ನಿಮಗಿರುವ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತೊ?
ಇಂದು ಭೂಸುತ್ತಲೂ ಇರುವ ವೈದ್ಯಕೀಯ ಕೇಂದ್ರಗಳಲ್ಲಿ ರಕ್ತರಹಿತ ಶಸ್ತ್ರಕ್ರಿಯೆಗಳನ್ನು ಹೆಚ್ಚೆಚ್ಚಾಗಿ ನಡೆಸಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಲಭ್ಯವಿರುವ ರಕ್ತರಹಿತ ಚಿಕಿತ್ಸೆಯ ಬೇರೆ ಬೇರೆ ವಿಧಾನಗಳ ಕುರಿತು ನಿಮಗೆ ಪೂರ್ಣ ಮಾಹಿತಿ ಇದೆಯೋ? ಇದರ ಬಗ್ಗೆ ತಿಳಿದುಕೊಂಡಾಗಲೇ ವೈದ್ಯಕೀಯ ಚಿಕಿತ್ಸೆ ಮತ್ತು ಶಸ್ತ್ರಕ್ರಿಯೆಯ ಸಂಬಂಧದಲ್ಲಿ ನೀವು ತಿಳುವಳಿಕೆಯಿಂದ ಕೂಡಿದ ನಿರ್ಣಯಗಳನ್ನು ಮಾಡಲು ಶಕ್ತರಾಗುವಿರಿ. ಆದುದರಿಂದ ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ (ಇಂಗ್ಲಿಷ್) ವಿಡಿಯೋ ನೋಡಿ. ಇಂಗ್ಲಿಷ್ ಅರ್ಥವಾಗದಿದ್ದರೆ ಈ ಲೇಖನದ ಕೊನೆ ಪ್ಯಾರದಲ್ಲಿ ಕೊಡಲಾಗಿರುವ ರೆಫರೆನ್ಸ್ ಅನ್ನು ನಿಮ್ಮ ಸ್ವಂತ ಭಾಷೆಯಲ್ಲಿ ಓದಿ. ಬಳಿಕ, ನೀವು ಕಲಿತ ವಿಷಯಗಳನ್ನು ಈ ಕೆಳಕಂಡ ಪ್ರಶ್ನೆಗಳನ್ನು ಬಳಸಿ ಪ್ರಾರ್ಥನಾಪೂರ್ವಕವಾಗಿ ಪುನರವಲೋಕಿಸಿ.—ಸೂಚನೆ: ಈ ವಿಡಿಯೋದಲ್ಲಿ ಶಸ್ತ್ರಕ್ರಿಯೆಯ ದೃಶ್ಯಗಳಿವೆ. ಆದ್ದರಿಂದ ಚಿಕ್ಕ ಮಕ್ಕಳು ಈ ವಿಡಿಯೋ ವೀಕ್ಷಿಸಬೇಕೊ ಇಲ್ಲವೊ ಎಂಬದನ್ನು ಹೆತ್ತವರು ನಿರ್ಧರಿಸಬೇಕು.
(1) ಯೆಹೋವನ ಸಾಕ್ಷಿಗಳು ರಕ್ತಪೂರಣಗಳನ್ನು ನಿರಾಕರಿಸುವುದಕ್ಕೆ ಮುಖ್ಯ ಕಾರಣವೇನು? (2) ಯೆಹೋವನ ಸಾಕ್ಷಿಗಳು ಯಾವ ವಿಧದ ವೈದ್ಯಕೀಯ ಆರೈಕೆಯನ್ನು ಪಡೆಯಲು ಇಷ್ಟಪಡುತ್ತಾರೆ? (3) ರೋಗಿಗಳಿಗೆ ಯಾವ ಮೂಲಭೂತ ಹಕ್ಕಿದೆ? (4) ರಕ್ತದ ಅಂಶಗಳು ಅಂದರೇನು? (5) (ಎ) ಕೆಲವು ಕ್ರೈಸ್ತರು ರಕ್ತದಿಂದ ತೆಗೆಯಲಾಗಿರುವ ಚಿಕ್ಕ ಅಂಶಗಳನ್ನು ಸ್ವೀಕರಿಸುವುದೇಕೆ? (ಬಿ) ಇನ್ನಿತರ ಕ್ರೈಸ್ತರು ರಕ್ತದಿಂದ ತೆಗೆಯಲಾಗಿರುವ ಯಾವುದನ್ನೂ ಸ್ವೀಕರಿಸುವುದಿಲ್ಲವೇಕೆ? (6) ತನ್ನ ರಕ್ತವನ್ನು ದಾನಮಾಡುವ ಹಾಗೂ ತನ್ನ ರಕ್ತವನ್ನು ಶೇಖರಿಸಿ ಮುಂದೆ ಅದನ್ನೇ ಬಳಸುವುದರ ಕುರಿತು ಕ್ರೈಸ್ತನೊಬ್ಬನ ನೋಟವೇನಾಗಿರಬೇಕು? (7) ರಕ್ತಕ್ಕೆ ಸಂಬಂಧಪಟ್ಟ ಕೆಲವೊಂದು ವೈದ್ಯಕೀಯ ಕಾರ್ಯವಿಧಾನಗಳಾವುವು? ವಿವರಿಸಿ. (8) ರಕ್ತಕ್ಕೆ ಸಂಬಂಧಪಟ್ಟ ವೈದ್ಯಕೀಯ ಕಾರ್ಯವಿಧಾನಗಳ ವಿಷಯದಲ್ಲಿ ಪ್ರತಿಯೊಬ್ಬ ಕ್ರೈಸ್ತನಿಗೂ ಯಾವ ಗಂಭೀರ ಜವಾಬ್ದಾರಿಯಿದೆ? (9) ಯಾವುದೇ ರಕ್ತಪೂರಣ-ಬದಲಿಯ ಬಗ್ಗೆ ನಿಮಗೆ ಯಾವ ಮಾಹಿತಿ ಕೊಡಲ್ಪಡಬೇಕು? (10) ಗಂಭೀರವಾದ ಜಟಿಲ ಶಸ್ತ್ರಕ್ರಿಯೆಗಳನ್ನು ರಕ್ತಪೂರಣಗಳಿಲ್ಲದೆ ನಡೆಸಸಾಧ್ಯವೋ?
ಈ ವಿಡಿಯೋ ತೋರಿಸುವ ಚಿಕಿತ್ಸೆಗಳಲ್ಲಿ ಕೆಲವೊಂದನ್ನು ಸ್ವೀಕರಿಸಬೇಕೋ ಬೇಡವೋ ಎಂಬ ನಿರ್ಣಯವನ್ನು ಪ್ರತಿಯೊಬ್ಬರು ತಮ್ಮತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗನುಸಾರ ಮಾಡತಕ್ಕದ್ದು. ನಿಮಗೆ ಮತ್ತು ನಿಮ್ಮ ಮಕ್ಕಳಿಗಾಗಿ ಯಾವ ಔಷಧೋಪಚಾರ ಹಾಗೂ ಚಿಕಿತ್ಸಾಕ್ರಮಗಳನ್ನು ತೆಗೆದುಕೊಳ್ಳುವಿರಿ ಎಂಬುದನ್ನು ನಿರ್ಣಯಿಸಿದ ಬಳಿಕ ನಿಮ್ಮ ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಅನ್ನು ಭರ್ತಿಮಾಡಿದ್ದೀರೋ? ಈ ಕುರಿತ ಸಂಪೂರ್ಣ ಚರ್ಚೆಗಾಗಿ 2004, ಜೂನ್ 15ರ ಮತ್ತು 2000, ಅಕ್ಟೋಬರ್ 15ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ಲೇಖನವನ್ನು ಜಾಗ್ರತೆಯಿಂದ ಪರಿಶೀಲಿಸಿ. ಆ ಬಳಿಕ, ರಕ್ತರಹಿತ ಚಿಕಿತ್ಸೆಯ ಯಾವ ವಿಧಾನಗಳನ್ನು ಸ್ವೀಕರಿಸುವಿರಿ ಅಥವಾ ನಿರಾಕರಿಸುವಿರಿ ಎಂಬ ವಿಷಯದಲ್ಲಿ ವೈಯಕ್ತಿಕ ನಿರ್ಣಯಗಳನ್ನು ಮಾಡಲು 2006, ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯ “ರಕ್ತದ ಅಂಶಗಳ ಬಗ್ಗೆ ಮತ್ತು ನನ್ನ ಸ್ವಂತ ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ನನ್ನ ನಿರ್ಣಯವೇನು?” ಲೇಖನದಲ್ಲಿರುವ ವರ್ಕ್ ಶೀಟನ್ನು ಉಪಯೋಗಿಸಿರಿ. ಕೊನೆಯಲ್ಲಿ, ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ನಲ್ಲಿ ನಿಮ್ಮ ಆಯ್ಕೆಗಳನ್ನು ನಿಖರವಾಗಿ ಬರೆದಿದ್ದೀರೆಂದು ಖಚಿತಪಡಿಸಿಕೊಳ್ಳಿ. ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲಿಕ್ಕಾಗಿ ನೀವು ಯಾರ ಹೆಸರನ್ನು ಬರೆದಿದ್ದೀರೊ ಅವರಿಗೆ ಮತ್ತು ಸಾಕ್ಷಿಗಳಲ್ಲದ ಕುಟುಂಬದವರಿಗೆ ನಿಮ್ಮ ನಿರ್ಣಯಗಳ ಬಗ್ಗೆ ತಿಳಿಸಿ.