ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/09 ಪು. 1
  • ಉತ್ತರಿಸುವುದು ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಉತ್ತರಿಸುವುದು ಹೇಗೆ?
  • 2009 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನೀವು ಉತ್ತರ ಕೊಡಬೇಕಾದ ರೀತಿಯನ್ನು ತಿಳಿದುಕೊಳ್ಳಿರಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಮಹಾ ಶಿಷ್ಯ-ರಚಕನನ್ನು ಅನುಕರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
2009 ನಮ್ಮ ರಾಜ್ಯದ ಸೇವೆ
km 9/09 ಪು. 1

ಉತ್ತರಿಸುವುದು ಹೇಗೆ?

1. ಜನರ ಪ್ರಶ್ನೆಗೆ ಉತ್ತರಿಸುವ ವಿಷಯದಲ್ಲಿ ಯೇಸುವಿನ ಮಾದರಿಯನ್ನು ಏಕೆ ಅನುಕರಿಸಬೇಕು?

1 ಜನರ ಪ್ರಶ್ನೆಗಳಿಗೆ ಯೇಸು ಉತ್ತರಿಸಿದ ಪರಿಣಾಮಕಾರಿ ವಿಧವು ಇವತ್ತಿಗೂ ಅನೇಕರನ್ನು ಬೆರಗುಗೊಳಿಸುತ್ತದೆ. ಇಂದು ಶುಶ್ರೂಷೆಯಲ್ಲಿ ಜನರು ಕೇಳುವ ವಿವಿಧ ಪ್ರಶ್ನೆಗಳನ್ನು ಉತ್ತರಿಸುವ ವಿಷಯದಲ್ಲಿ ನಾವು ಯೇಸುವಿನ ಮಾದರಿಯನ್ನು ಅನುಕರಿಸಬೇಕು.—1 ಪೇತ್ರ 2:21.

2. ಪರಿಣಾಮಕಾರಿ ಉತ್ತರ ಕೊಡಲು ನಮಗೆ ಯಾವುದು ಸಹಾಯ ಮಾಡಬಹುದು?

2 ಮೊದಲು ಕಿವಿಗೊಡಿ: ಪ್ರಶ್ನೆ ಕೇಳಿದವನು ಏಕೆ ಆ ಪ್ರಶ್ನೆ ಕೇಳಿದ್ದಾನೆಂಬುದರ ಬಗ್ಗೆ ಯೇಸು ಯೋಚಿಸಿದನು. ನಾವು ಸಹ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆಯೆಂದು ತಿಳಿದುಕೊಳ್ಳಬೇಕು. ಉದಾಹರಣೆಗೆ, “ಯೇಸುವನ್ನು ನಂಬುತ್ತೀರೋ?” ಎಂದು ಯಾರಾದರೂ ಕೇಳುವಾಗ ಅವರಿಗೆ ನಿಜವಾಗಿ, ನಾವೇಕೆ ಕ್ರಿಸ್ಮಸ್‌ ಹಬ್ಬ ಆಚರಿಸುತ್ತಿಲ್ಲ ಎಂದು ತಿಳಿಯಲು ಮನಸ್ಸಿರಬಹುದು. ಅವರ ಪ್ರಶ್ನೆಗೆ ಕಾರಣವೇನೆಂದು ತಿಳಿಯುವಲ್ಲಿ ನೀವು ಹೆಚ್ಚು ಪರಿಣಾಮಕಾರಿಯಾಗಿ ಉತ್ತರಿಸಬಹುದು. ಇದಕ್ಕಾಗಿ ಕೆಲವೊಮ್ಮೆ ಪ್ರಶ್ನೆಗಳನ್ನು ಕೇಳಬೇಕಾಗಬಹುದು.—ಲೂಕ 10:25-37.

3. ತೃಪ್ತಿಕರವಾದ ಶಾಸ್ತ್ರಾಧಾರಿತ ಉತ್ತರ ಕೊಡಲು ನಮಗೆ ಯಾವ ಸಹಾಯಕಗಳಿವೆ?

3 ದೇವರ ವಾಕ್ಯದಿಂದ ಉತ್ತರಿಸಿ: ಅನೇಕ ವೇಳೆ ಯಾವುದೇ ಪ್ರಶ್ನೆಗೆ ಬೈಬಲಿನಿಂದಲೇ ಉತ್ತರ ತೋರಿಸುವುದು ಉತ್ತಮ. (2 ತಿಮೊ. 3:16, 17; ಇಬ್ರಿ. 4:12) ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆ ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಲ್ಲಿರುವ “ಚರ್ಚೆಗಾಗಿ ಬೈಬಲ್‌ ವಿಷಯಗಳು” ಸರಿಯಾದ ಉತ್ತರ ಕೊಡಲು ಸಹಾಯಕವಾಗಿವೆ. ಪ್ರಶ್ನೆ ಕೇಳಿದ ವ್ಯಕ್ತಿ ಬೈಬಲನ್ನು ನಂಬದಿದ್ದರೂ ನೀವು ಅದರಲ್ಲಿರುವ ವಿಷಯವನ್ನು ಜಾಣ್ಮೆಯಿಂದ ತಿಳಿಸಬಹುದು. ನಿಖರವೆಂದು ರುಜುವಾಗಿರುವಂಥ ಬೈಬಲಿನ ವಿವೇಕಭರಿತ ಸಲಹೆಯನ್ನು ಅವನು ಪರಿಶೀಲಿಸಿ ನೋಡುವಂತೆ ಉತ್ತೇಜಿಸಿ. ಉತ್ತರಿಸುವ ವಿಷಯದಲ್ಲಿ ಯೇಸುವನ್ನು ಅನುಕರಿಸುವಾಗ ‘ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಂತೆ’ ನಿಮ್ಮ ಉತ್ತರಗಳು ಘನತೆಯುಳ್ಳದ್ದೂ ಆಕರ್ಷಕವೂ ಬೆಲೆಬಾಳುವಂಥದ್ದೂ ಆಗಿರುವುವು.—ಜ್ಞಾನೋ. 25:11.

