ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಿ
1. 2013ರ ವಿಶೇಷ ಸಮ್ಮೇಳನ ದಿನದ ಮುಖ್ಯ ವಿಷಯ ಯಾವುದು? ಕಾರ್ಯಕ್ರಮದ ಉದ್ದೇಶವೇನು?
1 ನಮ್ಮ ಮನಸ್ಸಾಕ್ಷಿಗೆ ವಿರುದ್ಧ ನಡೆಯುವಂತೆ ಮಾಡುವ ಸನ್ನಿವೇಶಗಳು ಪ್ರತಿ ದಿನ ಎದುರಾಗುತ್ತವೆ. ಹಾಗಾಗಿ 2013ರ ಸೇವಾ ವರ್ಷದ ವಿಶೇಷ ಸಮ್ಮೇಳನದ ಮುಖ್ಯ ವಿಷಯ “ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಿ” ಎಂದಾಗಿದೆ. ಇದು 2012, ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ. (1 ತಿಮೊ. 1:19) ಮನಸ್ಸಾಕ್ಷಿ ಎಂಬುದು ಸೃಷ್ಟಿಕರ್ತನು ನೀಡಿರುವ ಒಂದು ವಿಶೇಷ ಉಡುಗೊರೆ. ಆದರೆ ನಾವದನ್ನು ಹೇಗೆ ಉಪಯೋಗಿಸುತ್ತಿದ್ದೇವೆ ಎಂಬದನ್ನು ಗಂಭೀರವಾಗಿ ಪರಿಶೀಲಿಸುವಂತೆ ಸಹಾಯಮಾಡುವುದೇ ಈ ಸಮ್ಮೇಳನ ಕಾರ್ಯಕ್ರಮದ ಉದ್ದೇಶ.
2. ಯಾವ ಮುಖ್ಯ ಪ್ರಶ್ನೆಗಳಿಗೆ ಕಾರ್ಯಕ್ರಮದಲ್ಲಿ ಉತ್ತರ ಸಿಗಲಿದೆ?
2 ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ: ಕಾರ್ಯಕ್ರಮವು ಮನಸ್ಸಾಕ್ಷಿಗೆ ಸಂಬಂಧಿಸಿದ ಏಳು ಮುಖ್ಯ ಪ್ರಶ್ನೆಗಳಿಗೆ ಉತ್ತರ ನೀಡಲಿದೆ:
• ಮನಸ್ಸಾಕ್ಷಿಯನ್ನು ಹಾಳುಮಾಡುವ ಸಂಗತಿಗಳಾವುವು?
• ನಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುವುದು ಹೇಗೆ?
• ಎಲ್ಲ ಮನುಷ್ಯರ ರಕ್ತಾಪರಾಧದಿಂದ ಮುಕ್ತರಾಗಿರಲು ಹೇಗೆ ಸಾಧ್ಯ?
• ನಮ್ಮ ಯೋಚನೆ ಮತ್ತು ನಡತೆ ಬೈಬಲ್ ಸೂತ್ರಕ್ಕೆ ಹೊಂದಿಕೆಯಲ್ಲಿದ್ದರೆ ಅದು ನಮ್ಮ ಬಗ್ಗೆ ಏನನ್ನು ತಿಳಿಸುತ್ತದೆ?
• ಇತರರ ಮನಸ್ಸಾಕ್ಷಿಯನ್ನು ಘಾಸಿಗೊಳಿಸದಿರುವುದು ಹೇಗೆ?
• ಯುವ ಜನರೇ, ಒತ್ತಡ ಬಂದಾಗಲೂ ನಿಮ್ಮ ಕ್ರೈಸ್ತ ನಿಲುವನ್ನು ಬಿಟ್ಟುಕೊಡದೆ ಹೇಗೆ ಅಚಲವಾಗಿ ನಿಲ್ಲಬಲ್ಲಿರಿ?
• ಪವಿತ್ರಾತ್ಮ ಮಾರ್ಗದರ್ಶಿತ ಮನಸ್ಸಾಕ್ಷಿಯನ್ನು ಪಾಲಿಸುವುದರಿಂದ ಯಾವ ಆಶೀರ್ವಾದಗಳು ಸಿಗುತ್ತವೆ?
3. ಕಾರ್ಯಕ್ರಮದಿಂದ ನಮಗೆ ಸಿಗಲಿರುವ ಪ್ರಯೋಜನವೇನು?
3 ಸೈತಾನನು ನಮ್ಮ ಮನಸ್ಸಾಕ್ಷಿಯನ್ನು ಹಾಳುಮಾಡಲು ಯತ್ನಿಸುತ್ತಾನೆ. ಆದರೆ ಯೆಹೋವನ ಸಹಾಯದಿಂದ ನಾವು ಅವನನ್ನು ಎದುರಿಸಬಲ್ಲೆವು. ಸ್ವರ್ಗದಲ್ಲಿರುವ ನಮ್ಮ ಪ್ರೀತಿಯ ತಂದೆಯಾದ ಯೆಹೋವನು ತನ್ನ ವಾಕ್ಯ ಮತ್ತು ಸಂಘಟನೆಯ ಮೂಲಕ, “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ಹೇಳುತ್ತಿದ್ದಾನೆ. (ಯೆಶಾ. 30:21) ಈ ಸಮ್ಮೇಳನವು ಯೆಹೋವನು ಮಾರ್ಗದರ್ಶಿಸುವ ಒಂದು ವಿಧವಾಗಿದೆ. ಹಾಗಾಗಿ ಇಡೀ ಕಾರ್ಯಕ್ರಮವನ್ನು ಹಾಜರಾಗಲು ಯೋಜನೆಮಾಡಿ. ಹಾಜರಿದ್ದಾಗ ತದೇಕಚಿತ್ತದಿಂದ ಕಿವಿಗೊಡಿ. ವೈಯಕ್ತಿಕ ಜೀವನದಲ್ಲಿ ಅನ್ವಯಿಸಬಹುದಾದ ಅಂಶಗಳನ್ನು ಪರಿಗಣಿಸಿ. ಕುಟುಂಬವಾಗಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿ. ನಮಗೆ ಸಿಗುವ ಸಲಹೆಗಳನ್ನು ಅನ್ವಯಿಸುವಾಗ “ಒಳ್ಳೇ ಮನಸ್ಸಾಕ್ಷಿ” ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೈತಾನನ ಲೋಕ ನೀಡುವ ಕ್ಷಣಿಕ ಸುಖದ ಹಿಂದೆ ಹೋಗಿ ದಾರಿತಪ್ಪದಂತೆ ಅದು ಸಹಾಯಮಾಡುತ್ತದೆ.—1 ಪೇತ್ರ 3:16.