ಬೈಬಲಿನಲ್ಲಿರುವ ರತ್ನಗಳು | ಯೋಬ 16-20 ದಯಾಭರಿತ ಮಾತುಗಳಿಂದ ಇತರರನ್ನು ಉತ್ತೇಜಿಸಿ ಬಲಪಡಿಸಿ ಸಲಹೆ ಕೊಡುವಾಗ ನಮ್ಮ ಮಾತುಗಳು ಇತರರನ್ನು ಬಲಪಡಿಸುವಂತಿರಬೇಕು 16:4, 5 ಕಷ್ಟಗಳಿಂದಾಗಿ ತುಂಬಾ ನೊಂದುಹೋಗಿದ್ದರಿಂದ ಯೋಬನಿಗೆ ಬೆಂಬಲ ಮತ್ತು ಉತ್ತೇಜನದ ಅಗತ್ಯವಿತ್ತು ಮೂವರು ಸ್ನೇಹಿತರು ಯೋಬನನ್ನು ಸಂತೈಸುವ ಬದಲಿಗೆ ಆರೋಪಗಳನ್ನು ಹಾಕಿದ್ದರಿಂದ ಮತ್ತಷ್ಟು ಕುಗ್ಗಿಹೋದನು ಬಿಲ್ದದನ ಚುಚ್ಚುಮಾತುಗಳಿಂದ ನೊಂದ ಯೋಬ ದೇವರಿಗೆ ಮೊರೆಯಿಟ್ಟನು 19:2, 25 ಹೇಗಾದರೂ ಈ ಕಷ್ಟದಿಂದ ಬಿಡಿಸು, ಸಾವಿನ ಮೂಲಕವಾದರೂ ಸರಿಯೇ ಎಂದು ಅಂಗಲಾಚಿದನು ಪುನರುತ್ಥಾನದ ಮೇಲೆ ನಂಬಿಕೆ ಇಟ್ಟು ಕೊನೆವರೆಗೂ ತಾಳಿಕೊಂಡನು