ಬೈಬಲಿನಲ್ಲಿರುವ ರತ್ನಗಳು | ಯೋಹಾನ 11-12
ಯೇಸುವಿನಂತೆ ಅನುಕಂಪ ತೋರಿಸಿ
ಯೇಸು ಅನುಕಂಪ ಮತ್ತು ಸಹಾನುಭೂತಿ ತೋರಿಸಿದ್ದು ಯಾಕೆ ವಿಶೇಷವಾಗಿತ್ತು?
ಬೇರೆಯವರಿಗೆ ಬಂದ ಎಲ್ಲಾ ರೀತಿಯ ಕಷ್ಟಗಳನ್ನು ಯೇಸು ಅನುಭವಿಸಲಿಲ್ಲವಾದರೂ, ತನ್ನನ್ನು ಅವರ ಪರಿಸ್ಥಿತಿಯಲ್ಲಿಟ್ಟು ಅವರ ನೋವನ್ನು ಅರ್ಥಮಾಡಿಕೊಂಡನು
ಇತರರ ಮುