ಪ್ರಶ್ನಾ ಚೌಕ
◼ ಟೆಲಿಫೋನಿನ ಮೂಲಕ ಸಾಕ್ಷಿನೀಡುತ್ತಿರುವಾಗ, ದಾನದ ಏರ್ಪಾಡಿನ ಕುರಿತು ನಾವು ವಿವರಿಸಬೇಕೋ?
ನಾವು ಮುಖಾಮುಖಿಯಾಗಿ ಸಾಕ್ಷಿಕೊಡುತ್ತಿರುವಾಗ, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಬೈಬಲ್ ಶೈಕ್ಷಣಿಕ ಕಾರ್ಯವು ಸಂಪೂರ್ಣವಾಗಿ ಸ್ವಯಂಪ್ರೇರಿತ ದಾನಗಳಿಂದ ಬೆಂಬಲಿಸಲ್ಪಡುತ್ತದೆ ಮತ್ತು ನಾವು ಅಂಥ ದಾನಗಳನ್ನು ಸ್ವೀಕರಿಸಲು ಸಂತೋಷಿಸುತ್ತೇವೆ ಎಂದು ವಿವರಿಸಲು ಸಾಧ್ಯವಿರಬಹುದು. ಆದರೆ, ಟೆಲಿಫೋನ್ ಮೂಲಕ ಸಾಕ್ಷಿನೀಡುತ್ತಿರುವಾಗ, ದಾನಗಳ ಕುರಿತು ಅಥವಾ ದಾನದ ಏರ್ಪಾಡಿನ ಕುರಿತು ಏನನ್ನೂ ಹೇಳಬಾರದಾಗಿದೆ. ಏಕೆಂದರೆ ಇದು ಟೆಲಿಫೋನ್‌ನಲ್ಲಿ ಹಣಕ್ಕಾಗಿ ಮನವಿ ಮಾಡುವಂಥ ಒಂದು ವಿಧವಾಗಿದೆಯೆಂದು ಜನರು ಅಪಾರ್ಥಮಾಡಿಕೊಳ್ಳಸಾಧ್ಯವಿದೆ. ಯೆಹೋವನ ಸಾಕ್ಷಿಗಳ ಶುಶ್ರೂಷೆಯು ಪೂರ್ಣ ರೀತಿಯಲ್ಲಿ ವಾಣಿಜ್ಯರಹಿತವಾದದ್ದಾಗಿದೆ.—2 ಕೊರಿಂ. 2:17.
◼ ಟೆಲಿಫೋನಿನ ಮೂಲಕ ಸಾಕ್ಷಿನೀಡುತ್ತಿರುವಾಗ, ಯೆಹೋವನ ಸಾಕ್ಷಿಗಳು ಪುನಃ ಕರೆಮಾಡಬಾರದೆಂದು ವ್ಯಕ್ತಿಯೊಬ್ಬನು ಕೇಳಿಕೊಳ್ಳುವಲ್ಲಿ ನಾವೇನು ಮಾಡಬೇಕು?
ಆ ವ್ಯಕ್ತಿಯ ಇಷ್ಟಾನಿಷ್ಟಗಳನ್ನು ಗೌರವಿಸಬೇಕಾಗಿದೆ. ಟೆರಿಟೊರಿ ಲಕೋಟೆಯ ಮೇಲೆ ಆಯಾ ವ್ಯಕ್ತಿಯ ಹೆಸರಿನೊಂದಿಗೆ ತಾರೀಖು ಇರುವ ಒಂದು ಗುರುತನ್ನು ಇರಿಸತಕ್ಕದ್ದು. ಹೀಗೆ ಮಾಡುವಲ್ಲಿ ಭವಿಷ್ಯತ್ತಿನಲ್ಲಿ ಪ್ರಚಾರಕರು ಆ ಸಂಖ್ಯೆಗೆ ಕರೆಮಾಡುವುದರಿಂದ ದೂರವಿರುವರು. ನಮಗೆ ಕರೆಮಾಡಬಾರದು ಎಂದು ಕೇಳಿಕೊಂಡಿರುವ ಜನರ ಪಟ್ಟಿಯನ್ನು ವರ್ಷಕ್ಕೆ ಒಮ್ಮೆ ಮರುಪರಿಶೀಲಿಸತಕ್ಕದ್ದು. ಸೇವಾ ಮೇಲ್ವಿಚಾರಕನ ಮಾರ್ಗದರ್ಶನದ ಕೆಳಗೆ, ಸದ್ಯಕ್ಕೆ ಈ ಜನರಿಗೆ ಯಾವ ಅಭಿಪ್ರಾಯಗಳಿವೆ ಎಂಬುದನ್ನು ನಿರ್ಧರಿಸಲಿಕ್ಕಾಗಿ, ಅನುಭವಸ್ಥರಾದ, ಜಾಣ್ಮೆಯುಳ್ಳ ಪ್ರಚಾರಕರು ಇವರನ್ನು ಸಂಪರ್ಕಿಸುವಂತೆ ನೇಮಿಸಲ್ಪಡಸಾಧ್ಯವಿದೆ.—1998ರ ಮೇ ತಿಂಗಳ ನಮ್ಮ ರಾಜ್ಯದ ಸೇವೆಯ ಪ್ರಶ್ನಾ ಚೌಕವನ್ನು ನೋಡಿರಿ.