4. ಯಾವ ಸಂದರ್ಭಗಳಲ್ಲಿ ಪ್ರತಿಯೊಂದು ಪ್ರಶ್ನೆಯನ್ನು ಉತ್ತರಿಸದೇ ಇರುವುದು ಉತ್ತಮ?

4 ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಬೇಕೋ? ಒಂದು ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿರದಿದ್ದಲ್ಲಿ ಆಗೇನು? “ನನಗೆ ಆ ಬಗ್ಗೆ ಗೊತ್ತಿಲ್ಲ. ಆದರೆ ಸಂಶೋಧನೆ ಮಾಡಿ ನಿಮಗೆ ಉತ್ತರ ತಿಳಿಸುತ್ತೇನೆ” ಎಂದು ಹೇಳಲು ಸಂಕೋಚಪಡಬೇಡಿ. ಹೀಗೆ ವಿನಯಭಾವ ಮತ್ತು ವೈಯಕ್ತಿಕ ಆಸಕ್ತಿಯನ್ನು ತೋರಿಸುವಲ್ಲಿ ನಿಮ್ಮ ಮುಂದಿನ ಭೇಟಿಗೆ ಮನೆಯವನು ಒಪ್ಪಿಕೊಳ್ಳಬಹುದು. ವಾದಕ್ಕಿಳಿಯುವ ಉದ್ದೇಶದಿಂದ ವಿರೋಧಿಗಳು ಪ್ರಶ್ನೆ ಕೇಳುತ್ತಾರೆಂದು ನಿಮಗೆ ತಿಳಿದುಬಂದಲ್ಲಿ ಹೆಚ್ಚು ಮಾತಾಡಬೇಡಿ. ಹೀಗೆ ಯೇಸುವನ್ನು ಅನುಕರಿಸಿರಿ. (ಲೂಕ 20:1-8) ಒಂದುವೇಳೆ ಮನೆಯವನು ಸತ್ಯದಲ್ಲಿ ಯಥಾರ್ಥ ಆಸಕ್ತಿಯಿಲ್ಲದೆ ಸುಮ್ಮನೆ ನಿಮ್ಮನ್ನು ವಾದಕ್ಕೆಳೆಯಲು ಪ್ರಯತ್ನಿಸುವಲ್ಲಿ ವಿನಯಪೂರ್ವಕವಾಗಿ ಸಂಭಾಷಣೆಯನ್ನು ನಿಲ್ಲಿಸಿ. ಆ ಸಮಯವನ್ನು ಯಥಾರ್ಥ ಜನರನ್ನು ಹುಡುಕಲು ಬಳಸಿರಿ.—ಮತ್ತಾ. 7:6.

5. ಉತ್ತರ ಕೊಡುವ ವಿಷಯದಲ್ಲಿ ಯೇಸು ಯಾವ ಮಾದರಿಯಿಟ್ಟನು?

5 ‘ಸತ್ಯಕ್ಕೆ ಸಾಕ್ಷಿಹೇಳುವ’ ತನ್ನ ನೇಮಕವನ್ನು ಪೂರೈಸಲು ಯೆಹೋವನ ಮೇಲೆ ಆತುಕೊಳ್ಳುವುದು ಅತ್ಯಗತ್ಯವೆಂದು ಯೇಸುವಿಗೆ ತಿಳಿದಿತ್ತು. ಆ ನೇಮಕದಲ್ಲಿ ಯಥಾರ್ಥ ಪ್ರಶ್ನೆಗಳಿಗೆ ಉತ್ತರಿಸುವುದೂ ಸೇರಿತ್ತು. (ಯೋಹಾ. 18:37) ‘ನಿತ್ಯಜೀವಕ್ಕಾಗಿ ಯೋಗ್ಯ ಮನೋಭಾವವಿರುವ’ ಜನರ ಪ್ರಶ್ನೆಗಳಿಗೆ ಉತ್ತರಿಸುವ ವಿಷಯದಲ್ಲಿ ಯೇಸುವನ್ನು ಅನುಕರಿಸುವ ಎಂಥ ಸುಯೋಗ ನಮಗಿದೆ!—ಅ. ಕಾ. 13:48.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