ಪಸ್ಕ ಹಬ್ಬವು ಸ್ಮರಣೆಯ ಮುನ್ಛಾಯೆ ಆಗಿರಲಿಲ್ಲ. ಆದರೆ ಅದರ ಕೆಲವು ವೈಶಿಷ್ಟ್ಯಗಳಿಗೆ ತುಂಬ ಅರ್ಥವಿದೆ. ಉದಾಹರಣೆಗೆ ಯೇಸುವನ್ನು “ಪಸ್ಕದ ಕುರಿ” ಎಂದು ಪೌಲನು ಹೇಳಿದನು. (1ಕೊರಿಂ 5:7) ಬಾಗಿಲಿನ ನಿಲುವುಪಟ್ಟಿಗಳಿಗೆ ಹಚ್ಚಿದ ರಕ್ತ ಮಕ್ಕಳ ಜೀವವನ್ನು ಕಾಪಾಡಿದಂತೆಯೇ ಯೇಸುವಿನ ರಕ್ತ ನಮ್ಮ ಜೀವವನ್ನು ಕಾಪಾಡುತ್ತದೆ. (ವಿಮೋ 12:12, 13) ಪಸ್ಕದ ಕುರಿಮರಿಯ ಒಂದು ಎಲುಬನ್ನೂ ಮುರಿಯಬಾರದಿತ್ತು. ಅದೇ ರೀತಿ ಯೇಸುವನ್ನು ಕಂಬಕ್ಕೇರಿಸಿದಾಗ ಅವನ ಒಂದು ಎಲುಬನ್ನೂ ಮುರಿಯಲಿಲ್ಲ. ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಕಂಬಕ್ಕೇರಿಸಿದವರ ಮೂಳೆಗಳನ್ನು ಮುರಿಯುವ ಪದ್ಧತಿ ಇತ್ತು.—ವಿಮೋ 12:46; ಯೋಹಾ 19:31-33, 36.