ನಿಮ್ಮ ಸಹಾಯವು ಬೇಕಾಗಿದೆ
1 “ನೀವು ನಮಗೋಸ್ಕರ ಮಾಡುವ ಎಲ್ಲಾ ವಿಷಯಗಳಿಗಾಗಿ ನಿಮಗೆ ತುಂಬ ಉಪಕಾರ. ನಿಮ್ಮ ಎಲ್ಲಾ ಪ್ರಯತ್ನಗಳು ನಮಗೆ ತುಂಬ ಪ್ರಯೋಜನಗಳನ್ನು ತರುತ್ತವೆ.” ಈ ಹೇಳಿಕೆಯು, ನಮ್ಮ ಹಿರಿಯರು ಮತ್ತು ಶುಶ್ರೂಷಾ ಸೇವಕರಿಗೆ ನಾವು ವ್ಯಕ್ತಪಡಿಸಲು ಬಯಸುವ ಕೃತಜ್ಞತೆಯನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತದೆ. ದೇವರ ಸಂಘಟನೆಯು ಬೆಳೆಯುತ್ತಾ ಮುಂದುವರಿಯುವಾಗ, ಲೋಕವ್ಯಾಪಕವಾಗಿರುವ ಸುಮಾರು 1,00,000 ಸಭೆಗಳಲ್ಲಿ ಸೇವೆಮಾಡಲಿಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೌಢ ಪುರುಷರ ಅಗತ್ಯವಿರುತ್ತದೆ. ನೀವು ಒಬ್ಬ ಸ್ನಾತ ಸಹೋದರನಾಗಿರುವಲ್ಲಿ, ನಿಮ್ಮ ಸಹಾಯವು ಬೇಕಾಗಿದೆ.
2 ಸೇವಾ ಸುಯೋಗಗಳನ್ನು ‘ಪಡಕೊಳ್ಳಲು ಅಪೇಕ್ಷಿಸುವುದು’: ನೀವು ಹೆಚ್ಚಿನ ಸೇವಾ ಸುಯೋಗಗಳನ್ನು ಹೇಗೆ ಪಡಕೊಳ್ಳಬಹುದು? (1 ತಿಮೊ. 3:1) ವಾಸ್ತವದಲ್ಲಿ, ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಮಾದರಿಯನ್ನಿಡುವ ಮೂಲಕವೇ. (1 ತಿಮೊ. 4:12; ತೀತ 2:6-8; 1 ಪೇತ್ರ 5:3) ಸಾರುವ ಕೆಲಸದಲ್ಲಿ ಸಂಪೂರ್ಣವಾಗಿ ಭಾಗವಹಿಸಿರಿ, ಮತ್ತು ಹಾಗೆ ಮಾಡುವಂತೆ ಇತರರಿಗೂ ನೆರವು ನೀಡಿರಿ. (2 ತಿಮೊ. 4:5) ಜೊತೆವಿಶ್ವಾಸಿಗಳ ಹಿತಕ್ಷೇಮದಲ್ಲಿ ಪ್ರಾಮಾಣಿಕ ಆಸಕ್ತಿಯನ್ನು ತೋರಿಸಿರಿ. (ರೋಮಾ. 12:13) ದೇವರ ವಾಕ್ಯದ ಒಳ್ಳೆಯ ವಿದ್ಯಾರ್ಥಿಯಾಗಿರಿ, ಮತ್ತು “ಬೋಧಿಸುವ ಕಲೆಯನ್ನು” ಬೆಳೆಸಿಕೊಳ್ಳಿರಿ. (ತೀತ 1:9; 1 ತಿಮೊ. 4:13, NW) ಹಿರಿಯರಿಂದ ಒಪ್ಪಿಸಲ್ಪಟ್ಟಿರುವ ನೇಮಕಗಳನ್ನು ಶ್ರದ್ಧೆಯಿಂದ ಪೂರೈಸಿರಿ. (1 ತಿಮೊ. 3:10) ನೀವು ಕುಟುಂಬದ ತಲೆಯಾಗಿರುವುದಾದರೆ, ‘ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವರಾಗಿರಿ.’—1 ತಿಮೊ. 3:4, 5, 12.
