ಸ್ಮರಣೆಗಾಗಿ ಹರ್ಷ ಹೃದಯದಿಂದ ಸಿದ್ಧರಾಗಿ
1. ಸ್ಮರಣೆಯಂದು ಏನು ಮಾಡಲು ನಮಗೆ ವಿಶೇಷ ಕಾರಣವಿದೆ?
1 ಮಾರ್ಚ್ 26 ಮಂಗಳವಾರದಂದು ನಮಗೆ ಹರ್ಷಿಸಲು ಒಳ್ಳೇ ಕಾರಣವಿದೆ. ರಕ್ಷಣೆ ಪಡೆಯಬೇಕೆಂದು ದೇವರು ನಮಗಾಗಿ ಮಾಡಿರುವ ಏರ್ಪಾಡನ್ನು ನೆನಪು ಮಾಡಿಕೊಳ್ಳಲು ಅದು ಸೂಕ್ತ ದಿನ. (ಯೆಶಾ. 61:10) ಆ ಆಚರಣೆಗೆ ಸಿದ್ಧರಾಗಲು ಸಹ ಹರ್ಷ ಹೃದಯ ಸಹಾಯ ಮಾಡುತ್ತೆ. ಹೇಗೆ?
2. ಸ್ಮರಣೆಗಾಗಿ ತಯಾರಿ ಮಾಡಲು ನಮ್ಮನ್ನು ಯಾವುದು ಉತ್ತೇಜಿಸುತ್ತದೆ?
2 ಆಚರಣೆಗಾಗಿ ಸಿದ್ಧತೆ: ಕರ್ತರ ಸಂಧ್ಯಾ ಭೋಜನ ಮಹತ್ವದ ದಿನವಾದರೂ ಅದು ಸರಳವಾಗಿರುತ್ತದೆ. ಆ ದಿನದಲ್ಲಿ ಯಾವುದೇ ಪ್ರಮುಖ ವಿಷಯ ತಪ್ಪಿಹೋಗದಿರಲು ಮುನ್ತಯಾರಿ ಅಗತ್ಯ. (ಜ್ಞಾನೋ. 21:5) ಸರಿಯಾದ ಸಮಯ ಹಾಗೂ ಸ್ಥಳವನ್ನು ಆರಿಸಬೇಕು. ಕುರುಹುಗಳನ್ನು ಸಿದ್ಧಪಡಿಸಬೇಕು. ಕೂಟ ನಡೆಯುವ ಸ್ಥಳವನ್ನು ಚೆನ್ನಾಗಿ ಶುಚಿಗೊಳಿಸಬೇಕು. ಭಾಷಣವನ್ನು ಸಾದರಪಡಿಸುವವರು ಜಾಗ್ರತೆಯಿಂದ ತಯಾರಿ ಮಾಡಬೇಕು. ಅಟೆಂಡೆಂಟ್ರಿಗೆ ಮತ್ತು ಕುರುಹು ದಾಟಿಸುವವರಿಗೆ ಸರಿಯಾಗಿ ಸೂಚನೆಗಳನ್ನು ಕೊಟ್ಟಿರಬೇಕು. ಇದರಲ್ಲಿ ಹೆಚ್ಚಿನ ಸಿದ್ಧತೆಗಳನ್ನು ನೀವು ಈಗಾಗಲೇ ಮಾಡಿರಬಹುದು. ವಿಮೋಚನಾ ಮೌಲ್ಯದ ಕಡೆಗೆ ನಮಗಿರುವ ಗಣ್ಯತೆಯು ಈ ಪವಿತ್ರ ಸಂದರ್ಭಕ್ಕಾಗಿ ಚೆನ್ನಾಗಿ ಸಿದ್ಧತೆ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ.—1 ಪೇತ್ರ 1:8, 9.
3. ಕರ್ತರ ಸಂಧ್ಯಾ ಭೋಜನದ ದಿನಕ್ಕಾಗಿ ನಮ್ಮ ಹೃದಯವನ್ನು ಸಿದ್ಧಪಡಿಸುವುದು ಹೇಗೆ?
