ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/04 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2004 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಿಷ್ಕೃಷ್ಟವಾದ ಸಮಯ ಸಾಂಗತ್ಯ, ಉಚಿತ ಪ್ರಮಾಣದಲ್ಲಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಕೂಟಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿರಿ ಮತ್ತು ಮುಗಿಸಿರಿ
    1991 ನಮ್ಮ ರಾಜ್ಯದ ಸೇವೆ
  • ಸೇವಾ ಕೂಟಕ್ಕೆ ತಯಾರಿಸುವ ವಿಧ
    2009 ನಮ್ಮ ರಾಜ್ಯದ ಸೇವೆ
  • ಸೇವಾ ಕೂಟದ ಭಾಗಗಳನ್ನು ನಡೆಸುವವರಿಗೆ ಸೂಚನೆಗಳು
    2010 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2004 ನಮ್ಮ ರಾಜ್ಯದ ಸೇವೆ
km 1/04 ಪು. 3

ಪ್ರಶ್ನಾ ಚೌಕ

◼ ಸಭಾ ಕೂಟದ ಪ್ರತಿಯೊಂದು ಭಾಗವು ಅದರ ನಿಶ್ಚಿತ ಸಮಯಕ್ಕೆ ಕೊನೆಗೊಳ್ಳುತ್ತದೆ ಎಂಬುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು?

ನಾವು ನಮ್ಮ ಸ್ನೇಹಿತರೊಂದಿಗೆ ಒಳ್ಳೆಯದೊಂದು ವಿಷಯವನ್ನು ಹಂಚಿಕೊಳ್ಳುತ್ತಿರುವಾಗ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಇದೇ ಕಾರಣದಿಂದಾಗಿ, ಕೂಟದ ಭಾಗಗಳನ್ನು ಅದರ ನಿರ್ದೇಶಿತ ಸಮಯದೊಳಗೆ ನಿರ್ವಹಿಸುವುದು ಒಂದು ಪಂಥಾಹ್ವಾನವಾಗಿರಬಹುದು. ಹಾಗಾದರೆ ಈ ವಿಷಯದಲ್ಲಿ ನಮಗೆ ಯಾವುದು ಸಹಾಯಮಾಡಬಲ್ಲದು?

ಸರಿಯಾದ ಸಮಯಕ್ಕೆ ಆರಂಭಿಸಿರಿ. ಇಡೀ ಸಭೆಯು ಕೂಡಿಬಂದಾಗ, ಕಾರ್ಯಕ್ರಮವು ಆರಂಭಿಸುವುದಕ್ಕೆ ಒಂದು ಅಥವಾ ಎರಡು ನಿಮಿಷಗಳಿಗೆ ಮುಂಚೆ ಎಲ್ಲರೂ ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಆಮಂತ್ರಿಸುವುದು ಸಹಾಯಕರವಾಗಿರಬಹುದು. ಹೀಗೆ ಕೂಟವನ್ನು ನಿಶ್ಚಯಿಸಲ್ಪಟ್ಟ ಸಮಯಕ್ಕೇ ಕ್ರಮಬದ್ಧ ರೀತಿಯಲ್ಲಿ ಆರಂಭಿಸಲು ಸಾಧ್ಯವಾಗುವುದು. (ಪ್ರಸಂ. 3:1) ಕ್ಷೇತ್ರ ಸೇವೆಗಾಗಿರುವ ಕೂಟಗಳಂಥ ಚಿಕ್ಕ ಗುಂಪಿನ ಕೂಟಗಳು, ತಡವಾಗಿ ಬರಬಹುದಾದವರಿಗಾಗಿ ತಡವಾಗಿ ಆರಂಭಿಸಲ್ಪಡಬಾರದು.

