ನಮ್ಮ ಅಧಿಕೃತ ವೆಬ್ ಸೈಟ್—ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನಕ್ಕೆ ಬಳಸಿ
ಹೊಸ ಪತ್ರಿಕೆಯನ್ನು ಆನ್ಲೈನ್ನಲ್ಲಿ ಓದಿ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಮುದ್ರಿತ ಪ್ರತಿಗಳು ಸಭೆಯ ಮೂಲಕ ನಿಮ್ಮ ಕೈಸೇರುವ ಹಲವು ವಾರಗಳ ಮೊದಲೇ ಅವನ್ನು ಆನ್ಲೈನ್ನಲ್ಲಿ ಓದಿ. ಪತ್ರಿಕೆಗಳ ಆಡಿಯೋ ರೆಕಾರ್ಡಿಂಗನ್ನು ಆಲಿಸಿ.—“ಸಾಹಿತ್ಯಗಳು/ಪತ್ರಿಕೆಗಳು” ನೋಡಿ.
ವೆಬ್ ಸೈಟ್ನಲ್ಲಿ ಮಾತ್ರ ಲಭ್ಯವಿರುವ ಲೇಖನಗಳನ್ನು ಸಹ ಓದಿ: “ಯುವ ಜನರಿಗೆ,” “ನನಗಾಗಿ ಬೈಬಲ್ ಪಾಠಗಳು,” “ಕುಟುಂಬವಾಗಿ ವಿಮರ್ಶಿಸಲು,” “ಯುವಜನರ ಪ್ರಶ್ನೆ” ಮುಂತಾದ ಕೆಲವು ಲೇಖನಗಳು ಈಗ ವೆಬ್ ಸೈಟ್ನಲ್ಲಿ ಮಾತ್ರ ಲಭ್ಯ. ವೈಯಕ್ತಿಕ ಇಲ್ಲವೆ ಕುಟುಂಬ ಅಧ್ಯಯನದ ಸಮಯದಲ್ಲಿ ವೆಬ್ ಸೈಟ್ನ್ನು ತೆರೆದು ಈ ಲೇಖನಗಳನ್ನು ಪರಿಗಣಿಸಿ.—“ಬೈಬಲ್ ಬೋಧನೆಗಳು/ಮಕ್ಕಳಿಗೆ” ಅಥವಾ “ಬೈಬಲ್ ಬೋಧನೆಗಳು/ಹದಿವಯಸ್ಕರಿಗೆ.”
ತಾಜಾ ಸುದ್ದಿಯನ್ನು ತಿಳಿದುಕೊಳ್ಳಿ: ಉತ್ತೇಜಕ ವರದಿಗಳನ್ನೂ ಅನುಭವಗಳನ್ನೂ ಓದಿ. ಲೋಕಾದ್ಯಂತ ನಮ್ಮ ಕೆಲಸ ಹೇಗೆ ಪ್ರಗತಿಯಾಗುತ್ತಿದೆ ಎಂದು ತೋರಿಸುವ ವಿಡಿಯೋ ತುಣುಕುಗಳನ್ನು ನೋಡಿ. ಹಿಂಸೆ/ವಿಪತ್ತುಗಳ ವರದಿಯು, ಕಷ್ಟದಲ್ಲಿರುವ ಇಲ್ಲವೆ ತೊಂದರೆಗೆ ಒಳಗಾಗಿರುವ ಸಹೋದರರ ಹೆಸರೆತ್ತಿ ಪ್ರಾರ್ಥಿಸಲು ನಮಗೆ ನೆರವಾಗುವುದು. (ಯಾಕೋ. 5:16)—“ಸುದ್ದಿ” ನೋಡಿ.
ಆನ್ಲೈನ್ ಲೈಬ್ರರಿ ಉಪಯೋಗಿಸಿ ಸಂಶೋಧನೆ ಮಾಡಿ: ನಿಮ್ಮ ಭಾಷೆಯಲ್ಲಿ ಆನ್ಲೈನ್ ಲೈಬ್ರರಿ ಇರುವುದಾದರೆ ಕಂಪ್ಯೂಟರ್ ಇಲ್ಲವೆ ಮೊಬೈಲ್ನಿಂದಲೇ ದಿನದ ವಚನವನ್ನು ಓದಬಹುದು. ಅದರಲ್ಲಿ ಲಭ್ಯವಿರುವ ಇತ್ತೀಚಿನ ಸಾಹಿತ್ಯಗಳಿಂದ ಸಂಶೋಧನೆ ಕೂಡ ಮಾಡಬಹುದು.—“ಸಾಹಿತ್ಯಗಳು/ಆನ್ಲೈನ್ ಲೈಬ್ರರಿ” ನೋಡಿ ಅಥವಾ www.wol.jw.org ಎಂಬ ವಿಳಾಸ ಟೈಪ್ ಮಾಡಿ.
[ಪುಟ 4ರಲ್ಲಿರುವ ರೇಖಾಕೃತಿ]
(For fully formatted text, see publication)
ಪ್ರಯತ್ನಿಸಿ ನೋಡಿ
1 ಚಿತ್ರವನ್ನು ಅಥವಾ “ಡೌನ್ಲೋಡ್” ಕೊಂಡಿಯನ್ನು ಕ್ಲಿಕ್ಕಿಸಿ. ಚಿತ್ರವು PDF ರೂಪದಲ್ಲಿ ತೆರೆದುಕೊಳ್ಳುತ್ತದೆ. ಅದನ್ನು ಪ್ರಿಂಟ್ ಮಾಡಿ. ಅದರಲ್ಲಿರುವ ವಿಷಯವನ್ನು ಮಾಡುವ ಮೂಲಕ ನಿಮ್ಮ ಮಗು ಹೆಚ್ಚನ್ನು ಕಲಿಯಲು ಸಹಾಯ ನೀಡಿ.
2 ವಿಡಿಯೋ ನೋಡಲು “ಪ್ಲೇ” ಗುಂಡಿಯನ್ನು ಕ್ಲಿಕ್ಕಿಸಿ.