ಕಾವಲಿನಬುರುಜು ಪತ್ರಿಕೆಯಲ್ಲಿ ಹೊಸ ಲೇಖನ ಸರಣಿ!!
ಪ್ರತೀ ತಿಂಗಳ ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಆರಂಭಿಸಲು “ದೇವರ ವಾಕ್ಯದಿಂದ ಕಲಿಯಿರಿ” ಸರಣಿ ಲೇಖನಗಳನ್ನು ಉಪಯೋಗಿಸುತ್ತಿದ್ದೆವು. ಜನವರಿಯಿಂದ ಆರಂಭಿಸಿ ಇದರ ಬದಲು “ಬೈಬಲ್ ಕೊಡುವ ಉತ್ತರ” ಎಂಬ ಹೊಸ ಲೇಖನ ಸರಣಿ ಆರಂಭವಾಗಲಿದೆ. ಇದು ಸಾರ್ವಜನಿಕ ಆವೃತ್ತಿಯ ಕೊನೆ ಪುಟದಲ್ಲಿರುತ್ತದೆ. ಇದನ್ನು “ದೇವರ ವಾಕ್ಯದಿಂದ ಕಲಿಯಿರಿ” ಲೇಖನಗಳನ್ನು ಉಪಯೋಗಿಸುತ್ತಿದ್ದ ಅದೇ ರೀತಿಯಲ್ಲಿ ಉಪಯೋಗಿಸಬಹುದು. (km 6/11 ಪುಟ 2) ಪ್ರತೀ ತಿಂಗಳ ಮೊದಲ ಶನಿವಾರದಂದು ಈ ಲೇಖನಗಳಿಂದ ಬೈಬಲ್ ಅಧ್ಯಯನ ಆರಂಭಿಸಲು ನಮ್ಮ ರಾಜ್ಯ ಸೇವೆಯಲ್ಲಿ ಮಾದರಿ ನಿರೂಪಣೆ ಕೊಡಲಾಗುವುದು.