ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 14-15
ಕೆಲವರ ಕೈಯಿಂದ ಹಲವರಿಗೆ ಉಣಿಸಿದನು
ಕ್ರಿ.ಶ. 32ರಲ್ಲಿ ಪಸ್ಕಹಬ್ಬಕ್ಕೆ ಮುಂಚೆ ಯೇಸು ಮಾಡಿದ ಈ ಅದ್ಭುತವನ್ನು ನಾಲ್ಕು ಸುವಾರ್ತಾ ಲೇಖಕರೂ ದಾಖಲಿಸಿದ್ದಾರೆ.
ಯೇಸು ಈ ಅದ್ಭುತದಲ್ಲಿ ಮಾಡಿದಂತೆಯೇ ಇಂದಿನ ತನಕ ಕೆಲವರ ಕೈಯಿಂದ ಹಲವರಿಗೆ ಆಧ್ಯಾತ್ಮಿಕವಾಗಿ ಉಣಿಸುತ್ತಿದ್ದಾನೆ.
ತನ್ನ ಶಿಷ್ಯರ ಹತ್ತಿರ ಕೇವಲ ಐದು ರೊಟ್ಟಿ ಮತ್ತು ಎರಡು ಮೀನು ಇದ್ದರೂ ಜನರ ಗುಂಪಿಗೆ ಊಟ ಕೊಡುವಂತೆ ಯೇಸು ಹೇಳಿದನು
ಯೇಸು ರೊಟ್ಟಿ ಮತ್ತು ಮೀನನ್ನು ತೆಗೆದುಕೊಂಡು ಪ್ರಾರ್ಥಿಸಿ ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅದನ್ನು ಜನರ ಗುಂಪಿಗೆ ಹಂಚಿದರು
ಯೇಸು ಮಾಡಿದ ಅದ್ಭುತದಿಂದ ಎಲ್ಲರಿಗೂ ಸಾಕಾಗಿ ಉಳಿಯುವಷ್ಟು ಆಹಾರ ಸಿಕ್ಕಿತು. ಯೇಸು ಕೆಲವರ ಕೈಯಿಂದ ಅಂದರೆ ಶಿಷ್ಯರ ಕೈಯಿಂದ ಹಲವರಿಗೆ ಉಣಿಸಿದನು
ಕಡೇ ದಿವಸದಲ್ಲಿ “ತಕ್ಕ ಸಮಯಕ್ಕೆ [ಆಧ್ಯಾತ್ಮಿಕ] ಆಹಾರವನ್ನು” ಕೊಡಲಿಕ್ಕಾಗಿ ಒಂದು ಮಾಧ್ಯಮವನ್ನು ನೇಮಿಸುವೆನೆಂದು ಯೇಸು ಮುಂತಿಳಿಸಿದನು.—ಮತ್ತಾ 24:45
ಯೇಸು 1919ರಲ್ಲಿ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಅಂದರೆ ಅಭಿಷಿಕ್ತರ ಒಂದು ಚಿಕ್ಕ ಗುಂಪನ್ನು “ತನ್ನ ಮನೆಯವರಿಗೆ” ಆಧ್ಯಾತ್ಮಿಕ ಆಹಾರ ಕೊಡಲು ನೇಮಿಸಿದನು
ತಾನು ನೇಮಿಸಿರುವ ಅಭಿಷಿಕ್ತರ ಈ ಚಿಕ್ಕ ಗುಂಪನ್ನು ಉಪಯೋಗಿಸಿ ಯೇಸು ಪ್ರಥಮ ಶತಮಾನದಲ್ಲಿ ಮಾಡಿದಂತೆ ಇಂದು ಸಹ ಉಣಿಸುತ್ತಿದ್ದಾನೆ
ಯೇಸು ತನ್ನ ಜನರಿಗೆ ಆಧ್ಯಾತ್ಮಿಕವಾಗಿ ಉಣಿಸಲು ಉಪಯೋಗಿಸುತ್ತಿರುವ ಮಾಧ್ಯಮವನ್ನು ಗುರುತಿಸಿ ಅದಕ್ಕೆ ಗೌರವ ಕೊಡುತ್ತಿದ್ದೇನೆಂದು ನಾನು ಹೇಗೆ ತೋರಿಸಬಹುದು?