“ವಿಶಾಲಮಾಡಿಕೊಳ್ಳಿರಿ”
1. ನಮ್ಮಲ್ಲಿ ಪ್ರತಿಯೊಬ್ಬರಿಗೂ ಯಾವ ಜವಾಬ್ದಾರಿಯಿದೆ?
1 ಕ್ರೈಸ್ತ ಸಹೋದರತ್ವದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಭೆಯ ಬೆಚ್ಚಗಿನ ಭಾವಕ್ಕೆ ಕೂಡಿಸುವ ಜವಾಬ್ದಾರಿಯಿದೆ. (1 ಪೇತ್ರ 1:22; 2:17) ನಾವು ಪರಸ್ಪರರಿಗಾಗಿರುವ ಕೋಮಲ ಭಾವನೆಗಳಲ್ಲಿ ‘ವಿಶಾಲಗೊಳ್ಳುವಾಗ’ ಇಂತಹ ಬೆಚ್ಚಗಿನ ಭಾವವು ಉಂಟಾಗುತ್ತದೆ. (2 ಕೊರಿಂ. 6:12, 13) ನಾವು ನಮ್ಮ ಸಹೋದರ ಸಹೋದರಿಯರ ಒಳ್ಳೆಯ ಪರಿಚಯವನ್ನು ಮಾಡಿಕೊಳ್ಳುವುದು ಏಕೆ ಪ್ರಾಮುಖ್ಯ?
2. ಜೊತೆ ವಿಶ್ವಾಸಿಗಳೊಂದಿಗೆ ಮಿತ್ರತ್ವಗಳನ್ನು ಬೆಳೆಸಿಕೊಳ್ಳುವುದು ಏಕೆ ಪ್ರಾಮುಖ್ಯ?
2 ಮಿತ್ರತ್ವಗಳು ಹೆಚ್ಚು ಬಲಗೊಳ್ಳುತ್ತವೆ: ಜೊತೆ ವಿಶ್ವಾಸಿಗಳೊಂದಿಗೆ ಹೆಚ್ಚು ಪರಿಚಿತರಾಗುವಾಗ ನಾವು ಅವರ ನಂಬಿಕೆ, ತಾಳ್ಮೆ, ಮತ್ತು ಇತರ ಉತ್ತಮ ಗುಣಗಳ ಕುರಿತು ಹೆಚ್ಚು ಪೂರ್ಣವಾಗಿ ಮಾನ್ಯಮಾಡಲಾರಂಭಿಸುತ್ತೇವೆ. ಅವರ ಕುಂದುಕೊರತೆಗಳು ಚಿಕ್ಕದಾಗಿ ತೋರುತ್ತವೆ, ಮತ್ತು ಸ್ನೇಹಸಂಬಂಧಗಳು ಬೆಳೆಯುತ್ತವೆ. ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದಿರುವಾಗ ನಾವು ಪರಸ್ಪರ ಭಕ್ತಿವೃದ್ಧಿಮಾಡಲು ಮತ್ತು ಸಾಂತ್ವನ ನೀಡಲು ಉತ್ತಮ ಸ್ಥಾನದಲ್ಲಿರುತ್ತೇವೆ. (1 ಥೆಸ. 5:11) ಸೈತಾನನ ಲೋಕದ ಅಹಿತಕರ ಪ್ರಭಾವಗಳನ್ನು ಪ್ರತಿಭಟಿಸುವುದರಲ್ಲಿ ಒಬ್ಬರಿಗೊಬ್ಬರು “ಬಲವರ್ಧಕ ಸಹಾಯಕಗಳು” ಆಗುವೆವು. (ಕೊಲೊ. 4:11, NW) ನಾವು ಈ ಒತ್ತಡಭರಿತ ಕಡೇ ದಿವಸಗಳಲ್ಲಿ ಜೀವಿಸುತ್ತಿರುವಾಗ, ಯೆಹೋವನ ಜನರ ಮಧ್ಯೆ ಒಳ್ಳೆಯ ಸ್ನೇಹಿತರನ್ನು ಹೊಂದಿರುವುದಕ್ಕಾಗಿ ಎಷ್ಟು ಕೃತಜ್ಞರಾಗಿದ್ದೇವೆ!—ಜ್ಞಾನೋ. 18:24.
