ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 87–91
ಸರ್ವಶಕ್ತನ ಆಶ್ರಯಸ್ಥಾನದಲ್ಲಿರಿ
ಯೆಹೋವನ ‘ಆಶ್ರಯಸ್ಥಾನವು’ ಆಧ್ಯಾತ್ಮಿಕ ಸಂರಕ್ಷಣೆ ಕೊಡುತ್ತದೆ
ಇಂದು ನಾವು ಯೆಹೋವನ ಆಶ್ರಯಸ್ಥಾನದಲ್ಲಿ ಇರಬೇಕಾದರೆ ಸಮರ್ಪಣೆ ಮತ್ತು ದೀಕ್ಷಾಸ್ನಾನ ಅಗತ್ಯ
ದೇವರಲ್ಲಿ ಭರವಸೆ ಇಡದವರಿಗೆ ಈ ಸ್ಥಳದ ಪರಿಚಯವಿಲ್ಲ
ದೇವರ ಮೇಲಿನ ಪ್ರೀತಿ ಹಾಗೂ ನಂಬಿಕೆಯನ್ನು ನಾಶಮಾಡುವ ಯಾವುದೇ ವಿಷಯ ಮತ್ತು ಯಾವುದೇ ವ್ಯಕ್ತಿಯು ಯೆಹೋವನ ಆಶ್ರಯಸ್ಥಾನದಲ್ಲಿ ಇರುವವರ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ
‘ಬೇಟೆಗಾರನು’ ನಮ್ಮನ್ನು ಹಿಡಿಯಲು ಪ್ರಯತ್ನಿಸುತ್ತಾನೆ
ಹಕ್ಕಿಗಳು ತುಂಬ ಚುರುಕಾಗಿರುವುದರಿಂದ ಅವುಗಳನ್ನು ಹಿಡಿಯುವುದು ಕಷ್ಟ
ಬೇಟೆಗಾರರು ಹಕ್ಕಿಗಳ ಚಟುವಟಿಕೆಗಳನ್ನು ಗಮನಿಸಿ ಅವುಗಳನ್ನು ಹಿಡಿಯಲು ಉಪಾಯ ಮಾಡುತ್ತಾನೆ
‘ಬೇಟೆಗಾರನಾದ’ ಸೈತಾನನು ಯೆಹೋವನ ಜನರನ್ನು ಚೆನ್ನಾಗಿ ಗಮನಿಸಿ ಆಧ್ಯಾತ್ಮಿಕವಾಗಿ ಸರ್ವನಾಶಮಾಡಲು ಉಪಾಯ ಮಾಡುತ್ತಾನೆ
ಸೈತಾನನು ಬಳಸುವ ನಾಲ್ಕು ಮಾರಣಾಂತಿಕ ಉರುಲುಗಳು:
ಮನುಷ್ಯರ ಭಯ
ವಸ್ತುಗಳ ಆಸೆ
ಕೆಟ್ಟ ಮನೋರಂಜನೆ
ಮನಸ್ತಾಪಗಳು