಿ ವಾರ ಅಭ್ಯಾಸಕ್ಕಾಗಿ ಚೆನ್ನಾಗಿ ತಯಾರಿಮಾಡಿರಿ ಮತ್ತು ಅದರಲ್ಲಿ ಭಾಗವಹಿಸುವ ಮೂಲಕ ಆನಂದವನ್ನು ಪಡೆದುಕೊಳ್ಳಿರಿ. ಯೆಹೋವನ ದೃಶ್ಯ ಸಂಸ್ಥೆಯೊಂದಿಗೆ ಸಹವಾಸಿಸುವ ಮತ್ತು ಆತನ ನಂಬಿಗಸ್ತ ಅಭಿಷಿಕ್ತ ಜನರಿಂದ ಒದಗಿಸಲ್ಪಟ್ಟಿರುವ ಒಳನೋಟ ಹಾಗೂ ತಿಳುವಳಿಕೆಯಿಂದ ಪ್ರಯೋಜನವನ್ನು ಪಡೆದುಕೊಳ್ಳುವ ನಿಮ್ಮ ಸುಯೋಗವನ್ನು ಗಣ್ಯಮಾಡಿರಿ. (ದಾನಿ. 12:3, 4) ಈ ಪುಸ್ತಕಾಭ್ಯಾಸಕ್ಕೆ ಕ್ರಮವಾಗಿ ಹಾಜರಾಗುವಂತೆ ಇತರರನ್ನು ಪ್ರೀತಿಯಿಂದ ಉತ್ತೇಜಿಸಿರಿ. ದಾನಿಯೇಲನ ಭಯಭಕ್ತಿಪ್ರೇರಕ ಪುಸ್ತಕದಲ್ಲಿ ಪ್ರಕಟಿಸಲ್ಪಟ್ಟಿರುವ ದೇವರ ಪ್ರವಾದನ ವಾಕ್ಯಕ್ಕೆ ನಾವೆಲ್ಲರೂ ಲಕ್ಷ್ಯಕೊಡೋಣ.—ಇಬ್ರಿ. 10:23-25; 2 ಪೇತ್ರ 1:19.