ಬೈಬಲಿನಲ್ಲಿರುವ ರತ್ನಗಳು | ನೆಹೆಮೀಯ 12-13
ನೆಹೆಮೀಯ ಪುಸ್ತಕದಿಂದ ಪಾಠಗಳು
ನೆಹೆಮೀಯ ಹುರುಪಿನಿಂದ ಸತ್ಯಾರಾಧನೆಯನ್ನು ಎತ್ತಿಹಿಡಿದನು
13:4-9, 15-21, 23-27
ಅವಿಶ್ವಾಸಿ ಮತ್ತು ವಿರೋಧಿಯಾಗಿದ್ದ ಟೋಬೀಯ ತನ್ನನ್ನು ಪ್ರಭಾವಿಸುವಂತೆ ಮಹಾಯಾಜಕ ಎಲ್ಯಾಷೀಬ ಅನುಮತಿಸಿದನು
ಎಲ್ಯಾಷೀಬನು ಟೋಬೀಯನಿಗೆ ದೇವಾಲಯದ ಪ್ರಾಕಾರದೊಳಗೆ ತಂಗಲು ಸ್ಥಳ ಕೊಟ್ಟನು
ನೆಹೆಮೀಯ ಟೋಬೀಯನ ಎಲ್ಲ ವಸ್ತುಗಳನ್ನು ಹೊರಗೆ ಹಾಕಿಸಿ, ಆ ಕೊಠಡಿಯನ್ನು ಶುದ್ಧಗೊಳಿಸಿ, ದೇವಾಲಯದ ಕೆಲಸಕ್ಕಾಗಿ ಉಪಯೋಗಿಸುವಂತೆ ಏರ್ಪಾಡುಗಳನ್ನು ಮಾಡಿದನು
ನೆಹೆಮೀಯ ಯೆರೂಸಲೇಮಿನಿಂದ ಎಲ್ಲ ಅಶುದ್ಧ ವಿಷಯಗಳನ್ನು ತೆಗೆದುಹಾಕಿದನು