3 ಒಂದು ನೇಮಿತ ಸ್ಥಾನದಲ್ಲಿದ್ದು ಸೇವೆಸಲ್ಲಿಸುವುದರಲ್ಲಿ ಶ್ರಮದ ಕೆಲಸ ಒಳಗೂಡಿದೆ ಮತ್ತು ಇದು ಸ್ವತ್ಯಾಗದ ಆತ್ಮವನ್ನು ಅವಶ್ಯಪಡಿಸುತ್ತದೆ. (1 ತಿಮೊ. 5:17) ಆದುದರಿಂದ, ನೀವು ಸುಯೋಗವನ್ನು ಪಡಕೊಳ್ಳಲು ಅಪೇಕ್ಷಿಸುವುದಾದರೆ ಇತರರಿಗೆ ದೀನತೆಯಿಂದ ಸೇವೆಸಲ್ಲಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. (ಮತ್ತಾ. 20:25-28; ಯೋಹಾ. 13:3-5, 12-17) ತಿಮೊಥೆಯನ ಸ್ವಭಾವದ ಕುರಿತು ಧ್ಯಾನಿಸಿರಿ, ಮತ್ತು ಅದನ್ನು ಅನುಕರಿಸಲು ಪ್ರಯತ್ನಿಸಿರಿ. (ಫಿಲಿ. 2:20-22) ಅವನಂತೆ, ನಿಮ್ಮ ಒಳ್ಳೆಯ ನಡತೆಯು ನಿಮ್ಮನ್ನು ಶಿಫಾರಸ್ಸು ಮಾಡುವಂತೆ ಬಿಡಿರಿ. (ಅ. ಕೃ. 16:1, 2) ಹೆಚ್ಚಿನ ಸುಯೋಗಗಳನ್ನು ನಿರ್ವಹಿಸಲು ಬೇಕಾಗಿರುವ ಆಧ್ಯಾತ್ಮಿಕ ಗುಣಗಳನ್ನು ನೀವು ಬೆಳೆಸಿಕೊಳ್ಳುವುದಾದರೆ ಮತ್ತು ನಿಮ್ಮ ಪ್ರಗತಿಗಾಗಿ ಇತರರು ಕೊಡುವ ಯಾವುದೇ ಬುದ್ಧಿವಾದವನ್ನು ಅಳವಡಿಸಿಕೊಳ್ಳುವುದಾದರೆ, “[ನಿಮ್ಮ] ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.”—1 ತಿಮೊ. 4:15.
4 ಹೆತ್ತವರೇ, ಸಹಾಯಮಾಡುವಂತೆ ಮಕ್ಕಳನ್ನು ತರಬೇತುಗೊಳಿಸಿರಿ: ಸಹಾಯಮಾಡುವುದು ಹೇಗೆ ಎಂಬುದನ್ನು ಮಕ್ಕಳು ಚಿಕ್ಕ ಪ್ರಾಯದಿಂದಲೇ ಕಲಿಯಬಲ್ಲರು. ಕೂಟಗಳಲ್ಲಿ ಗಮನಕೊಡುವಂತೆ, ಸಾರುವಂತೆ ಮತ್ತು ರಾಜ್ಯ ಸಭಾಗೃಹದಲ್ಲಿ ಹಾಗೂ ಶಾಲೆಯಲ್ಲಿ ಆದರ್ಶಪ್ರಾಯ ನಡತೆಯನ್ನು ತೋರಿಸುವಂತೆ ಅವರನ್ನು ತರಬೇತುಗೊಳಿಸಿರಿ. ಇತರರಿಗೆ ಸೇವೆಮಾಡುವುದರಲ್ಲಿ ಅವರನ್ನು ತಲ್ಲೀನಗೊಳಿಸಿ; ಅಂದರೆ ರಾಜ್ಯ ಸಭಾಗೃಹದ ಸ್ವಚ್ಛಗೊಳಿಸುವಿಕೆ, ವೃದ್ಧರಿಗೆ ಸಹಾಯಮಾಡುವುದು ಇತ್ಯಾದಿ ಕೆಲಸಗಳಲ್ಲಿ ಅವರನ್ನು ತೊಡಗಿಸಿರಿ. ಕೊಡುವುದರಿಂದ ಸಿಗುವ ಸಂತೋಷವನ್ನು ಅವರೂ ಅನುಭವಿಸುವಂತೆ ಅನುಮತಿಸಿರಿ. (ಅ. ಕೃ. 20:35) ಇಂತಹ ತರಬೇತಿಯು ಅವರನ್ನು ನಾಳೆಯ ಪಯನೀಯರರು, ಶುಶ್ರೂಷಾ ಸೇವಕರು ಮತ್ತು ಹಿರಿಯರಾಗಲು ಸಹಾಯಮಾಡಬಲ್ಲದು.