ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
ಹೊಸ ಸೇವಾ ವರ್ಷಕ್ಕಾಗಿರುವ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದ ಮುಖ್ಯವಿಷಯಕ್ಕೆ ದೃಢವಾದ ಶಾಸ್ತ್ರೀಯ ಆಧಾರವಿದೆ: “ದೇವರಿಗೆ ಅಧೀನರಾಗಿರಿ—ಪಿಶಾಚನನ್ನು ವಿರೋಧಿಸಿರಿ.” (ಯಾಕೋ. 4:7, NW) ಈ ಪಂಥಾಹ್ವಾನದಾಯಕ ಸಮಯಗಳಿಗೆ ಇದು ಪರಿಣಾಮಕಾರಿಯಾದ ಮಾರ್ಗದರ್ಶನವಾಗಿದೆ! ದೇವರ ಆಜ್ಞೆಗಳಿಗೆ ನಾವು ವಿಧೇಯರಾಗುವುದರಿಂದ, ನಾವು ಸೈತಾನನನ್ನು ನೇರವಾಗಿ ಎದುರುಹಾಕಿಕೊಳ್ಳುತ್ತೇವೆ. ಸಮ್ಮೇಳನ ಕಾರ್ಯಕ್ರಮವು, ಪಿಶಾಚನು ಉಪಯೋಗಿಸುವ ನಂಬಿಕೆ-ವಿನಾಶಕ, ದುಷ್ಟ ತಂತ್ರಗಳ ವಿರುದ್ಧ ಹೇಗೆ ದೃಢವಾಗಿ ನಿಲ್ಲುವುದು ಎಂಬುದನ್ನು ನಮಗೆ ಬೋಧಿಸಲಿದೆ. ಈ ಸಮ್ಮೇಳನದಲ್ಲಿ ನಾವು ಪಡೆದುಕೊಳ್ಳಲಿರುವ ಕೆಲವು ಆತ್ಮಿಕ ರತ್ನಮಣಿಗಳು ಯಾವುವು?
ಸರ್ಕಿಟ್ ಮೇಲ್ವಿಚಾರಕನು, “ಕುಟುಂಬ ಸದಸ್ಯರೋಪಾದಿ ದೈವಿಕ ಅಧೀನತೆಯನ್ನು ತೋರಿಸುವುದು,” ಲೋಕದ ಒತ್ತಡಗಳನ್ನು ಎದುರಿಸುವಂತೆ ಕುಟುಂಬಗಳನ್ನು ಹೇಗೆ ಬಲಪಡಿಸುತ್ತದೆ ಎಂಬುದನ್ನು ತೋರಿಸುವನು. ಭೇಟಿ ನೀಡುವ ಭಾಷಣಕರ್ತನ, “ಪಿಶಾಚನನ್ನು ವಿರೋಧಿಸುವುದರ ಅರ್ಥ” ಎಂಬ ಆ ದಿನದ ಮೊದಲನೆಯ ಭಾಷಣವು, ನಮ್ಮ ಆತ್ಮಿಕತೆಯನ್ನು ವಿನಾಶಗೊಳಿಸುವ ಉದ್ದೇಶವುಳ್ಳ ಸೈತಾನನ ಗುರಿಗಳನ್ನು ಎದುರಿಸಲು ನಾವು ಏಕೆ ಮತ್ತು ಹೇಗೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ವಿವರಿಸುವುದು. ಪಿಶಾಚನ ಯೋಜನೆಗಳ ವಿಷಯದಲ್ಲಿ ಯುವ ಜನರೂ ಎಚ್ಚರಿಕೆ ವಹಿಸಬೇಕಾಗಿದೆ; ಅವರಿಗಾಗಿ ಎರಡು ವಿಶೇಷ ಭಾಗಗಳು ತಯಾರಿಸಲ್ಪಟ್ಟಿವೆ. ಈಗ ವಯಸ್ಕರಾಗಿರುವ ಅನೇಕ ಕ್ರೈಸ್ತರು, ತಾವು ಯುವ ಪ್ರಾಯದವರಾಗಿದ್ದಾಗ ಈ ಲೋಕದ ಆಸೆಗಳಿಗೆ ಮಣಿಯಲು ನಿರಾಕರಿಸಿದ್ದರು. ಅಂಥವರ ಕೆಲವು ಉದಾಹರಣೆಗಳನ್ನು ಕೇಳಿಸಿಕೊಳ್ಳುವುದರಲ್ಲಿ ನಾವು ಆನಂದಿಸುವೆವು.
ಮಾನವ ಸಮಾಜದ ಪ್ರತಿಯೊಬ್ಬ ಸದಸ್ಯನು ಅಧಿಕಾರಕ್ಕೆ ಅಧೀನತೆ ತೋರಿಸುವ ಹಂಗಿನಲ್ಲಿದ್ದಾನೆ. ಆದುದರಿಂದ, ಭೇಟಿನೀಡುವ ಭಾಷಣಕರ್ತನ ಸಮಾಪ್ತಿಯ ಭಾಷಣವು, ನಮ್ಮ ದೈವಿಕ ಅಧೀನತೆಯು ವ್ಯಕ್ತಪಡಿಸಲ್ಪಡಬೇಕಾದ ನಾಲ್ಕು ಕ್ಷೇತ್ರಗಳನ್ನು ಎತ್ತಿತೋರಿಸುವುದು: (1) ಸರಕಾರಗಳಿಗೆ, (2) ಸಭೆಯಲ್ಲಿ, (3) ಐಹಿಕ ವೃತ್ತಿಗಳಲ್ಲಿ, ಮತ್ತು (4) ಕುಟುಂಬ ವೃತ್ತದಲ್ಲಿ. ಎಷ್ಟು ಪ್ರಾಯೋಗಿಕವಾದ ಕಾರ್ಯಕ್ರಮ!
ಈ ವಿಶೇಷ ಸಮ್ಮೇಳನ ದಿನದಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಬಯಸುವವರು, ಇದರ ಕುರಿತು ಆದಷ್ಟು ಬೇಗನೆ ಅಧ್ಯಕ್ಷ ಮೇಲ್ವಿಚಾರಕನಿಗೆ ತಿಳಿಸಬೇಕು. ನಾವೆಲ್ಲರೂ ಕ್ಯಾಲೆಂಡರ್ನ ಮೇಲೆ ಇದರ ತಾರೀಖನ್ನು ಗುರುತಿಸಿಡಬೇಕು ಮತ್ತು ಇಡೀ ಸಮ್ಮೇಳನದ ಕಾರ್ಯಕ್ರಮಕ್ಕೆ ಹಾಜರಿರಲು ಯೋಜಿಸಬೇಕು. ನಾವು ಯೆಹೋವನಿಗೆ ನಮ್ಮನ್ನೇ ನಿತ್ಯಕ್ಕೂ ಅಧೀನಪಡಿಸಿಕೊಳ್ಳುವಾಗ, ನಾವು ಪಡೆದುಕೊಳ್ಳುವಂಥ ಆಶೀರ್ವಾದಗಳು ಸಹ ನಿತ್ಯವಾಗಿರುವವು.