ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 106-109
“ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ”
ಯೆಹೋವನು ತಮ್ಮನ್ನು ರಕ್ಷಿಸಲು ಮಾಡಿದ್ದನ್ನೆಲ್ಲಾ ಇಸ್ರಾಯೇಲ್ಯರು ಏಕೆ ಬೇಗ ಮರೆತುಹೋದರು?
ಅವರು ತಮ್ಮ ಗಮನವನ್ನು ಯೆಹೋವನ ಮೇಲಿಡುವ ಬದಲು ಅವರ ಸ್ವಾರ್ಥ, ಸುಖದ ಮೇಲಿಟ್ಟರು
ಕೃತಜ್ಞ ಮನಸ್ಸನ್ನು ಬೆಳೆಸಿಕೊಂಡು ಕಾಪಾಡಿಕೊಳ್ಳಲು ಏನು ಮಾಡಬೇಕು?
ಯಾವೆಲ್ಲ ಕಾರಣಗಳಿಗೆ ನೀವು ಯೆಹೋವನಿಗೆ ಕೃತಜ್ಞರಾಗಿರಬೇಕು ಎಂದು ಯೋಚಿಸುತ್ತಿರಿ
ಭವಿಷ್ಯತ್ತಿನಲ್ಲಿರುವ ನಿರೀಕ್ಷೆಯ ಬಗ್ಗೆ ಧ್ಯಾನಿಸಿ
ಸಿಕ್ಕಿರುವ ನಿರ್ದಿಷ್ಟ ಆಶೀರ್ವಾದಗಳಿಗಾಗಿ ಪ್ರಾರ್ಥನೆಯಲ್ಲಿ ಯೆಹೋವನಿಗೆ ಕೃತಜ್ಞತೆ ಹೇಳಿ