ಕ್ಷೇತ್ರ ಸೇವಾ ಕೂಟಗಳಲ್ಲಿ ಇನ್ನು ಮುಂದೆ ದಿನದ ವಚನವನ್ನು ಚರ್ಚಿಸಲಾಗುವುದಿಲ್ಲ
ಈ ಹಿಂದೆ, ಶುಶ್ರೂಷೆಗೆ ಸಂಬಂಧಿಸಿದ ದಿನದ ವಚನವನ್ನು ಕ್ಷೇತ್ರ ಸೇವಾ ಕೂಟದಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗುತ್ತಿತ್ತು. ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಕ್ಷೇತ್ರ ಸೇವಾ ಕೂಟಗಳಲ್ಲಿ ಪ್ರತಿನಿತ್ಯ ಶಾಸ್ತ್ರವಚನಗಳನ್ನು ಪರೀಕ್ಷಿಸುವುದು ಪುಸ್ತಿಕೆಯನ್ನು ಚರ್ಚಿಸಬಾರದು. ಎಂದಿನಂತೆ ಕೂಟ ನಡೆಸುವವರು ಬೈಬಲ್, ನಮ್ಮ ರಾಜ್ಯ ಸೇವೆ, ಶುಶ್ರೂಷಾ ಶಾಲೆ ಪುಸ್ತಕ, ರೀಸನಿಂಗ್ ಪುಸ್ತಕ ಮತ್ತು ಶುಶ್ರೂಷೆಗೆ ಸಂಬಂಧಪಟ್ಟ ಇನ್ನಿತರ ಮಾಹಿತಿಯನ್ನು ಬಳಸಬಹುದು. ಕೂಟ ನಡೆಸುವವರು ಆ ದಿನ ಸೇವೆಗೆ ಹೋಗಲಿರುವವರಿಗೆ ಸಹಾಯವಾಗುವ ಪ್ರಾಯೋಗಿಕ ಅಂಶಗಳನ್ನು ಚರ್ಚಿಸತಕ್ಕದ್ದು. ಹಿಂದಿನಂತೆಯೇ ಈ ಕೂಟ 10-15 ನಿಮಿಷಗಳನ್ನು ಮೀರಬಾರದು, ಅದರಲ್ಲೂ ಅದನ್ನು ಸಭಾ ಕೂಟಗಳ ನಂತರ ನಡೆಸುವಲ್ಲಿ ಸಮಯವನ್ನು ಇನ್ನೂ ಕಡಿಮೆಮಾಡತಕ್ಕದ್ದು.