ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
ಕಿರುಹೊತ್ತಗೆಯನ್ನು ಬಳಸುವ ವಿಧ ಬೈಬಲ್ ವಿದ್ಯಾರ್ಥಿಗಳನ್ನು ಸಂಘಟನೆಯ ಕಡೆಗೆ ನಿರ್ದೇಶಿಸಲು ಹೊಸ ಕಿರುಹೊತ್ತಗೆ
1. ಯೆಹೋವ ದೇವರ ಇಷ್ಟ ಕಿರುಹೊತ್ತಗೆಯ ಮೂರು ಉದ್ದೇಶಗಳು ಯಾವುವು?
1 ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ಕಿರುಹೊತ್ತಗೆಯನ್ನು ಬಳಸಲು ಶುರುಮಾಡಿದ್ದೀರಾ? ಅದರ ಉದ್ದೇಶ ಏನೆಂದರೆ (1) ಬೈಬಲ್ ವಿದ್ಯಾರ್ಥಿಗಳಿಗೆ ಯೆಹೋವನ ಸಾಕ್ಷಿಗಳನ್ನು ಪರಿಚಯಿಸುವುದು (2) ನಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಸಹಾಯಮಾಡುವುದು (3) ನಮ್ಮ ಸಂಘಟನೆ ಹೇಗೆ ಕೆಲಸ ಮಾಡುತ್ತೆ ಎಂದು ತೋರಿಸುವುದು. ಈ ಕಿರುಹೊತ್ತಗೆಯ ಪ್ರತಿಯೊಂದು ಪುಟದಲ್ಲಿ ಒಂದೊಂದು ಪಾಠವಿದ್ದು ಅದನ್ನು ಪ್ರತಿ ಬೈಬಲ್ ಅಧ್ಯಯನದ ಕೊನೆಯಲ್ಲಿ ಐದರಿಂದ ಹತ್ತು ನಿಮಿಷಗಳಲ್ಲಿ ಆವರಿಸಬಹುದು.
2. ಈ ಕಿರುಹೊತ್ತಗೆಯ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ತಿಳಿಸಿ.
2 ಇದರ ರಚನೆ: ಈ ಕಿರುಹೊತ್ತಗೆ ಮೂರು ಭಾಗಗಳಾಗಿ ವಿಂಗಡಗೊಂಡಿದೆ. ಮೇಲೆ ತಿಳಿಸಲಾಗಿರುವ ಮೂರು ವಿಷಯದ ಕುರಿತು ಅದರಲ್ಲಿ ತಿಳಿಸಲಾಗಿದೆ. ಒಟ್ಟು 28 ಪಾಠಗಳಿದ್ದು ಪ್ರತಿಯೊಂದು ಪಾಠದ ಮೇಲ್ಬರಹ ಪ್ರಶ್ನಾರೂಪದಲ್ಲಿದೆ. ದಪ್ಪಕ್ಷರದಲ್ಲಿರುವ ಉಪಶೀರ್ಷಿಕೆಯ ಕೆಳಗಿರುವ ವಿಷಯ ಅದಕ್ಕೆ ಉತ್ತರ ಒದಗಿಸುತ್ತದೆ. ನಾವು ಮಾಡುವ ಕೆಲಸ ಅಂತಾರಾಷ್ಟ್ರೀಯವಾದದ್ದೆಂದು ತೋರಿಸಲು 50 ದೇಶಗಳಲ್ಲಿನ ಚಿತ್ರಗಳು ಸಹ ಅದರಲ್ಲಿವೆ. ಅನೇಕ ಪಾಠಗಳಲ್ಲಿ “ಇನ್ನಷ್ಟು ತಿಳಿಯಲು . . . ” ಎಂಬ ಚೌಕ ಇದೆ. ಅಲ್ಲಿ ಹೇಳಿರುವ ವಿಷಯಗಳನ್ನು ಮಾಡುವಂತೆ ನಿಮ್ಮ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಬಹುದು.