ಪೂರ್ಣವಾಗಿ ತಯಾರಿಸಿರಿ. ಒಳ್ಳೆಯ ಸಮಯಪಾಲನೆಗಾಗಿರುವ ಒಂದು ಕೀಲಿ ಕೈ ಮುನ್‌ತಯಾರಿಯಾಗಿದೆ. ನೇಮಕದ ಉದ್ದೇಶವು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ಬೇರೂರುವಂತೆ ಮಾಡಿರಿ. ಮುಖ್ಯಾಂಶಗಳನ್ನು ಗುರುತಿಸಿಕೊಳ್ಳಿ, ಮತ್ತು ಅವುಗಳನ್ನು ಎದ್ದುಕಾಣುವಂತೆ ಮಾಡಿರಿ. ಅಪ್ರಧಾನ ವಿಷಯಗಳಿಂದ ದಾರಿತಪ್ಪಿಹೋಗುವುದನ್ನು ತ್ಯಜಿಸಿರಿ. ನಿರೂಪಣೆಯನ್ನು ಸರಳವಾಗಿಡಿರಿ. ನಿಮ್ಮ ಭಾಗದಲ್ಲಿ ಪ್ರತ್ಯಕ್ಷಾಭಿನಯಗಳು ಅಥವಾ ಇಂಟರ್‌ವ್ಯೂಗಳಿರುವುದಾದರೆ, ಅವುಗಳನ್ನು ಮುಂಚಿತವಾಗಿಯೇ ಪೂರ್ವಾಭಿನಯಿಸಿರಿ. ಸಾಧ್ಯವಿರುವಷ್ಟು ಮಟ್ಟಿಗೆ, ನಿಮ್ಮ ಭಾಷಣವನ್ನು ಗಟ್ಟಿಸ್ವರದಲ್ಲಿ ಅಭ್ಯಾಸಿಸುವಾಗ ಅದು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಗಮನಿಸಿರಿ.

ನಿಮ್ಮ ವಿಷಯಭಾಗವನ್ನು ವಿಭಾಗಿಸಿರಿ. ನಿಮ್ಮ ನೇಮಕವು ಒಂದು ಭಾಷಣವಾಗಿರಲಿ ಅಥವಾ ಸಭಿಕರೊಂದಿಗಿನ ಚರ್ಚೆಯಾಗಿರಲಿ, ವಿಷಯಭಾಗವನ್ನು ವಿಭಾಗಗಳಾಗಿ ಬೇರ್ಪಡಿಸುವುದು ಸಹಾಯಕರವಾಗಿರುವುದನ್ನು ನೀವು ಕಂಡುಕೊಳ್ಳುವಿರಿ. ಪ್ರತಿಯೊಂದು ವಿಭಾಗಕ್ಕೆ ಎಷ್ಟು ಸಮಯವನ್ನು ವ್ಯಯಿಸುವುದು ಎಂಬುದನ್ನು ನಿರ್ಧರಿಸಿರಿ, ಮತ್ತು ಅದನ್ನು ನಿಮ್ಮ ಟಿಪ್ಪಣಿಗಳ ಪಕ್ಕದ ಅಂಚಿನಲ್ಲಿ ಗುರುತಿಸಿರಿ. ನಂತರ ನಿಮ್ಮ ಭಾಷಣದ ಸಮಯದಲ್ಲಿ ನಿಮ್ಮ ಸಮಯದ ಮೇಲೆ ನಿಗಾ ಇಡಿರಿ. ಸಭಿಕರೊಂದಿಗಿನ ಚರ್ಚೆಯಲ್ಲಿ, ಪೀಠಿಕಾ ಭಾಗದಲ್ಲೇ ಹೆಚ್ಚು ಹೇಳಿಕೆಗಳಿಗೆ ಆಸ್ಪದ ಕೊಡಬೇಡಿರಿ, ಏಕೆಂದರೆ ವಿಷಯಭಾಗದಲ್ಲಿ ನಂತರ ಬರುವ ಪ್ರಾಮುಖ್ಯವಾದ ವಿಷಯಗಳನ್ನು ಅವಸರವಸರದಿಂದ ಆವರಿಸಬೇಕಾದೀತು. ಕಾವಲಿನಬುರುಜು ಅಧ್ಯಯನವನ್ನು ನಡೆಸುವವರು, ಕೊನೆಯಲ್ಲಿರುವ ಪುನರ್ವಿಮರ್ಶಾ ಚೌಕವನ್ನು ಪರಿಗಣಿಸಲಿಕ್ಕಾಗಿ ಸಾಕಷ್ಟು ಸಮಯವನ್ನು ಅನುಮತಿಸಬೇಕು. ಮಾತ್ರವಲ್ಲದೆ, ಸಮಾಪ್ತಿಯ ಗೀತೆ ಮತ್ತು ಪ್ರಾರ್ಥನೆಗಾಗಿ ಬದಿಗಿರಿಸಲ್ಪಟ್ಟಿರುವ ಸಮಯವನ್ನು ಅತಿಕ್ರಮಿಸುವ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು.

