ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/08 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2008 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಯೆಹೋವನನ್ನು ಘನಪಡಿಸುವ ಸಂತೋಷದ ವಿವಾಹಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಯೆಹೋವನಿಗೆ ಘನತೆ ತರುವ ವಿವಾಹಗಳು
    ಕಾವಲಿನಬುರುಜು—1997
  • ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಗೌರವಾರ್ಹವಾದ ವಿವಾಹ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
2008 ನಮ್ಮ ರಾಜ್ಯದ ಸೇವೆ
km 11/08 ಪು. 3

ಪ್ರಶ್ನಾ ಚೌಕ

◼ ಮದುವೆಯಾಗುವ ಜೋಡಿಯು ತಮ್ಮ ವಿವಾಹಕ್ಕಾಗಿ ರಾಜ್ಯ ಸಭಾಗೃಹವನ್ನು ಉಪಯೋಗಿಸಲು ಬಯಸುವುದಾದರೆ, ಅವರು ಹಿರಿಯರೊಂದಿಗೆ ಯಾವ ವಿಷಯಗಳ ಕುರಿತು ಚರ್ಚಿಸಬೇಕು?

ಬೈಬಲ್‌ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ಏರ್ಪಡಿಸಲ್ಪಡುವ ವಿವಾಹಗಳು ಯೆಹೋವನಿಗೆ ಮಹಿಮೆ ತರುತ್ತವೆ. ರಾಜ್ಯ ಸಭಾಗೃಹದಲ್ಲಿ ನಡೆಯುವ ವಿವಾಹಗಳ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯ. ಏಕೆಂದರೆ ಅಲ್ಲಿ ನಡೆಸಲ್ಪಡುವ ಕಾರ್ಯಕ್ರಮಗಳನ್ನು ಜನರು ವೀಕ್ಷಿಸುವುದರಿಂದ ಅವು ನಮ್ಮ ಸಂಘಟನೆಗೆ ಕನ್ನಡಿ ಹಿಡಿದಂತಿರುತ್ತವೆ. ‘ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಬೇಕಾಗಿರುವುದರಿಂದ’ ಮದುವೆಯಾಗುವ ಗಂಡು-ಹೆಣ್ಣಿನೊಂದಿಗೆ ಸ್ಥಳಿಕ ಹಿರಿಯರು ಅವರ ವಿವಾಹದ ಕುರಿತ ಕೆಲವು ವಿಷಯಗಳನ್ನು ಮಾತಾಡುವುದು ಸೂಕ್ತ.​—⁠1 ಕೊರಿಂ. 14:⁠40.

ಮದುವೆಯಾಗುವ ಜೋಡಿಯು ತಮ್ಮ ವಿವಾಹಕ್ಕಾಗಿ ರಾಜ್ಯ ಸಭಾಗೃಹವನ್ನು ಉಪಯೋಗಿಸಲು ಬಯಸುವುದಾದರೆ ಏನು ಮಾಡಬೇಕು? ಆ ರಾಜ್ಯ ಸಭಾಗೃಹದಲ್ಲಿ ಕೂಡಿಬರುವ ಸಭೆಯ ಸೇವಾ ಕಮಿಟಿಗೆ ಅವರು ಸಾಕಷ್ಟು ಮುಂಚಿತವಾಗಿಯೇ ಲಿಖಿತ ವಿನಂತಿಯನ್ನು ಸಲ್ಲಿಸಬೇಕು. ಸಭಾಗೃಹವನ್ನು ಉಪಯೋಗಿಸುವ ದಿನಾಂಕ ಮತ್ತು ಸಮಯವನ್ನು ಆ ಪತ್ರದಲ್ಲಿ ಸೂಚಿಸಬೇಕು. ವಿವಾಹ ಸಮಾರಂಭಕ್ಕಾಗಿ ಸಭಾಕೂಟಗಳ ಸಮಯವನ್ನು ಹಿರಿಯರು ಬದಲಾಯಿಸಲಾರರು ಎಂಬುದನ್ನು ಅವರಿಬ್ಬರು ತಿಳಿದಿರಬೇಕು. ಮಾತ್ರವಲ್ಲ, ಅವರು ಆಧ್ಯಾತ್ಮಿಕವಾಗಿ ಒಳ್ಳೇ ನಿಲುವುಳ್ಳವರೂ ಬೈಬಲ್‌ ಮೂಲತತ್ತ್ವಗಳಿಗೆ ಮತ್ತು ಯೆಹೋವನ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವವರೂ ಆಗಿರಬೇಕು.

