ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಫೆಬ್ರವರಿ ಪು. 3
  • ಗೋದಿ ಮತ್ತು ಕಳೆಗಳ ದೃಷ್ಟಾಂತ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಗೋದಿ ಮತ್ತು ಕಳೆಗಳ ದೃಷ್ಟಾಂತ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • “ನೀತಿವಂತರು . . . ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ‘ನೋಡಿರಿ, ನಾನು ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಒಂದೇ ಸತ್ಯ ಕ್ರೈಸ್ತ ಧರ್ಮ ಒಂದು ವಾಸ್ತವಿಕತೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ದೇವದೂತರು ನಮ್ಮನ್ನು ಪ್ರಭಾವಿಸುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಫೆಬ್ರವರಿ ಪು. 3

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 12-13

ಗೋದಿ ಮತ್ತು ಕಳೆಗಳ ದೃಷ್ಟಾಂತ

ಯೇಸು ಗೋದಿ ವರ್ಗಕ್ಕೆ ಸೇರಿದ ಎಲ್ಲಾ ಅಭಿಷಿಕ್ತ ಕ್ರೈಸ್ತರನ್ನು ಹೇಗೆ ಮತ್ತು ಯಾವಾಗ ಮಾನವಕುಲದಿಂದ ಬೇರ್ಪಡಿಸುವನು ಎಂದು ತೋರಿಸಲು ಅವನು ಗೋದಿ ಮತ್ತು ಕಳೆಗಳ ದೃಷ್ಟಾಂತವನ್ನು ಉಪಯೋಗಿಸಿದನು. ಈ ಕೆಲಸ ಕ್ರಿ.ಶ. 33​ರಲ್ಲಿ ಆರಂಭವಾಯಿತು.

ಬಿತ್ತನೆ, ಕೊಯ್ಲು, ಕಣಜಕ್ಕೆ ತುಂಬಿಸುವುದನ್ನು ತೋರಿಸುತ್ತಿರುವ ಕಾಲಗಣನ ರೇಖೆ

13:24

‘ಒಬ್ಬ ಮನುಷ್ಯ ತನ್ನ ಹೊಲದಲ್ಲಿ ಒಳ್ಳೇ ಬೀಜವನ್ನು ಬಿತ್ತಿದನು’

  • ಬಿತ್ತುವವನು: ಯೇಸು ಕ್ರಿಸ್ತ

  • ಒಳ್ಳೇ ಬೀಜ ಬಿತ್ತನೆ: ಯೇಸುವಿನ ಶಿಷ್ಯರನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದ್ದು

  • ಹೊಲ: ಲೋಕವೆಂಬ ಮಾನವಕುಲ

13:25

“ಜನರು ನಿದ್ರೆಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ಮಧ್ಯೆ ಕಳೆಯನ್ನು ಬಿತ್ತಿ ಹೋದನು”

  • ವೈರಿ: ಸೈತಾನ

  • ಜನರು ನಿದ್ರೆಮಾಡುತ್ತಿದ್ದ ಸಮಯ: ಅಪೊಸ್ತಲರ ಮರಣ

13:30

“ಕೊಯ್ಲಿನ ವರೆಗೆ ಎರಡೂ ಒಟ್ಟಿಗೆ ಬೆಳೆಯಲಿ”

  • ಗೋದಿ: ಅಭಿಷಿಕ್ತ ಕ್ರೈಸ್ತರು

  • ಕಳೆಗಳು: ನಕಲಿ ಕ್ರೈಸ್ತರು

‘ಮೊದಲು ಕಳೆಗಳನ್ನು ಒಟ್ಟುಗೂಡಿಸಿ, ನಂತರ ಗೋದಿಯನ್ನು ಕಣಜಕ್ಕೆ ತುಂಬಿಸಿ’

  • ಆಳುಗಳು/ಕೊಯ್ಯುವವರು: ದೇವದೂತರು

  • ಕಳೆಗಳ ಒಟ್ಟುಗೂಡಿಸುವುದು: ನಕಲಿ ಕ್ರೈಸ್ತರನ್ನು ಅಭಿಷಿಕ್ತ ಕ್ರೈಸ್ತರಿಂದ ಬೇರ್ಪಡಿಸುವುದು

  • ಕಣಜಕ್ಕೆ ತುಂಬಿಸುವುದು: ಅಭಿಷಿಕ್ತ ಕ್ರೈಸ್ತರನ್ನು ಪುನಃಸ್ಥಾಪಿಸಲಾದ ಸಭೆಯಲ್ಲಿ ಒಟ್ಟುಗೂಡಿಸುವುದು

ಕೊಯ್ಲಿನ ಕಾಲ ಆರಂಭವಾದಾಗ ಸತ್ಯ ಕ್ರೈಸ್ತರನ್ನು ಯಾವುದು ನಕಲಿ ಕ್ರೈಸ್ತರಿಂದ ಬೇರ್ಪಡಿಸಿತು?

ಈ ದೃಷ್ಟಾಂತವನ್ನು ಅರ್ಥಮಾಡಿಕೊಳ್ಳುವುದರಿಂದ ನನಗೆ ಯಾವ ಪ್ರಯೋಜನವಿದೆ?

ನಿಮಗೆ ಗೊತ್ತಿತ್ತಾ?

ಗೋದಿ ಮತ್ತು ಕಳೆ ಒಟ್ಟಿಗೆ ಬೆಳೆಯುತ್ತಿರುವುದು

ಈ ದೃಷ್ಟಾಂತದಲ್ಲಿ ತಿಳಿಸಲಾಗಿರುವ ಕಳೆಗಳು ಕಳೆಹುಲ್ಲನ್ನು ಸೂಚಿಸುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಈ ವಿಷಕಾರಿ ಸಸ್ಯ ಬೆಳೆಯುತ್ತಿರುವಾಗ ನೋಡಲು ಗೋದಿ ಪೈರಿನಂತೆ ಕಾಣುತ್ತದೆ. ಗೋದಿ ಮತ್ತು ಕಳೆಹುಲ್ಲು ಒಟ್ಟೊಟ್ಟಿಗೆ ಬೆಳೆಯುವಾಗ ಅದರ ಬೇರುಗಳು ಒಂದಕ್ಕೊಂದು ಹೆಣೆದುಕೊಳ್ಳುತ್ತವೆ. ಇದರಿಂದ ಕಳೆಗಳನ್ನು ಮಾತ್ರ ಕೀಳಲು ಸಾಧ್ಯವಾಗುವುದಿಲ್ಲ. ಕೀಳಲು ಪ್ರಯತ್ನಿಸಿದರೆ ಅದರೊಟ್ಟಿಗೆ ಗೋದಿಯ ಪೈರೂ ಕಿತ್ತುಹೋಗುತ್ತದೆ. ಈ ಕಳೆಹುಲ್ಲು ಪೂರ್ತಿ ಬೆಳೆದಾಗ ಅದನ್ನು ಸುಲಭವಾಗಿ ಗುರುತಿಸಿ ಕಿತ್ತುಹಾಕಬಹುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