ನಮ್ಮ ಕ್ರೈಸ್ತ ಜೀವನ
JW ಲೈಬ್ರರಿ ಯನ್ನು ಉಪಯೋಗಿಸುವ ವಿಧಾನಗಳು
ಅಧ್ಯಯನದಲ್ಲಿ:
ಬೈಬಲ್ ಮತ್ತು ದಿನದ ವಚನವನ್ನು ಓದಿ
ಯಿಯರ್ಬುಕ್, ಪತ್ರಿಕೆಗಳು ಮತ್ತು ಇತರ ಸಾಹಿತ್ಯವನ್ನು ಓದಿ. ಬುಕ್ಮಾರ್ಕ್ ಎಂಬ ವೈಶಿಷ್ಟ್ಯವನ್ನು ಉಪಯೋಗಿಸಿ
ಕೂಟಗಳಿಗಾಗಿ ತಯಾರಿ ಮಾಡಿ ಮತ್ತು ಉತ್ತರಗಳಿಗೆ ಗುರುತು ಹಾಕಿ
ವಿಡಿಯೋಗಳನ್ನು ನೋಡಿ
ಕೂಟದಲ್ಲಿ:
ವೇದಿಕೆಯಿಂದ ತಿಳಿಸಲಾದ ವಚನಗಳನ್ನು ತೆರೆದು ನೋಡಿ. ಈ ಹಿಂದೆ ತೆರೆದ ವಚನವನ್ನು ಪುನಃ ತೆರೆಯಲು ಹಿಸ್ಟರಿ ಎಂಬ ವೈಶಿಷ್ಟ್ಯವನ್ನು ಉಪಯೋಗಿಸಿ
ಕೂಟಗಳಿಗೆ ಬೇಕಾದ ಮುದ್ರಿತ ಸಾಹಿತ್ಯವನ್ನು ಹೊತ್ತು ತರುವ ಬದಲು ನಿಮ್ಮ ಎಲೆಕ್ಟ್ರಾನಿಕ್ ಸಾಧನವನ್ನು ಬಳಸಿ. ಹಾಡುಗಳನ್ನು ಹಾಡಲು ಸಹ ಹೀಗೆ ಮಾಡಬಹುದು. ಗೀತೆ ಪುಸ್ತಕದಲ್ಲಿ ಇಲ್ಲದ ಹೊಸ ಹಾಡುಗಳು ಸಹ JW ಲೈಬ್ರರಿ ಯಲ್ಲಿ ಇವೆ
ಸೇವೆಯಲ್ಲಿ:
ಆಸಕ್ತ ವ್ಯಕ್ತಿಗೆ JW ಲೈಬ್ರರಿ ಯಿಂದ ಏನನ್ನಾದರೂ ತೋರಿಸಿ. ಈ ಆ್ಯಪ್ ಮತ್ತು ಸಾಹಿತ್ಯವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವನಿಗೆ ಸಹಾಯ ಮಾಡಿ
ಬೈಬಲ್ ವಚನವನ್ನು ಬೇಗನೆ ಕಂಡುಕೊಳ್ಳಲು ಸರ್ಚ್ (ಹುಡುಕಿ) ಎಂಬ ವೈಶಿಷ್ಟ್ಯವನ್ನು ಉಪಯೋಗಿಸಿ. ಯಾವುದಾದರೊಂದು ಪದ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯಲ್ಲಿ ಸಿಗದಿದ್ದರೆ, ರೆಫರೆನ್ಸ್ ಬೈಬಲ್ಗೆ ಹೋಗಿ ಪುನಃ ಹುಡುಕಿ
ವಿಡಿಯೋ ತೋರಿಸಿ. ಮನೆಯವರಿಗೆ ಮಕ್ಕಳಿದ್ದರೆ, ಯೆಹೋವ ದೇವರ ಗೆಳೆಯರಾಗೋಣ ವಿಡಿಯೋಗಳಲ್ಲಿ ಒಂದನ್ನು ತೋರಿಸಬಹುದು. ಅಲ್ಲದೆ, ಬೈಬಲ್ ಅಧ್ಯಯನದ ಕಡೆಗೆ ಆಸಕ್ತಿ ಹುಟ್ಟಿಸಲು ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ಸಹ ತೋರಿಸಬಹುದು. ಬೇರೊಂದು ಭಾಷೆಯವರು ಸಿಕ್ಕಿದರೆ ಅವರ ಭಾಷೆಯಲ್ಲೇ ವಿಡಿಯೋ ತೋರಿಸಿ
ನೀವು ಈಗಾಗಲೇ ಡೌನ್ಲೋಡ್ ಮಾಡಿದ ಬೇರೆ ಭಾಷೆಯ ಭಾಷಾಂತರದಲ್ಲಿ ವಚನವನ್ನು ತೋರಿಸಿ. ಇತರ ಬೈಬಲ್ ಭಾಷಾಂತರಗಳನ್ನು ನೋಡಲು ನಿಮಗೆ ಬೇಕಿರುವ ವಚನಕ್ಕೆ ಹೋಗಿ ವಚನದ ಸಂಖ್ಯೆಯನ್ನು ಮುಟ್ಟಿ, ನಂತರ ಸಮಾನಾಂತರ ಭಾಷಾಂತರಗಳನ್ನು ತೋರಿಸುವ ಚಿಹ್ನೆಯನ್ನು ಮುಟ್ಟಿ