ನಾವು ಹೇಗೆ ಸಹಾಯಮಾಡಬಲ್ಲೆವು?
1 ಲೋಕದ ಯಾವುದೋ ಭಾಗದಲ್ಲಿ ವಿಪತ್ತು ಸಂಭವಿಸಿದೆ ಎಂದು ಕೇಳಿಸಿಕೊಳ್ಳುವಾಗ, ಯೆಹೋವನ ಸಾಕ್ಷಿಗಳು ಅನೇಕವೇಳೆ “ನಾವು ಹೇಗೆ ಸಹಾಯಮಾಡಬಲ್ಲೆವು?” ಎಂದು ಕೇಳುತ್ತಾರೆ. ಅಪೊಸ್ತಲರ ಕೃತ್ಯಗಳು 11:27-30ರಲ್ಲಿರುವ ವೃತ್ತಾಂತವು ತೋರಿಸುವಂತೆ, ಯೂದಾಯ ಸೀಮೆಯಲ್ಲಿ ಕ್ಷಾಮ ಉಂಟಾಗಿದೆ ಎಂದು ಕೇಳಿಸಿಕೊಂಡಾಗ ಪ್ರಥಮ ಶತಮಾನದ ಕ್ರೈಸ್ತರು ಅಲ್ಲಿ ವಾಸವಾಗಿದ್ದ ಸಹೋದರರಿಗೆ ದ್ರವ್ಯಸಹಾಯ ಅಂದರೆ ಪರಿಹಾರ ನೆರವನ್ನು ನೀಡಿದರು.
2 ಆಧುನಿಕ ಸಮಯಗಳಲ್ಲೂ, ನಮ್ಮ ಸಂಘಟನೆಯ ಕಾನೂನುಬದ್ಧ ನಿಯಮಗಳು, ನೈಸರ್ಗಿಕ ಅಥವಾ ಮಾನವನಿಂದುಂಟಾಗುವ ವಿಪತ್ತುಗಳಿಂದ ಬಾಧೆಪಡುವವರಿಗೆ ಮತ್ತು ಸಹಾಯವು ಅಗತ್ಯವಿರುವ ಇನ್ನಿತರ ಸಮಯಗಳಲ್ಲಿ ಧರ್ಮಾರ್ಥ ಕೆಲಸಕ್ಕಾಗಿ ಹಾಗೂ ಮಾನವೀಯ ನೆರವಿಗಾಗಿ ಹಣವನ್ನು ಉಪಯೋಗಿಸಲು ಅನುಮತಿಯನ್ನು ನೀಡಿವೆ.
3 ಉದಾಹರಣೆಗೆ, ಕಳೆದ ವರ್ಷ ದಕ್ಷಿಣ ಏಷ್ಯದಲ್ಲಿ ಸುನಾಮಿ ದುರಂತದಿಂದ ಬಾಧಿತರಾದವರಿಗೆ ಅನೇಕ ಸಹೋದರರು ಧನಸಹಾಯ ಮಾಡಿದರು. ಸಂಘಟನೆಯ ಪರಿಹಾರ ನಿಧಿಗೆ ದಾನಗಳನ್ನು ಕಳುಹಿಸುವ ಮೂಲಕ ತೋರಿಸಲ್ಪಟ್ಟ ಈ ಹೃತ್ಪೂರ್ವಕ ಪ್ರತಿಕ್ರಿಯೆಯನ್ನು ತುಂಬ ಗಣ್ಯಮಾಡಲಾಯಿತು. ಆದರೆ, ದಾನಗಳು ಒಂದು ನಿರ್ದಿಷ್ಟ ವಿಪತ್ತಿಗಾಗಿದೆ ಎಂದು ಸೂಚಿಸಲ್ಪಡುವುದಾದರೆ, ಕೆಲವು ದೇಶಗಳಲ್ಲಿ ಅಂಥ ನಿಧಿಯನ್ನು ದಾನಿಯು ನಿರ್ದಿಷ್ಟವಾಗಿ ಸೂಚಿಸಿದ ಉದ್ದೇಶಕ್ಕಾಗಿ ಮಾತ್ರ ಮತ್ತು ನಿಗದಿತ ಕಾಲಾವಧಿಯೊಳಗೆ ಉಪಯೋಗಿಸಲ್ಪಡಬೇಕೆಂಬುದು ಕಾನೂನುಬದ್ಧ ಆವಶ್ಯಕತೆಯಾಗಿದೆ. ಅಗತ್ಯದಲ್ಲಿರುವ ಸಹೋದರರಿಗೆ ಪರಿಹಾರವನ್ನು ಒದಗಿಸಲು ಸ್ಥಳಿಕವಾಗಿ ಏರ್ಪಾಡುಗಳು ಮಾಡಲ್ಪಟ್ಟಿರಲಿ ಇಲ್ಲದಿರಲಿ ಆ ನಿಧಿಯನ್ನು ಅದೇ ಉದ್ದೇಶಕ್ಕಾಗಿ ಉಪಯೋಗಿಸಬೇಕಾಗುತ್ತದೆ.
