ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp20 ನಂ. 2 ಪು. 4-5
  • ದೇವರ ಸರ್ಕಾರ ಯಾಕೆ ಬರಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸರ್ಕಾರ ಯಾಕೆ ಬರಬೇಕು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಾನವ ಆಳ್ವಿಕೆಯ ಆರಂಭ
  • ಮಾನವ ಆಳ್ವಿಕೆಯ ಕೊನೆ!
  • ಭೂಮಿಯ ಹೊಸ ಆಡಳಿತ—ದೇವರ ರಾಜ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ದೇವರು ಕಷ್ಟಸಂಕಟಕ್ಕೆ ಕೊಟ್ಟಿರುವ ಸಮಯವು ಇನ್ನೇನು ಕೊನೆಗೊಳ್ಳಲಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಯೆಹೋವನ ಆಳ್ವಿಕೆಯ ನಿರ್ದೋಷೀಕರಣ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ನಮಗೆ ಯಾಕೆ ಇಷ್ಟು ಕಷ್ಟ ಸಮಸ್ಯೆಗಳಿವೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
wp20 ನಂ. 2 ಪು. 4-5
ಏದೆನ್‌ ತೋಟದಲ್ಲಿ ಆದಾಮ ಮತ್ತು ಹವ್ವ ಜಲಪಾತವನ್ನು ನೋಡುತ್ತಿದ್ದಾರೆ.

ಆರಂಭದಲ್ಲಿ ದೇವರ ಆಳ್ವಿಕೆಯಡಿ ಸಂತೋಷದ ಜೀವನ

ದೇವರ ಸರ್ಕಾರ ಯಾಕೆ ಬರಬೇಕು?

ಮಾನವರ ಸೃಷ್ಟಿಯ ಆರಂಭದಲ್ಲಿ ಈ ಭೂಮಿನಾ ಸೃಷ್ಟಿಕರ್ತನೊಬ್ಬನೇ ಆಳುತ್ತಿದ್ದ. ಆತನ ಹೆಸರು ಯೆಹೋವ. ಅವನ ಆಳ್ವಿಕೆಯ ಒಂದೊಂದು ವಿಷಯದಲ್ಲೂ ಪ್ರೀತಿ ಎದ್ದು ಕಾಣುತ್ತಿತ್ತು. ಇದನ್ನು ಹೇಗೆ ಹೇಳಬಹುದು? ಯೆಹೋವ ದೇವರು ಮೊದಲ ಮಾನವರನ್ನು ಸೃಷ್ಟಿಸಿ ಅವರನ್ನು ಏದೆನ್‌ ಎಂಬ ಸುಂದರ ತೋಟದಲ್ಲಿ ಇಟ್ಟನು. ಇದರ ಜೊತೆ ಆ ತೋಟದ ಹಣ್ಣು, ತರಕಾರಿಗಳನ್ನು ಆಹಾರವಾಗಿ ಕೊಟ್ಟನು. ಅಷ್ಟೇ ಅಲ್ಲ ಅವರಿಗೆ ಒಳ್ಳೇ ಕೆಲಸನೂ ಕೊಟ್ಟನು. (ಆದಿಕಾಂಡ 1:28, 29; 2:8, 15) ದೇವರ ಈ ಪ್ರೀತಿಯ ಆಳ್ವಿಕೆಯಡಿ ಇದ್ದಿದ್ರೆ ಇವತ್ತಿಗೂ ಮನುಷ್ಯರೆಲ್ಲರೂ ಸಮಾಧಾನದಿಂದ ಸಂತೋಷದಿಂದ ಇರಬಹುದಿತ್ತು. ಆದರೆ ಹಾಗಾಗಲಿಲ್ಲ, ಯಾಕೆ?

ತಿನ್ನಬಾರದೆಂದು ಹೇಳಿದ್ದ ಹಣ್ಣನ್ನು ಹವ್ವ ಆದಾಮನಿಗೆ ಕೊಟ್ಟಿದ್ದಾಳೆ. ಅದನ್ನು ಆದಾಮ ಕೈಯಲ್ಲಿ ಹಿಡಿದುಕೊಂಡಿದ್ದಾನೆ.

