ದೇವರ ವಾಕ್ಯ ಶಕ್ತಿಯುತ
1. ಇಸವಿ 2014ರ ಸಾಲಿನ ವಿಶೇಷ ಸಮ್ಮೇಳನದ ಮುಖ್ಯ ವಿಷಯವೇನು?
1 ನಮ್ಮ ಯೋಚನೆಯನ್ನು ನಾವು ಬದುಕುವ ರೀತಿಯನ್ನು ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿ ತರುವ, ನಮ್ಮನ್ನು ಬದಲಾಯಿಸುವ ಶಕ್ತಿ ಬೈಬಲಿಗಿದೆ. ಇದು ಅಪರಿಪೂರ್ಣ ಮಾನವನಿಗೆ ಸಾಧ್ಯವಿಲ್ಲ. ಬೈಬಲ್‌ಗೆ ನಿಜವಾಗಿಯೂ ಅಷ್ಟು ಶಕ್ತಿ ಇದೆಯಾ? ನಮ್ಮ ಜೀವನದಲ್ಲಿ ಅದರ ಶಕ್ತಿಯನ್ನು ಪೂರ್ಣವಾಗಿ ಬಳಸುವುದು ಹೇಗೆ? ಬೇರೆಯವರಿಗೆ ಸಹಾಯ ಮಾಡಲು ಆ ಶಕ್ತಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೇಗೆ? 2014ನೇ ಸಾಲಿನ ವಿಶೇಷ ಸಮ್ಮೇಳನದಲ್ಲಿ ಈ ಎಲ್ಲಾ ವಿಷಯಗಳನ್ನು ಪರಿಗಣಿಸುವಾಗ ನಾವು ಆಧ್ಯಾತ್ಮಿಕವಾಗಿ ಬಲಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಅದರ ಮುಖ್ಯ ವಿಷಯ “ದೇವರ ವಾಕ್ಯ ಶಕ್ತಿಯುತ.” ಇದು ಇಬ್ರಿಯ 4:12ರ ಮೇಲೆ ಆಧರಿತ.
2. ಯಾವ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಹಿಡಿಯಬೇಕು?
2 ಇದಕ್ಕೆ ಉತ್ತರ ತಿಳಿಯಿರಿ: ಕಾರ್ಯಕ್ರಮ ಆಲಿಸುತ್ತಾ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ.
• ಯೆಹೋವನ ವಾಕ್ಯದ ಮೇಲೆ ನಮಗೆ ನಂಬಿಕೆ ಇರಬೇಕು ಏಕೆ? (ಕೀರ್ತ. 29:4)
• ದೇವರ ವಾಕ್ಯದ ಶಕ್ತಿಯನ್ನು ನಮ್ಮ ಜೀವನದಲ್ಲಿ ಸವಿದು ನೋಡುವುದು ಹೇಗೆ? (ಕೀರ್ತ. 34:8)
• ದೇವರ ವಾಕ್ಯ ನಮ್ಮ ಸಾರುವ ಕೆಲಸವನ್ನು ಪ್ರಭಾವಿಸುವಂತೆ ಬಿಡುವುದು ಹೇಗೆ? (2 ತಿಮೊ. 3:16, 17)
• ಸೈತಾನನ ಕುತಂತ್ರಗಳಿಗೆ ಬಲಿಯಾಗದಿರಲು ಏನು ಮಾಡಬೇಕು? (1 ಯೋಹಾ. 5:19)
• ಯುವಜನರು ಆಧ್ಯಾತ್ಮಿಕ ಯಶಸ್ಸನ್ನು ಗಳಿಸುವುದು ಹೇಗೆ? (ಯೆರೆ. 17:7)
• ಬಲಹೀನರಾಗಿರುವಾಗಲೇ ಬಲವುಳ್ಳವರಾಗುವುದು ಹೇಗೆ? (2 ಕೊರಿಂ. 12:10)
• ತುಂಬ ಸಮಯದಿಂದ ಕೆಟ್ಟ ಮನೋಭಾವ, ಅಭ್ಯಾಸಗಳು ನಮ್ಮಲ್ಲಿ ಮನೆ ಮಾಡಿದ್ದರೂ ಅವನ್ನು ಬಿಟ್ಟು ಬದಲಾವಣೆಗಳನ್ನು ಮಾಡುತ್ತಾ ಇರಲು ಏನು ಮಾಡಬೇಕು? (ಎಫೆ. 4:23)
3. ವಿಶೇಷ ಸಮ್ಮೇಳನದ ಕಾರ್ಯಕ್ರಮವನ್ನು ಆಲಿಸುವುದರ ಜತೆಗೆ ನಮಗೆ ಬೇರೆ ಯಾವ ಪ್ರಯೋಜನ ಸಹ ಇದೆ?
3 ಇಂಥ ವಿಷಯಗಳಿಂದ ನಾವು ಪ್ರಯೋಜನ ಹೊಂದುವುದಂತೂ ಖಂಡಿತ! ಇದರ ಜತೆಗೆ ಸರ್ಕಿಟ್ ಸಮ್ಮೇಳನ ಮತ್ತು ಜಿಲ್ಲಾ ಅಧಿವೇಶನಗಳಂತೆ ವಿಶೇಷ ಸಮ್ಮೇಳನ ಕೂಡ ನಾವು ಬೇರೆ ಸಭೆಯವರೊಂದಿಗೆ ಬೆರೆತು ಸಂತೋಷವನ್ನು ನೂರ್ಮಡಿಗೊಳಿಸುವ ಅವಕಾಶವನ್ನು ಮಾಡಿಕೊಡುತ್ತದೆ. (ಕೀರ್ತ. 133:1-3; 2 ಕೊರಿಂ. 6:11-13) ನಿಮ್ಮ ಹಳೇ ಸ್ನೇಹಿತರೊಂದಿಗೆ ಮಾತಾಡಲು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಸಮಯ ಮಾಡಿಕೊಳ್ಳಿ. ಅತಿಥಿ ಭಾಷಣಕಾರರಾಗಿ ಸರ್ಕಿಟ್ ಮೇಲ್ವಿಚಾರಕ ಅಥವಾ ಬೆತೆಲ್ ಸಹೋದರ ನೇಮಕಗೊಂಡಿರುವುದಾದರೆ ಅವರನ್ನು ಅವರ ಪತ್ನಿಯನ್ನು ಸ್ವಾಗತಿಸಿ. ಮುಂದೆ ಬರಲಿರುವ ವಿಶೇಷ ಸಮ್ಮೇಳನದಲ್ಲಿ ನಮಗೆ ಎದುರು ನೋಡಲು ಅನೇಕ ವಿಷಯಗಳಿವೆ!