4 ಆದುದರಿಂದ, ಮಾನವೀಯ ಮತ್ತು ಪರಿಹಾರ ನೆರವಿಗಾಗಿ ಕೊಡಲ್ಪಡುವ ದಾನಗಳನ್ನು ಲೋಕವ್ಯಾಪಕ ಕೆಲಸಕ್ಕಾಗಿ ಕಳುಹಿಸುವಂತೆ ನಾವು ಶಿಫಾರಸ್ಸು ಮಾಡುತ್ತೇವೆ. ಲೋಕವ್ಯಾಪಕ ಕೆಲಸಕ್ಕಾಗಿರುವ ಈ ನಿಧಿಯನ್ನು ಪರಿಹಾರ ಕೆಲಸಕ್ಕಾಗಿಯೂ ಕ್ರೈಸ್ತ ಸಹೋದರತ್ವದ ಆಧ್ಯಾತ್ಮಿಕ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿಯೂ ಉಪಯೋಗಿಸಲಾಗುತ್ತದೆ. ಕಾರಣಾಂತರದಿಂದ, ಒಬ್ಬನು ಲೋಕವ್ಯಾಪಕ ಕೆಲಸಕ್ಕೆ ಅಲ್ಲದೆ ಪ್ರತ್ಯೇಕವಾಗಿ ಪರಿಹಾರ ಕೆಲಸಕ್ಕಾಗಿ ದಾನವನ್ನು ಕೊಡಲು ಬಯಸುವುದಾದರೆ, ಅದನ್ನು ಸಹ ಅಂಗೀಕರಿಸಲಾಗುವುದು ಮತ್ತು ಪರಿಹಾರ ನೆರವಿನ ಆವಶ್ಯಕತೆಯಿರುವಾಗ ಅದನ್ನು ಬಳಸಲಾಗುವುದು. ಆದರೆ, ಅಂಥ ದಾನಗಳನ್ನು ಯಾವ ವಿಪತ್ತಿಗಾಗಿ ಉಪಯೋಗಿಸಬೇಕು ಮತ್ತು ಆ ನಿಧಿಯನ್ನು ಹೇಗೆ ಉಪಯೋಗಿಸಬೇಕೆಂಬದನ್ನು ಸೂಚಿಸದೇ ಇರುವುದು ಒಳ್ಳೇದು.
5 ಮುಖ್ಯವಾಗಿ ಲೋಕವ್ಯಾಪಕ ಕೆಲಸಕ್ಕಾಗಿ ದಾನಗಳನ್ನು ನೀಡುವಂತೆ ನಾವು ನಿರ್ದೇಶಿಸಲು ಕಾರಣವೇನೆಂದರೆ, ಆ ನಿಧಿಯು ಕೇವಲ ಭವಿಷ್ಯದಲ್ಲಿ ಪರಿಹಾರ ಆವಶ್ಯಕತೆಗೆ ಮಾತ್ರ ಕಾಯ್ದಿರಿಸಲ್ಪಡದೆ ರಾಜ್ಯ ಕೆಲಸದ ವಿವಿಧ ವೈಶಿಷ್ಟ್ಯಗಳಿಗಾಗಿ ಉಪಯೋಗಿಸಲ್ಪಡಲು ಅದು ಲಭ್ಯವಿರುತ್ತದೆ. ಇದು, ಎಫೆಸ 4:16ರಲ್ಲಿ ತಿಳಿಸಲ್ಪಟ್ಟಂತೆ ‘ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿ ಹೊಂದಲಿಕ್ಕಾಗಿ’ (NIBV) ಅವಶ್ಯವಾಗಿರುವುದನ್ನು ಕೊಡಲು ನಾವು ಒಟ್ಟಿಗೆ ಕೆಲಸಮಾಡಬೇಕೆಂಬ ಮನೋಭಾವಕ್ಕೆ ಹೊಂದಿಕೆಯಲ್ಲಿದೆ.