ಬೈಬಲಿನಲ್ಲಿರುವ ರತ್ನಗಳು | ಮೀಕ 1-7
ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
ಯೆಹೋವನು ನಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಮ್ಮಿಂದ ಕೊಡಲು ಸಾಧ್ಯವಾಗುವುದಕ್ಕಿಂತ ಹೆಚ್ಚನ್ನು ಅಪೇಕ್ಷಿಸುವುದಿಲ್ಲ. ಸಹೋದರರೊಂದಿಗಿನ ನಮ್ಮ ಸಂಬಂಧವು ಸತ್ಯಾರಾಧನೆಯ ಒಂದು ಪ್ರಾಮುಖ್ಯ ಭಾಗವೆಂದು ದೇವರು ವೀಕ್ಷಿಸುತ್ತಾನೆ. ಯೆಹೋವನು ನಮ್ಮ ಯಜ್ಞಗಳನ್ನು ಸ್ವೀಕರಿಸಬೇಕೆಂದರೆ ನಾವು ನಮ್ಮ ಸಹೋದರರೊಂದಿಗೆ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳಬೇಕು.