ಬೈಬಲಿನಲ್ಲಿರುವ ರತ್ನಗಳು | ಯೋಬ 38-42
ನಾವು ಇತರರಿಗಾಗಿ ಪ್ರಾರ್ಥಿಸಿದರೆ ಯೆಹೋವನು ಮೆಚ್ಚುತ್ತಾನೆ
ಎಲೀಫಜ, ಬಿಲ್ದದ, ಚೋಫರರಿಗಾಗಿ ಯೋಬ ಪ್ರಾರ್ಥಿಸಬೇಕೆಂದು ಯೆಹೋವನು ಬಯಸಿದನು
ಯೋಬನ ಹತ್ತಿರ ಹೋಗಿ ದೋಷಪರಿಹಾರಕ್ಕಾಗಿ ಹೋಮಮಾಡಬೇಕೆಂದು ಯೆಹೋವನು ಎಲೀಫಜ, ಬಿಲ್ದದ, ಚೋಫರರಿಗೆ ಹೇಳಿದನು
ಯೋಬ ಅವರ ಪರವಾಗಿ ಪ್ರಾರ್ಥಿಸಬೇಕೆಂದು ದೇವರು ಬಯಸಿದನು
ಯೋಬ ಅವರಿಗಾಗಿ ಪ್ರಾರ್ಥಿಸಿದ ನಂತರ ದೇವರು ಅವನನ್ನು ಆಶೀರ್ವದಿಸಿದನು
ಯೋಬ ನಂಬಿಕೆ ಮತ್ತು ಸಹನೆ ತೋರಿಸಿದ್ದಕ್ಕಾಗಿ ಯೆಹೋವನು ಅವನನ್ನು ತುಂಬ ಆಶೀರ್ವದಿಸಿದನು
ಯೆಹೋವನು ಯೋಬನಿಗೆ ಒಳ್ಳೇ ಆರೋಗ್ಯ ಕೊಟ್ಟು ಅವನ ದುಸ್ಥಿತಿಯನ್ನು ಹೋಗಲಾಡಿಸಿದನು
ಯೋಬ ತುಂಬ ಕಷ್ಟಪಟ್ಟದ್ದಕ್ಕಾಗಿ ಅವನ ಸ್ನೇಹಿತರು, ಸಂಬಂಧಿಕರು ಅವನನ್ನು ಮನಸಾರೆ ಸಂತೈಸಿದರು
ಯೋಬ ಕಳೆದುಕೊಂಡ ಸೊತ್ತನ್ನೆಲ್ಲ ಯೆಹೋವನು ಎರಡರಷ್ಟಾಗಿ ಹೆಚ್ಚಿಸಿದನು
ಯೋಬ ಮತ್ತು ಅವನ ಹೆಂಡತಿ ಇನ್ನೂ ಹತ್ತು ಮಕ್ಕಳನ್ನು ಪಡೆದರು
ಯೋಬ ನಂತರ ಇನ್ನೂ 140 ವರ್ಷ ಬದುಕಿದನು ಮತ್ತು ತನ್ನ ಸಂತಾನದ ನಾಲ್ಕು ತಲೆಮಾರುಗಳನ್ನು ನೋಡಿದನು