3. ನಾವು ಇತರರಿಗೆ ಹೇಗೆ ಒಂದು ಬಲವರ್ಧಕ ಸಹಾಯಕವಾಗಿರಬಲ್ಲೆವು?
3 ನಾವು ಕಠಿಣವಾದ ಶೋಧನೆಗಳನ್ನು ಎದುರಿಸುವಾಗ ಆಪ್ತ ಸ್ನೇಹಿತರು ನಮಗೆ ವಿಶೇಷ ರೀತಿಯ ಬಲ ಮತ್ತು ಸಾಂತ್ವಾನದ ಮೂಲವಾಗಿರಬಲ್ಲರು. (ಜ್ಞಾನೋ. 17:17) ಅನರ್ಹತೆಯ ಭಾವನೆಗಳೊಂದಿಗೆ ಹೋರಾಡುತ್ತಿದ್ದ ಒಬ್ಬ ಕ್ರೈಸ್ತ ಸಹೋದರಿಯು ನೆನಪಿಸಿಕೊಳ್ಳುವುದು: “ನನ್ನ ನಕಾರಾತ್ಮಕ ಆಲೋಚನೆಗಳನ್ನು ಹೋಗಲಾಡಿಸಲು ನನಗೆ ಸಹಾಯಮಾಡಲಿಕ್ಕಾಗಿ ನನ್ನ ಕುರಿತು ಸಕಾರಾತ್ಮಕ ವಿಷಯಗಳನ್ನು ತಿಳಿಸುತ್ತಿದ್ದ ಸ್ನೇಹಿತರು ಇದ್ದರು.” ಇಂತಹ ಸ್ನೇಹಿತರು ಯೆಹೋವನಿಂದ ಬರುವ ಆಶೀರ್ವಾದವಾಗಿದ್ದಾರೆ.—ಜ್ಞಾನೋ. 27:9.
4. ನಾವು ಸಭೆಯಲ್ಲಿರುವ ಇತರರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವುದು ಹೇಗೆ?
4 ಇತರರಲ್ಲಿ ಆಸಕ್ತಿಯನ್ನು ತೋರಿಸಿರಿ: ನಾವು ಜೊತೆ ವಿಶ್ವಾಸಿಗಳಿಗಾಗಿರುವ ಕೋಮಲ ಭಾವನೆಗಳಲ್ಲಿ ಹೇಗೆ ವಿಶಾಲಗೊಳ್ಳಬಲ್ಲೆವು? ಕ್ರೈಸ್ತ ಕೂಟಗಳಲ್ಲಿ ಇತರರನ್ನು ವಂದಿಸುವುದರೊಂದಿಗೆ, ಅವರನ್ನು ಅರ್ಥಭರಿತ ಸಂಭಾಷಣೆಯಲ್ಲಿ ತೊಡಗಿಸಲು ಪ್ರಯತ್ನಿಸಿ. ಅವರ ವೈಯಕ್ತಿಕ ವಿಷಯಗಳಲ್ಲಿ ತಲೆಹಾಕಲು ಪ್ರಯತ್ನಿಸುವ ಬದಲು ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ. (ಫಿಲಿ. 2:4; 1 ಪೇತ್ರ 4:15) ಇತರರಲ್ಲಿ ಆಸಕ್ತಿ ತೋರಿಸಬಹುದಾದ ಮತ್ತೊಂದು ವಿಧವು ಅವರನ್ನು ಒಂದು ಊಟಕ್ಕಾಗಿ ಆಮಂತ್ರಿಸುವ ಮೂಲಕವಾಗಿಯೇ ಆಗಿದೆ. (ಲೂಕ 14:12-14) ಅಥವಾ ಕ್ಷೇತ್ರ ಶುಶ್ರೂಷೆಯಲ್ಲಿ ಅವರೊಂದಿಗೆ ಕೆಲಸಮಾಡಲು ನೀವು ಏರ್ಪಾಡು ಮಾಡಬಹುದು. (ಲೂಕ 10:1) ನಾವು ನಮ್ಮ ಸಹೋದರರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವಾಗ ಸಭೆಯಲ್ಲಿ ಐಕ್ಯವನ್ನು ಪ್ರವರ್ಧಿಸುತ್ತೇವೆ.—ಕೊಲೊ. 3:14.