3. ಯೆಹೋವ ದೇವರ ಇಷ್ಟ ಕಿರುಹೊತ್ತಗೆಯನ್ನು ಬಳಸುವುದು ಹೇಗೆ?
3 ಬಳಸುವ ವಿಧ: ಪಾಠದ ಮೇಲ್ಬರಹವಾಗಿರುವ ಪ್ರಶ್ನೆಯ ಕಡೆಗೆ ವಿದ್ಯಾರ್ಥಿಯ ಗಮನ ಸೆಳೆಯಿರಿ. ಪಾಠವನ್ನು ಓದುತ್ತಾ ಹೋದಂತೆ ದಪ್ಪಕ್ಷರದಲ್ಲಿರುವ ಉಪಶೀರ್ಷಿಕೆಗಳಿಗೆ ಒತ್ತು ನೀಡಿ. ಕೊನೆಗೆ ಪುನರವಲೋಕನ ಪ್ರಶ್ನೆಗಳನ್ನು ಪರಿಗಣಿಸಿ. ಇಡೀ ಪಾಠವನ್ನು ಒಂದೇ ಸಲ ಓದಬಹುದು ಅಥವಾ ಒಂದೊಂದೇ ಪ್ಯಾರಗಳನ್ನು ಓದಿ ಚರ್ಚಿಸಬಹುದು. ಕೊಟ್ಟಿರುವ ವಚನಗಳಲ್ಲಿ ಯಾವುದನ್ನು ಓದಬೇಕೆಂದು ವಿವೇಚನೆಯಿಂದ ನಿರ್ಣಯಿಸಿ. ಚಿತ್ರಗಳನ್ನು ಮತ್ತು “ಇನ್ನಷ್ಟು ತಿಳಿಯಲು . . . ” ಎಂಬ ಚೌಕವನ್ನು ಪರಿಗಣಿಸಲು ಮರೆಯಬೇಡಿ. ಪಾಠಗಳನ್ನು ಅನುಕ್ರಮವಾಗಿ ಚರ್ಚಿಸಿ. ಆದರೆ ವಿದ್ಯಾರ್ಥಿಯ ಆಸಕ್ತಿ ಮೇರೆಗೆ ಬೇರೆ ಪಾಠಗಳನ್ನೂ ಪರಿಗಣಿಸಬಹುದು. ಉದಾಹರಣೆಗೆ, ಸಮ್ಮೇಳನ ಹಾಗೂ ಅಧಿವೇಶನದ ಸಮಯದಲ್ಲಿ ಪಾಠ 11ನ್ನು ಪರಿಗಣಿಸಬಹುದು.
4. ಈ ಕಿರುಹೊತ್ತಗೆ ಪಡೆದು ನಿಮಗೆ ಯಾಕೆ ಸಂತೋಷವಾಗಿದೆ?
4 ನಾವು ಜನರೊಂದಿಗೆ ಬೈಬಲ್ ಅಧ್ಯಯನ ಮಾಡುವಾಗ ನಮ್ಮ ಆಧ್ಯಾತ್ಮಿಕ ತಂದೆಯಾದ ಯೆಹೋವ ದೇವರ ಪರಿಚಯ ಮಾಡಿಕೊಡುತ್ತೇವೆ. ಆದರೆ ಅದೇ ಸಮಯದಲ್ಲಿ ಯೆಹೋವ ದೇವರ ಸಂಘಟನೆಯ ಪರಿಚಯವನ್ನೂ ಮಾಡಿಸಬೇಕಲ್ಲವೇ? (ಜ್ಞಾನೋ. 6:20) ಹಾಗೆ ಮಾಡಲು ಸಹಾಯಕಾರಿಯಾಗಿರುವ ಈ ಹೊಸ ಸಲಕರಣೆಯನ್ನು ಪಡೆದಿರುವುದಕ್ಕಾಗಿ ನಾವು ಎಷ್ಟು ಸಂತೋಷಿತರು!