ತಯಾರಿ—ಪರಿಣಾಮಕಾರಿ ಪುನರ್ಭೇಟಿಗಳಿಗೆ ಕೀಲಿಕೈ
1. ಯಾವ ವಿಧದಲ್ಲಿ ಮೊದಲನೇ ಶತಮಾನದ ಕ್ರೈಸ್ತ ಶುಶ್ರೂಷೆಯು ವ್ಯಾಪಕವಾಗಿ ಹರಡಬೇಕಿತ್ತು?
1 “ಪರಲೋಕರಾಜ್ಯದ ಸುವಾರ್ತೆಯನ್ನು” ಪರಿಣಾಮಕಾರಿಯಾಗಿ ಸಾರುವಂತೆ ಯೇಸು ತನ್ನ ಶಿಷ್ಯರನ್ನು ಚೆನ್ನಾಗಿ ತಯಾರಿಗೊಳಿಸಿದನು. (ಮತ್ತಾ. 4:23; 9:35) ಯೇಸು ಅವರಿಗೆ ತರಬೇತು ನೀಡಿದ್ದು ಪ್ಯಾಲೆಸ್ಟೈನ್ ದೇಶದ ಮೇರೆಯೊಳಗೆ ಮಾತ್ರವೇ. ಆದರೂ, ಯೇಸು ಪರಲೋಕಕ್ಕೆ ಏರಿಹೋಗುವ ಮೊದಲು ಕ್ರೈಸ್ತ ಶುಶ್ರೂಷೆಯು ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಲಿಕ್ಕಾಗಿ’ ವ್ಯಾಪಕವಾಗಿ ಹರಡಬೇಕೆಂದು ತಿಳಿಸಿದನು.—ಮತ್ತಾ. 28:19, 20.
2. ‘ಶಿಷ್ಯರನ್ನಾಗಿ ಮಾಡುವಂತೆ’ ಯೇಸು ನೀಡಿದ ಆಜ್ಞೆಯಲ್ಲಿ ಏನು ಸೇರಿದೆ?
2 ಆ ಕೆಲಸದಲ್ಲಿ, ದೇವರ ರಾಜ್ಯದ ಸುವಾರ್ತೆಗೆ ಆಸಕ್ತಿ ತೋರಿಸಿದ ಜನರನ್ನು ಪುನಃ ಭೇಟಿಯಾಗುವುದು ಮತ್ತು ಕ್ರಿಸ್ತನು ಆಜ್ಞಾಪಿಸಿದ್ದೆಲ್ಲವನ್ನು ಪಾಲಿಸುವಂತೆ ಬೋಧಿಸುವುದು ಒಳಗೂಡಿತ್ತು. ಅಂಥ ಒಂದು ಪರಿಣಾಮಕಾರಿ ಪುನರ್ಭೇಟಿ ಮಾಡಬೇಕಾದರೆ ನಾವು ಚೆನ್ನಾಗಿ ತಯಾರಿಸಬೇಕು.
3. ಮೊದಲ ಭೇಟಿಯಲ್ಲಿಯೂ ಪುನರ್ಭೇಟಿಗಾಗಿ ದಾರಿಯೊಂದನ್ನು ನೀವು ಹೇಗೆ ಸಿದ್ಧಪಡಿಸಬಹುದು?
3 ಮುಂಚೆಯೇ ಯೋಜಿಸಿ: ಕೆಲವು ಪ್ರಚಾರಕರು ತಮ್ಮ ಮೊದಲ ಭೇಟಿಯ ಕೊನೆಯಲ್ಲಿ ಪ್ರಶ್ನೆಯೊಂದನ್ನು ಕೇಳಿ, ಅನಂತರ ಅದಕ್ಕೆ ಉತ್ತರವೇನೆಂದು ಚರ್ಚಿಸುವುದಕ್ಕಾಗಿ ಪುನಃ ಭೇಟಿಯಾಗುವುದಾಗಿ ತಿಳಿಸುತ್ತಾರೆ. ಪುನರ್ಭೇಟಿ ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿರುವ ಮಾಹಿತಿಯನ್ನು ಉಪಯೋಗಿಸುವುದರಿಂದ ಆ ಕೂಡಲೇ ಬೈಬಲ್ ಅಧ್ಯಯನ ಆರಂಭಿಸಲು ಸಹಾಯವಾಗಿದೆ ಎಂದು ಅವರು ಕಂಡುಕೊಂಡಿದ್ದಾರೆ.
4. ಪುನರ್ಭೇಟಿ ಮಾಡಲಿಕ್ಕಾಗಿ ಹೊಸ ಸಂಚಿಕೆಗಳು ಬರುವ ತನಕ ನಾವು ಏಕೆ ಕಾಯಬೇಕಾಗಿಲ್ಲ?
4 ನಮಗೆ ಮೂರು ತಿಂಗಳಿಗೊಮ್ಮೆ ಒಂದು ಜೊತೆ ಪತ್ರಿಕೆ ಬರುತ್ತದೆ ನಿಜ. ಆದರೆ, ಪುನರ್ಭೇಟಿ ಮಾಡಲಿಕ್ಕಾಗಿ ಮುಂದಿನ ಸಂಚಿಕೆಗಳು ಬರುವವರೆಗೂ ಕಾಯಬೇಕಾಗಿಲ್ಲ. ವ್ಯಕ್ತಿಯ ಬಳಿ ಈ ಮೊದಲೇ ಇರುವ ಪತ್ರಿಕೆಯಿಂದಲೇ ಕೆಲವೊಂದು ವಿಷಯಗಳನ್ನು ಚರ್ಚಿಸಿ ಅವನ ಆಸಕ್ತಿಯನ್ನು ಕೆರಳಿಸಬಹುದು.