ದೇವರ ವಿರುದ್ಧ ಮೊದಲ ಮಾನವರ ದಂಗೆ

ದೇವರ ಆಳ್ವಿಕೆ ವಿರುದ್ಧ ದಂಗೆ ಎದ್ದ ಒಬ್ಬ ವ್ಯಕ್ತಿ ಬಗ್ಗೆ ಬೈಬಲ್‌ ಹೇಳುತ್ತೆ. ಇವನು ಒಬ್ಬ ದೇವದೂತನಾಗಿದ್ದ. ಇವನನ್ನು ಬೈಬಲ್‌ ಸೈತಾನ ಅಂತ ಕರೆಯುತ್ತೆ. ಯೆಹೋವನು ಆಳುವ ವಿಧಾನನೇ ಸರಿಯಿಲ್ಲ, ದೇವರ ಆಳ್ವಿಕೆ ಮತ್ತು ಸಹಾಯ ಇಲ್ಲದೇನೆ ಮಾನವರು ಸಂತೋಷವಾಗಿ ಇರಬಹುದು ಅಂತ ಸುಳ್ಳು ಹೇಳಿದ. ಇದನ್ನ ಮೊದಲ ಮಾನವರಾದ ಆದಾಮ-ಹವ್ವ ನಂಬಿದ್ರು. ಸೈತಾನನ ಜೊತೆ ಸೇರಿ ಇವರೂ ದೇವರ ಆಳ್ವಿಕೆ ವಿರುದ್ಧ ದಂಗೆ ಎದ್ರು.—ಆದಿಕಾಂಡ 3:1-6; ಪ್ರಕಟನೆ 12:9.

ದೇವರ ಆಳ್ವಿಕೆ ಬೇಡ ಅಂತ ಆದಾಮ-ಹವ್ವ ತಿರಸ್ಕರಿಸಿದ್ದರಿಂದ ಏದೆನ್‌ ತೋಟದಲ್ಲಿ ಪೂರ್ಣ ಆರೋಗ್ಯದಿಂದ ಶಾಶ್ವತವಾಗಿ ಜೀವಿಸೋ ಅವಕಾಶ ಕಳಕೊಂಡರು. (ಆದಿಕಾಂಡ 3:17-19) ಅವರು ಮಾಡಿದ ತಪ್ಪಿನ ಪರಿಣಾಮನಾ ಅವರ ಮಕ್ಕಳೂ ಅನುಭವಿಸಿದ್ರು. ಆದಾಮ ತಪ್ಪು ಮಾಡಿದ್ರಿಂದ ‘ಪಾಪ ಮತ್ತು ಮರಣ ಜನರಿಗೆ ಬಂತು’ ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 5:12) ಅಷ್ಟೇ ಅಲ್ಲ, ಪಾಪದ ಪರಿಣಾಮವಾಗಿ ‘ಮನುಷ್ಯನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಹಾನಿ ಉಂಟುಮಾಡುತ್ತಿದ್ದಾನೆ.’ (ಪ್ರಸಂಗಿ 8:9) ಇನ್ನೊಂದು ಮಾತಲ್ಲಿ ಹೇಳೋದಾದ್ರೆ ಮನುಷ್ಯನ ಆಳ್ವಿಕೆ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿ ಕೊಟ್ಟಿದೆ.

ಮಾನವ ಆಳ್ವಿಕೆಯ ಆರಂಭ

ನಿಮ್ರೋದ ಅಹಂಕಾರದಿಂದ ನಿಂತಿದ್ದಾನೆ. ಹಿಂದೆ ಜನರೆಲ್ಲಾ ಕಟ್ಟಡ ಕಟ್ಟುತ್ತಿದ್ದಾರೆ.

ದೇವರ ವಿರುದ್ಧ ನಿಮ್ರೋದನ ದಂಗೆ

ಭೂಮಿಯಲ್ಲಿ ಮೊದಲ ಆಳ್ವಿಕೆ ನಡೆಸಿದ ವ್ಯಕ್ತಿಯ ಹೆಸರು ನಿಮ್ರೋದ ಅಂತ ಬೈಬಲ್‌ ಹೇಳುತ್ತೆ. ಇವನು ಸಹ ಯೆಹೋವನ ಆಳ್ವಿಕೆ ವಿರುದ್ಧ ದಂಗೆ ಎದ್ದ. ಅಂದಿನಿಂದ ಇಂದಿನವರೆಗೂ ಅಧಿಕಾರಿಗಳು ತಮ್ಮ ಅಧಿಕಾರನಾ ದುರಪಯೋಗಿಸ್ತಾ ಬಂದಿದ್ದಾರೆ. ಈ ದಬ್ಬಾಳಿಕೆ 3,000 ವರ್ಷಗಳ ಹಿಂದೆನೂ ಇತ್ತು ಅಂತ ಸೊಲೊಮೋನ ಎಂಬ ಚಕ್ರವರ್ತಿ ಹೇಳಿದ ಮಾತಿನಿಂದ ಗೊತ್ತಾಗುತ್ತೆ. ಅವನು ಹೇಳಿದ್ದು: “ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ.”—ಪ್ರಸಂಗಿ 4:1.

