ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಆಗಸ್ಟ್‌ ಪು. 3
  • ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಲೋಟನ ಹೆಂಡತಿಯಿಂದ ಪಾಠ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಲೋಟನ ಪತ್ನಿ ಹಿಂದೆ ನೋಡಿದಳು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಹೊಸ ಲೋಕದೊಳಗೆ ವಿಮೋಚನೆಗೆ ಸಿದ್ಧವಾಗಿರ್ರಿ
    ಕಾವಲಿನಬುರುಜು—1990
  • ಬಡತನದ ಬೇಗೆಯಿಂದ ಸಿರಿತನದ ಸಂಭ್ರಮಕ್ಕೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಆಗಸ್ಟ್‌ ಪು. 3
ಲೋಟನ ಹೆಂಡತಿ ಹಿಂದೆ ತಿರುಗಿ ಸೊದೋಮನ್ನು ನೋಡಿ ಉಪ್ಪಿನ ಕಂಬವಾಗಿದ್ದಾಳೆ

ನಮ್ಮ ಕ್ರೈಸ್ತ ಜೀವನ

ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ

ಲೋಟನ ಹೆಂಡತಿ ಸೋದೋಮನ್ನು ಬಿಟ್ಟು ಓಡಿ ಹೋಗುತ್ತಿರುವಾಗ ಯಾಕೆ ಹಿಂದೆ ನೋಡಿದಳು? ಕಾರಣ ಏನು ಎಂದು ಬೈಬಲ್‌ ಹೇಳುವುದಿಲ್ಲ. (ಆದಿ 19:17, 26) ಯೇಸು ಈ ಮಾತುಗಳನ್ನು ಹೇಳಿದ ಸನ್ನಿವೇಶ ನೋಡುವುದಾದರೆ ಅವಳು ತಾನು ಬಿಟ್ಟುಬಂದ ವಿಷಯಗಳಿಗಾಗಿ ಹಾತೊರೆಯುತ್ತಿದ್ದಿರಬಹುದು ಎಂದು ಗೊತ್ತಾಗುತ್ತದೆ. (ಲೂಕ 17:31, 32) ಲೋಟನ ಹೆಂಡತಿಯಂತೆ ದೇವರ ಮೆಚ್ಚುಗೆಯನ್ನು ಕಳೆದುಕೊಳ್ಳಬಾರದೆಂದರೆ ನಾವು ಏನು ಮಾಡಬೇಕು? ನಮ್ಮ ಜೀವನದಲ್ಲಿ ಸುಖಸೌಕರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದು. (ಮತ್ತಾ 6:33) ನಾವು ‘ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರೆವು’ ಎಂದು ಯೇಸು ಕಲಿಸಿದನು. (ಮತ್ತಾ 6:24) ಒಂದುವೇಳೆ ನಮ್ಮಲ್ಲಿರುವ ವಸ್ತುಗಳು ನಮ್ಮನ್ನು ಆಧ್ಯಾತ್ಮಿಕ ವಿಷಯಗಳಿಂದ ಅಪಕರ್ಷಿಸುತ್ತಿವೆ ಎಂದು ನಮಗೆ ಗೊತ್ತಾದರೆ ಏನು ಮಾಡಬೇಕು? ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ತಿಳಿದುಕೊಳ್ಳಲು ವಿವೇಕಕ್ಕಾಗಿ ಯೆಹೋವನಲ್ಲಿ ಬೇಡಿಕೊಳ್ಳಬೇಕು. ಆ ಬದಲಾವಣೆಗಳನ್ನು ಮಾಡಲು ಬೇಕಾದ ಧೈರ್ಯ ಬಲವನ್ನು ಕೊಡುವಂತೆಯೂ ಕೇಳಿಕೊಳ್ಳಬೇಕು.

ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ ಎಂಬ ಮೂರು ಭಾಗಗಳ ವಿಡಿಯೋದಲ್ಲಿ ನೋಡಿದ್ದನ್ನು ನೆನಪಿಸಿಕೊಂಡು ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹೇಳಿ:

  • ಕೆಲಸದ ಸ್ಥಳದಲ್ಲಿ ಆ್ಯನ; ಗ್ಲೋರಿಯ ತನ್ನ ಅಂಕಲ್‌ನೊಟ್ಟಿಗೆ; ಬ್ರಾಯನ್‌ ಮತ್ತು ಗ್ಲೋರಿಯ ಒಟ್ಟಿಗೆ ಪ್ರಾರ್ಥಿಸುತ್ತಿದ್ದಾರೆ

    ನಾನು ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಂಡಿದ್ದೇನೆ ಎಂದು ನನ್ನ ಕ್ರಿಯೆಗಳಿಂದ ಹೇಗೆ ತೋರಿಸಬಹುದು?

    ಹೆಚ್ಚು ಹಣ ಮಾಡಬೇಕೆನ್ನುವ ಒತ್ತಡದಿಂದಾಗಿ ಗ್ಲೋರಿಯಾಳ ಯೋಚನೆ, ನಡೆ, ನುಡಿ ಹೇಗೆ ಬದಲಾದವು?

  • ಲೋಟನ ಹೆಂಡತಿ ಹೇಗೆ ಇಂದು ನಮಗೆ ಕೆಟ್ಟ ಮಾದರಿ ಆಗಿದ್ದಾಳೆ?

  • ಬೈಬಲ್‌ ತತ್ವಗಳನ್ನು ಅನ್ವಯಿಸಿದ್ದರಿಂದ ಜೋ ಮತ್ತು ಅವನ ಕುಟುಂಬಕ್ಕೆ ಹೇಗೆ ಸಹಾಯವಾಯಿತು?

  • ಆ್ಯನ ತನ್ನ ಜೊತೆ ಕೆಲಸಮಾಡುವವರ ಸಹವಾಸ ಮಾಡಿದ್ದರಿಂದ ಅವಳ ಆಧ್ಯಾತ್ಮಿಕತೆಗೆ ಏನಾಯಿತು?

  • ಹಣ ಮಾಡುವುದನ್ನೇ ಗುರಿಯಾಗಿ ಇಟ್ಟುಕೊಳ್ಳುವ ಒತ್ತಡ ಬಂದಾಗ ನಮಗೆ ಯಾಕೆ ಧೈರ್ಯ ಬೇಕು?

  • ಬ್ರಾಯನ್‌ ಮತ್ತು ಗ್ಲೋರಿಯ ಪುನಃ ಆಧ್ಯಾತ್ಮಿಕ ವಿಷಯಗಳಿಗೆ ಹೇಗೆ ಮೊದಲ ಸ್ಥಾನ ಕೊಟ್ಟರು?

  • ಈ ವಿಡಿಯೋದಲ್ಲಿ ಯಾವ ಯಾವ ಬೈಬಲ್‌ ತತ್ವಗಳ ಬಗ್ಗೆ ಕಲಿತಿರಿ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