ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು ಕೂಟಗಳಿಗೆ ಹಾಜರಾಗುವಂತೆ ಆಸಕ್ತರನ್ನು ಉತ್ತೇಜಿಸಿ
ಏಕೆ ಪ್ರಾಮುಖ್ಯ: ಕ್ರಮವಾಗಿ ‘ಯೆಹೋವನಿಗೆ ಹಾಡಲು’ ಮತ್ತು ‘ಸ್ತುತಿಸಲು’ ಕೂಟಗಳಲ್ಲಿ ಅವಕಾಶ ಸಿಗುತ್ತದೆ. (ಕೀರ್ತ 149:1) ದೇವರ ಚಿತ್ತವನ್ನು ಹೇಗೆ ಮಾಡುವುದೆಂದು ಇಲ್ಲಿ ಕಲಿಸಲಾಗುತ್ತದೆ. (ಕೀರ್ತ 143:10) ಸಾಮಾನ್ಯವಾಗಿ, ಆಸಕ್ತರು ಮತ್ತು ಬೈಬಲ್ ವಿದ್ಯಾರ್ಥಿಗಳು ಕೂಟಗಳಿಗೆ ಹಾಜರಾಗಲು ಆರಂಭಸಿದ ನಂತರ ತುಂಬ ಪ್ರಗತಿ ಮಾಡುತ್ತಾರೆ.
ಹೇಗೆ ಮಾಡುವುದು:
ಸಾಧ್ಯವಾದಷ್ಟು ಬೇಗ ಕೂಟಗಳಿಗೆ ಆಮಂತ್ರಿಸಿ. ಇದಕ್ಕಾಗಿ ಬೈಬಲ್ ಅಧ್ಯಯನ ಆರಂಭಿಸುವ ತನಕ ಕಾಯಬೇಕೆಂದೇನಿಲ್ಲ.—ಪ್ರಕ 22:17
ಕೂಟಗಳು ಹೇಗಿರುತ್ತವೆ ಮತ್ತು ಮುಂದಿನ ಕೂಟದಲ್ಲಿ ಯಾವ ವಿಷಯವನ್ನು ಚರ್ಚಿಸಲಾಗುತ್ತದೆ ಎಂದು ಆಸಕ್ತ ವ್ಯಕ್ತಿಗೆ ವಿವರಿಸಿ. ಇದಕ್ಕೆ, ಸಭಾ ಕೂಟದ ಆಮಂತ್ರಣ ಪತ್ರ, ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ವಿಡಿಯೋ ಮತ್ತು ಯೆಹೋವ ದೇವರ ಇಷ್ಟ ಕಿರುಹೊತ್ತಗೆಯ ಪಾಠ 5 ಮತ್ತು 7 ತುಂಬ ಸಹಾಯಕಾರಿ
ಬೇಕಾದ ಸಹಾಯ ಮಾಡಿ. ಆಸಕ್ತ ವ್ಯಕ್ತಿಯನ್ನು ಸಭಾಗೃಹಕ್ಕೆ ಕರೆದುಕೊಂಡು ಬರಬೇಕಾ ಅಥವಾ ಯೋಗ್ಯ ರೀತಿಯ ಬಟ್ಟೆ ಆರಿಸಲು ಸಹಾಯ ಮಾಡಬೇಕಾ ಎಂದು ಯೋಚಿಸಿ. ಕೂಟದಲ್ಲಿ ಅವನ ಪಕ್ಕದಲ್ಲೇ ಕುಳಿತು ನಿಮ್ಮ ಪುಸ್ತಕ ತೋರಿಸಿ. ಇತರರಿಗೆ ಪರಿಚಯ ಮಾಡಿಸಿ