3 ಹೃದಯವನ್ನು ಸಿದ್ಧಪಡಿಸುವುದು: ಸ್ಮರಣೆಯ ದಿನದ ಪ್ರಮುಖತೆಯನ್ನು ಗ್ರಹಿಸಬೇಕಾದರೆ ನಮ್ಮ ಹೃದಯವನ್ನು ಮುಂಚಿತವಾಗಿ ದೃಢಮಾಡಿಕೊಳ್ಳುವುದು ಅಥವಾ ಸಿದ್ಧಪಡಿಸುವುದು ಸಹ ಅಗತ್ಯ. (ಎಜ್ರ 7:10) ಅದಕ್ಕಾಗಿ ನಾವು ‘ಸ್ಮರಣೆಯ ಬೈಬಲ್ ಓದುವಿಕೆ’ ಮಾಡಲು ಸಮಯ ಬದಿಗಿರಿಸಬೇಕು ಮತ್ತು ಯೇಸುವಿನ ಭೂ ಜೀವನದ ಕೊನೆಯ ದಿನಗಳ ಬಗ್ಗೆ ಮನನ ಮಾಡಬೇಕು. ಹೀಗೆ ಯೇಸು ತಮ್ಮ ಜೀವವನ್ನೇ ಅರ್ಪಿಸಿ ಮಾಡಿದ ಸ್ವತ್ಯಾಗದ ಕುರಿತು ನಾವು ಧ್ಯಾನಿಸುವುದು ಅವರನ್ನು ಅನುಕರಿಸುವಂತೆ ಪ್ರೇರಣೆ ನೀಡುತ್ತೆ.—ಗಲಾ. 2:20.
4. ವಿಮೋಚನಾ ಮೌಲ್ಯದಿಂದ ಸಿಗುವ ಯಾವ ಪ್ರಯೋಜನ ನಿಮ್ಮನ್ನು ಹೆಚ್ಚು ಹರ್ಷಿತರನ್ನಾಗಿ ಮಾಡುತ್ತೆ?
4 ಕ್ರಿಸ್ತರ ಮರಣ ಯೆಹೋವ ದೇವರ ಪರಮಾಧಿಕಾರವನ್ನು ನಿರ್ದೋಷೀಕರಿಸುತ್ತೆ. ಪಾಪ ಮತ್ತು ಮರಣದಿಂದ ನಮ್ಮನ್ನು ಬಿಡಿಸುತ್ತೆ. (1 ಯೋಹಾ. 2:2) ಅನಂತ ಜೀವನಕ್ಕೆ ಮತ್ತು ಯೆಹೋವ ದೇವರ ಜೊತೆ ಸಮಾಧಾನದ ಸಂಬಂಧಕ್ಕೆ ಮುನ್ನುಡಿ ಬರೆದು ಹಾದಿ ತೆರೆಯುತ್ತೆ. (ಕೊಲೊ. 1:21, 22) ಯೆಹೋವ ದೇವರಿಗೆ ಮಾತು ಕೊಟ್ಟಿರುವ ಪ್ರಕಾರ ಜೀವಿಸುವ ಮತ್ತು ಕ್ರಿಸ್ತರ ಶಿಷ್ಯರಾಗಿ ಮುಂದುವರಿಯುವ ನಮ್ಮ ನಿಲುವನ್ನು ಗಟ್ಟಿ ಮಾಡುತ್ತೆ. (ಮತ್ತಾ. 16:24) ಹೀಗೆ ನಮ್ಮ ಹೃದಯವನ್ನು ಸಿದ್ಧಪಡಿಸಿ ಮುಂಬರಲಿರುವ ಕ್ರಿಸ್ತರ ಮರಣದ ಸ್ಮರಣೆಯನ್ನು ಹಾಜರಾದಾಗ ನಮ್ಮ ಹರ್ಷ ಹೆಚ್ಚುವುದು!