5. ಪುನರ್ಭೇಟಿ ಮಾಡುವಾಗ ನಿಮ್ಮ ಉದ್ದೇಶವೇನಾಗಿರಬೇಕು?
5 ಒಂದು ಉದ್ದೇಶವಿರಲಿ: ಪುನಃ ಹಿಂದಿರುಗುವ ಮೊದಲು, ಹಿಂದಿನ ದಾಖಲೆಗಳನ್ನು ಪರಿಶೀಲಿಸಿರಿ ಮತ್ತು ಏನನ್ನು ಸಾಧಿಸಬೇಕೆಂದಿದ್ದೀರಿ ಎಂಬುದನ್ನು ತೀರ್ಮಾನಿಸಿಕೊಳ್ಳಿರಿ. ಉದಾಹರಣೆಗೆ, ನೀವು ಹಿಂದೆ ನೀಡಿದ ಸಾಹಿತ್ಯದಿಂದಲೇ ಯಾವುದಾದರೂ ಒಂದು ವಿಷಯವನ್ನು ಚರ್ಚಿಸಿರಿ. ಅಥವಾ ಕಳೆದ ಬಾರಿ ನೀವು ಮಾತಾಡಿದ ವಿಷಯದ ಕುರಿತು ಚರ್ಚಿಸುವ ಬೇರೆ ಸಾಹಿತ್ಯವನ್ನು ನೀಡಿ. ಹಿಂದೆ ನೀವು ಒಂದು ಪ್ರಶ್ನೆಯನ್ನು ಕೇಳಿದ್ದರೆ, ಈಗ ನಿಮ್ಮ ಉದ್ದೇಶ ಆ ಪ್ರಶ್ನೆಗೆ ಉತ್ತರವನ್ನು ಕೊಡುವುದೇ. ಉತ್ತರಕ್ಕೆ ಆಧಾರವಾಗಿ ಉಪಯೋಗಿಸುವ ಒಂದು ಶಾಸ್ತ್ರವಚನವನ್ನು ಎತ್ತಿ ಹೇಳುವಾಗ ಬೈಬಲಿನಿಂದಲೇ ನೇರವಾಗಿ ಓದಲು ಪ್ರಯತ್ನಿಸಿ.
6. ಪುನರ್ಭೇಟಿ ಮಾಡುವಾಗ ನಮ್ಮ ಗುರಿಯೇನಾಗಿರಬೇಕು?
6 ನಮ್ಮ ಗುರಿ: ನಿಶ್ಚಯವಾಗಿ, ನಮ್ಮ ಗುರಿ ಬೈಬಲ್ ಅಧ್ಯಯನ ಆರಂಭಿಸುವುದಾಗಿದೆ. ಒಬ್ಬ ಸಹೋದರನು ಪುನರ್ಭೇಟಿಯ ಸಮಯದಲ್ಲಿ ಬೈಬಲ್ ಅಧ್ಯಯನದ ಕುರಿತು ತಿಳಿಸಿದನು, ಆದರೆ ಆ ಮನುಷ್ಯನು ಅದನ್ನು ನಿರಾಕರಿಸಿದನು. ಆ ಸಹೋದರನು ಪತ್ರಿಕೆಯ ಹೊಸ ಸಂಚಿಕೆಗಳೊಂದಿಗೆ ಹಿಂದಿರುಗಿ, “ಇವತ್ತು ನಾವು ಒಂದು ಬೈಬಲ್ ಪ್ರಶ್ನೆಗೆ ಉತ್ತರವನ್ನು ಕೊಡುತ್ತಿದ್ದೇವೆ” ಎಂದು ಹೇಳಿದನು. ಆ ಮನುಷ್ಯನ ಹೇಳಿಕೆಯನ್ನು ಕೇಳಿದ ಮೇಲೆ ಅವನಿಗೆ ಆ ಸಹೋದರನು ಬೈಬಲ್ ವಚನವನ್ನು ತೋರಿಸಿದನು ಮತ್ತು ಬೈಬಲ್ ಅಧ್ಯಯನಕ್ಕಾಗಿ ಬಳಸಲಾಗುವ ಸಾಹಿತ್ಯದಿಂದ ಸೂಕ್ತವಾದ ಪ್ಯಾರಗ್ರಾಫನ್ನು ಓದಿದನು. ಇದು ಒಂದು ಬೈಬಲ್ ಅಧ್ಯಯನಕ್ಕೆ ನಡೆಸಿತು.
7. ನಿಮ್ಮ ಪೂರ್ವ ತಯಾರಿಯು ಒಂದು ಬೈಬಲ್ ಅಧ್ಯಯನ ಆರಂಭಿಸುವಂತೆ ನಿಮಗೆ ಹೇಗೆ ಸಹಾಯಮಾಡಿತು?
7 ಪುನರ್ಭೇಟಿಗಾಗಿ ತಯಾರಿಸುವುದಕ್ಕೆ ಸಮಯ ತೆಗೆದುಕೊಳ್ಳುವುದು ನಿಜಕ್ಕೂ ಪ್ರಯೋಜನಕರವಾಗಿದೆ. ಇದರಿಂದ, ನಮಗೆ ಹೆಚ್ಚು ಆನಂದ ಸಿಗುವುದು ಮಾತ್ರವಲ್ಲ, “ಯೋಗ್ಯ ಮನೋಭಾವದವರು” ನಿತ್ಯಜೀವದ ದಾರಿಯಲ್ಲಿ ನಡೆಯುವಂತೆ ನೆರವಾಗುವ ಸುಯೋಗವು ನಮಗಿರುವುದು.—ಅ. ಕೃ. 13:48, NW.