5. ಮಿತ್ರತ್ವಗಳನ್ನು ವಿಸ್ತರಿಸುವ ಒಂದು ವಿಧ ಯಾವುದು?
5 ನಮ್ಮ ವಯಸ್ಸಿನವರು ಅಥವಾ ನಮ್ಮಂಥದ್ದೇ ಅಭಿರುಚಿಗಳನ್ನು ಹೊಂದಿರುವವರನ್ನು ಮಾತ್ರ ನಾವು ಆಪ್ತ ಒಡನಾಡಿಗಳಾಗಿ ಆಯ್ಕೆಮಾಡುವ ಪ್ರವೃತ್ತಿಯುಳ್ಳವರಾಗಿದ್ದೇವೋ? ಇಂತಹ ಅಂಶಗಳು ನಾವು ಸಭೆಯಲ್ಲಿ ಬೆಳೆಸಿಕೊಳ್ಳುವ ಸ್ನೇಹಸಂಬಂಧಗಳನ್ನು ಸೀಮಿತಗೊಳಿಸಬಾರದು. ದಾವೀದ ಯೋನಾತಾನರು ಮತ್ತು ರೂತ್ ನೊವೊಮಿಯು ಸಹ ವಯಸ್ಸು ಹಾಗೂ ಹಿನ್ನೆಲೆಗಳಲ್ಲಿ ವ್ಯತ್ಯಾಸಗಳಿದ್ದರೂ ಬಲವಾದ ಸ್ನೇಹಸಂಬಂಧಗಳನ್ನು ಬೆಸೆದರು. (ರೂತ. 4:15; 1 ಸಮು. 18:1) ನೀವು ನಿಮ್ಮ ಮಿತ್ರತ್ವಗಳನ್ನು ವಿಸ್ತರಿಸಬಲ್ಲಿರೋ? ಹೀಗೆ ಮಾಡುವುದು ಮುಂಗಾಣದ ಆಶೀರ್ವಾದಗಳನ್ನು ತರುವುದು.
6 ನಾವು ಇತರರಿಗಾಗಿರುವ ಕೋಮಲ ಭಾವನೆಗಳಲ್ಲಿ ವಿಶಾಲಗೊಳ್ಳುವಾಗ, ಒಬ್ಬರನ್ನೊಬ್ಬರು ಬಲಗೊಳಿಸುತ್ತೇವೆ ಮತ್ತು ಸಭೆಯಲ್ಲಿ ಶಾಂತಿಯನ್ನು ಪ್ರವರ್ಧಿಸುತ್ತೇವೆ. ಮಾತ್ರವಲ್ಲದೆ, ನಾವು ನಮ್ಮ ಸಹೋದರರಿಗಾಗಿ ತೋರಿಸುವ ಪ್ರೀತಿಗಾಗಿ ಯೆಹೋವನೇ ನಮ್ಮನ್ನು ಆಶೀರ್ವದಿಸುವನು. (ಕೀರ್ತ. 41:1, 2; ಇಬ್ರಿ. 6:10) ಸಾಧ್ಯವಾದಷ್ಟು ಹೆಚ್ಚು ಸಹೋದರರೊಂದಿಗೆ ಸುಪರಿಚಿತರಾಗುವುದನ್ನು ಏಕೆ ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಬಾರದು?
6. ನಮ್ಮ ಸಹೋದರರಿಗಾಗಿರುವ ಕೋಮಲ ಭಾವನೆಗಳಲ್ಲಿ ವಿಶಾಲಗೊಳ್ಳುವುದರಿಂದ ಬರುವ ಕೆಲವು ಪ್ರಯೋಜನಗಳಾವುವು?