ಸರಿಯಾದ ಸಮಯಕ್ಕೆ ಮುಗಿಸಿರಿ. ಒಂದುವೇಳೆ ಕೂಟದಲ್ಲಿ ಸೇವಾ ಕೂಟದಲ್ಲಿರುವಂತೆ ಅನೇಕ ಭಾಗಗಳಿರುವುದಾದರೆ, ತನ್ನ ಭಾಗವು ಯಾವಾಗ ಆರಂಭವಾಗುತ್ತದೆ ಮತ್ತು ಮುಗಿಯುತ್ತದೆ ಎಂಬುದು ಪ್ರತಿಯೊಬ್ಬ ಭಾಷಣಕರ್ತನಿಗೆ ತಿಳಿದಿರಬೇಕು. ಒಂದುವೇಳೆ ಕೂಟವು ಸಮಯ ಮೀರಿ ಹೋಗುವಂತೆ ತೋರುವುದಾದರೆ ಏನು ಮಾಡಬಹುದು? ಬೇರೆ ಭಾಗಗಳನ್ನು ನಿರ್ವಹಿಸುತ್ತಿರುವ ಒಬ್ಬರು ಅಥವಾ ಇಬ್ಬರು ಸಹೋದರರು, ಮುಖ್ಯಾಂಶಗಳ ಮೇಲೆ ಕೇಂದ್ರೀಕರಿಸುತ್ತಾ ಕೆಲವು ಪ್ರಾಮುಖ್ಯವಲ್ಲದ ವಿಚಾರಗಳನ್ನು ಬಿಟ್ಟುಬಿಡುವ ಮೂಲಕ ಸಮಯವನ್ನು ಸರಿದೂಗಿಸಬಲ್ಲರು. ಹೀಗೆ ಮಾಡಲು ಶಕ್ತರಾಗಿರುವುದು ಒಬ್ಬ ನುರಿತ ಬೋಧಕನ ಗುರುತುಲಕ್ಷಣಗಳಲ್ಲಿ ಒಂದಾಗಿದೆ.

ಸಭಿಕರಾಗಿರುವ ನಾವು, ನಮ್ಮ ಅಭಿವ್ಯಕ್ತಿಗಳನ್ನು ಸಂಕ್ಷಿಪ್ತವಾಗಿಯೂ ಸುಸಂಗತವಾಗಿಯೂ ಇಡುವ ಮೂಲಕ ಒಂದು ಭಾಗವನ್ನು ನಿರ್ವಹಿಸುತ್ತಿರುವ ಸಹೋದರನಿಗೆ ನೆರವು ನೀಡಬಲ್ಲೆವು. ಹೀಗೆ, ಕೂಟಗಳನ್ನು “ಮರ್ಯಾದೆಯಿಂದಲೂ ಕ್ರಮದಿಂದಲೂ” ನಡೆಸಲು ನಾವೆಲ್ಲರೂ ಸಹಾಯಮಾಡಬಲ್ಲೆವು.​—⁠1 ಕೊರಿಂ. 14:⁠40.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