ವಿವಾಹವು ಮಹಿಮಾಭರಿತ ದೇವರಿಗೆ ಕೀರ್ತಿ ತರುವಂಥ ರೀತಿಯಲ್ಲಿ ಜರುಗುವುದೆಂಬುದನ್ನು ವಿವಾಹವಾಗುವ ಗಂಡು-ಹೆಣ್ಣು ಖಚಿತಮಾಡಿಕೊಳ್ಳಬೇಕು. ಆದ್ದರಿಂದ ಅವರು ವಿವಾಹದೇರ್ಪಾಡುಗಳ ಸಂಬಂಧದಲ್ಲಿ ಅಂತಿಮ ತೀರ್ಮಾನಮಾಡುವ ಮುನ್ನವೇ ಆ ಕುರಿತು ಸೇವಾ ಕಮಿಟಿಯೊಂದಿಗೆ ಚರ್ಚಿಸಬೇಕು. ಹಿರಿಯರು ತಮ್ಮ ವೈಯಕ್ತಿಕ ಇಷ್ಟಗಳನ್ನು ಅವರ ಮೇಲೆ ಹೇರುವುದಿಲ್ಲ. ಹಾಗಿದ್ದರೂ ಯಾವುದೇ ಆಕ್ಷೇಪಣೀಯ ವಿಷಯಗಳನ್ನು ವಧೂವರರು ಯೋಜಿಸಿರುವಲ್ಲಿ ಹಿರಿಯರ ಸಲಹೆಗನುಸಾರ ಅವನ್ನು ಅವರು ಸರಿಪಡಿಸಿಕೊಳ್ಳತಕ್ಕದ್ದು. ಕಿಂಗ್‌ಡಮ್‌ ಮೆಲಡೀಸ್‌ ಅಥವಾ ನಮ್ಮ ಗೀತೆ ಪುಸ್ತಕದ ಸಂಗೀತವನ್ನು ಮಾತ್ರ ನುಡಿಸಬಹುದು. ರಾಜ್ಯ ಸಭಾಗೃಹದ ಯಾವುದೇ ಅಲಂಕಾರ ಅಥವಾ ಆಸನಗಳ ಪುನರ್‌ ಏರ್ಪಾಡುಗಳ ವಿಷಯದಲ್ಲೂ ಹಿರಿಯರ ಒಪ್ಪಿಗೆ ಪಡೆದುಕೊಳ್ಳಬೇಕು. ಫೋಟೋಗ್ರಾಫ್‌ ಅಥವಾ ವಿಡಿಯೋ ರೆಕಾರ್ಡಿಂಗ್‌ಗಳು ಇರುವುದಾದರೆ ಅವು ಸಮಾರಂಭದ ಘನತೆಗೆ ಅಪಕರ್ಷಣೆ ಆಗಿರಬಾರದು. ಸಭೆಯ ಇತರ ಏರ್ಪಾಡುಗಳಿಗೆ ಅಡ್ಡಿಯಾಗದಿರುವಲ್ಲಿ, ಮೇಲಿನ ವಿಷಯಗಳ ಒಂದು ರಿಹರ್ಸಲನ್ನು ಮಾಡುವಂತೆ ಹಿರಿಯರು ಅನುಮತಿಸಬಹುದು. ಮದುವೆಯ ನೋಟಿಸನ್ನು ರಾಜ್ಯ ಸಭಾಗೃಹದ ಮಾಹಿತಿ ಫಲಕದ ಮೇಲೆ ಹಾಕಬೇಕು. ಯಾಕೆಂದರೆ ಇದು ಕಾನೂನುಬದ್ಧ. ಆದರೆ ಆಮಂತ್ರಣಪತ್ರಗಳನ್ನು ಮಾಹಿತಿ ಫಲಕದ ಮೇಲೆ ಹಾಕಬಾರದು. ರಾಜ್ಯ ಸಭಾಗೃಹದಲ್ಲಿ ನಡೆಯಲಿರುವ ವಿವಾಹ ಸಮಾರಂಭದ ಕುರಿತು ಸಭೆಗೆ ತಿಳಿಯಪಡಿಸಲಿಕ್ಕಾಗಿ ಹಿರಿಯರು ಸೇವಾಕೂಟದಲ್ಲಿ ಅದರ ಸಂಕ್ಷಿಪ್ತ ಪ್ರಕಟನೆಯನ್ನು ಮಾಡಬಹುದು. ರಾಜ್ಯ ಸಭಾಗೃಹದಲ್ಲಿನ ವಿವಾಹದ ಭಾಷಣಕ್ಕೆ ಹಾಜರಾಗಲು ಎಲ್ಲರಿಗೆ ಸ್ವಾಗತವಿದೆಯಾದರೂ ಅದರ ನಂತರ ನಡೆಯಬಹುದಾದ ರಿಸೆಪ್ಷನ್‌ಗೆ ಎಲ್ಲರಿಗೂ ಆಮಂತ್ರಣವಿದೆ ಎಂದು ಅದರ ಅರ್ಥವಲ್ಲ. (ಯೋಹಾ. 2:⁠2) ಆ ಸಮಯದಲ್ಲಿ ಬೇರೆ ಯಾವ ಕಾರ್ಯಕ್ರಮಕ್ಕೂ ಹಾಲ್‌ ಲಭ್ಯವಿಲ್ಲವೆಂದು ಆ ರಾಜ್ಯ ಸಭಾಗೃಹವನ್ನು ಉಪಯೋಗಿಸುವ ಇತರ ಸಭೆಗಳಿಗೂ ತಿಳಿಸಬೇಕು.