ಪರಿಸ್ಥಿತಿ ಈಗೇನು ಬದಲಾಗಿಲ್ಲ, ಹಾಗೇ ಇದೆ. ವಿಶ್ವ ಸಂಸ್ಥೆಯ 2009 ರ ಒಂದು ಪತ್ರಿಕೆಯ ಪ್ರಕಾರ ಕೆಟ್ಟ ಆಳ್ವಿಕೆನೇ “ನಮ್ಮ ಸಮಾಜದಲ್ಲಿರೋ ಕೆಟ್ಟತನಕ್ಕೆ ಒಂದು ಮುಖ್ಯ ಕಾರಣ.”

ಮಾನವ ಆಳ್ವಿಕೆಯ ಕೊನೆ!

ಈ ಭೂಮಿನಾ ಆಳಲು ಒಳ್ಳೇ ನಾಯಕರ ಮತ್ತು ಒಳ್ಳೇ ಸರ್ಕಾರದ ಅವಶ್ಯಕತೆ ಇದೆ. ಅಂಥ ಸರ್ಕಾರವನ್ನು ದೇವರು ಬಲುಬೇಗನೆ ತರುತ್ತಾನೆ!

ಕೊಲಾಜ್‌: ಮಾನವ ಆಳ್ವಿಕೆಯ ಪರಿಣಾಮಗಳು. 1. ಒಬ್ಬ ಹೆಂಗಸು ಕೊಳಕಾಗಿರುವ ದಾರಿಯಲ್ಲಿ ಅಳುತ್ತಿರುವ ತನ್ನ ಮಗುವನ್ನು ಹಿಡಿದುಕೊಂಡು ಕೂತಿದ್ದಾಳೆ. 2. ಕಾಯಿಲೆ ಬಂದಿರುವ ಅಜ್ಜ ಆಸ್ಪತ್ರೆಯಲ್ಲಿ ಇದ್ದಾರೆ. 3. ಯುದ್ಧದಲ್ಲಿ ಸೈನಿಕರು ಗುಂಡು ಹಾರಿಸುತ್ತಿದ್ದಾರೆ. 4. ಕೋಪದಿಂದಿರುವ ಪ್ರತಿಭಟನಾಕಾರರು ಬ್ಯಾನರ್‌ಗಳನ್ನು ಹಿಡಿದು ಕಿರುಚುತ್ತಿದ್ದಾರೆ. 5. ಒಬ್ಬ ಹೆಂಗಸು ಮತ್ತು ಅವರ ಮಗಳು ಮನೆ ಬಾಗಿಲಿನ ಮುಂದೆ ನಿಂತಿದ್ದಾರೆ ಮತ್ತು ಅವರ ಮನೆಯ ಮುಂಬಾಗಿಲಿನ ಗಾಜು ಒಡೆದು ಹೋಗಿದೆ. 6. ಒಂದು ಸಿಟಿ ತುಂಬಾ ಬರೀ ಹೊಗೆ ಮತ್ತು ಕರೆಂಟ್‌ ವೈರ್‌ಗಳೇ ಇದೆ.

ಎಷ್ಟೇ ಒಳ್ಳೇ ಸರ್ಕಾರ ಬಂದ್ರೂ ಮಾನವರ ಕಷ್ಟ-ಸಮಸ್ಯೆಗಳಿಗೆ ಸಿಗಲಿಲ್ಲ ಪರಿಹಾರ

ದೇವರು ಮಾನವ ಸರ್ಕಾರಗಳನ್ನೆಲ್ಲಾ ತೆಗೆದು ತನ್ನ ಆಳ್ವಿಕೆ ಅಥವಾ ಸರ್ಕಾರನಾ ಸ್ಥಾಪಿಸುತ್ತಾನೆ. ಅದು ‘ಶಾಶ್ವತವಾಗಿ ನಿಲ್ಲುತ್ತೆ.’ (ದಾನಿಯೇಲ 2:44) ಈ ಸರ್ಕಾರ ಬರಲಿ ಅಂತಾನೇ ಅನೇಕ ಜನರು ಪ್ರಾರ್ಥಿಸುತ್ತಿದ್ದಾರೆ. (ಮತ್ತಾಯ 6:9, 10) ಈ ಸರ್ಕಾರಕ್ಕೆ ದೇವರು ಒಬ್ಬ ಉತ್ತಮ ನಾಯಕನನ್ನು ಆರಿಸಿದ್ದಾನೆ. ಆ ನಾಯಕ ಯಾರಿರಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