ವಧೂವರರಿಗೆ ಸಹಾಯಕರಾಗಿ ಕೆಲಸಮಾಡುವವರು ದೀಕ್ಷಾಸ್ನಾನ ಪಡೆದವರೇ ಆಗಿರಬೇಕೆಂಬ ಆವಶ್ಯಕತೆಯಿಲ್ಲ. ಹಾಗಿದ್ದರೂ ಬೈಬಲ್‌ ಮೂಲತತ್ತ್ವಗಳಿಗೆ ತೀರಾ ವಿರುದ್ಧ ನಡವಳಿಕೆಯಿರುವ ಹಾಗೂ ಹಾಜರಿರುವವರ ಮನಸ್ಸಿನಲ್ಲಿ ಸಂದೇಹಾಸ್ಪದ ಪ್ರಶ್ನೆಗಳನ್ನು ಎಬ್ಬಿಸುವ ವ್ಯಕ್ತಿಗಳನ್ನು ವಿವಾಹ ಕಾರ್ಯಕ್ರಮದಲ್ಲಿ ಒಳಗೂಡಿಸುವುದು ಸೂಕ್ತವಲ್ಲ. ನೇಮಿತ ಹಿರಿಯನು ಇರುವಲ್ಲಿ ಅವನೇ ಭಾಷಣ ನೀಡತಕ್ಕದ್ದು. ಏಕೆಂದರೆ ಹಿರಿಯರು ದೇವರ ವಾಕ್ಯವನ್ನು ಬೋಧಿಸಲು ಅರ್ಹರಾಗಿದ್ದಾರೆ. ಆದುದರಿಂದ, ಈ ಪ್ರಾಮುಖ್ಯ ಸಮಾರಂಭದಲ್ಲಿ ಅನ್ವಯವಾಗುವ ಬೈಬಲ್‌ ಮೂಲತತ್ತ್ವಗಳನ್ನು ಎತ್ತಿಹೇಳಲು ಅವರು ಹೆಚ್ಚು ಸಮರ್ಥರು.​—⁠1 ತಿಮೊ. 3:⁠2.

ವಿವಾಹವು ಭಾಷಣವನ್ನು ನೀಡುವ ಹಿರಿಯನ ಮೇಲೂ ಪ್ರಭಾವಬೀರುವುದರಿಂದ ಅವನಿಗೂ ವಿವಾಹದ ಏರ್ಪಾಡುಗಳ ವಿವರಗಳು ತಿಳಿದಿರಬೇಕು. ಪ್ರಣಯಾಚರಣೆಯ ಸಮಯದಲ್ಲಿ ಜೋಡಿಯ ನೈತಿಕ ನಡವಳಿಕೆಯ ಕುರಿತು ತಿಳಿದುಕೊಳ್ಳಲು ಅವರೊಂದಿಗೆ ಆ ಹಿರಿಯನು ಮಾತಾಡುವನು. ಜೋಡಿಯು ಅವನೊಂದಿಗೆ ಮುಕ್ತವಾಗಿ ಪ್ರಾಮಾಣಿಕತೆಯಿಂದ ಮಾತಾಡಬೇಕು. ಒಂದುವೇಳೆ ವಧು ಅಥವಾ ವರ ಈ ಮುಂಚೆ ವಿವಾಹಿತರಾಗಿದ್ದಲ್ಲಿ ಅವನು/ಳು ಈಗ ಮದುವೆಯಾಗಲು ಶಾಸ್ತ್ರೀಯವಾಗಿಯೂ ಕಾನೂನುಬದ್ಧವಾಗಿಯೂ ಸ್ವತಂತ್ರರು ಎಂಬುದನ್ನು ಸಾಬೀತುಪಡಿಸಬೇಕು. (ಮತ್ತಾ. 19:⁠9) ಇದರಲ್ಲಿ, ಅವರ ವಿಚ್ಛೇದ ಪತ್ರದ ಪ್ರತಿಯನ್ನು ಹಿರಿಯರಿಗೆ ತೋರಿಸುವುದೂ ಒಳಗೂಡಿದೆ.

ವಧೂವರರು ಹಿರಿಯರೊಂದಿಗೆ ಮುಕ್ತವಾಗಿ ಮಾತಾಡಿ, ಪೂರ್ಣವಾಗಿ ಸಹಕರಿಸುವಾಗ ಅವರ ವಿವಾಹವು ಎಲ್ಲರಿಗೂ ಸಂತೋಷ ಸಂಭ್ರಮದ ಸಮಾರಂಭವಾಗಿ ಪರಿಣಮಿಸುವುದು.​—⁠ಜ್ಞಾನೋ. 15:22; ಇಬ್ರಿ. 13:17.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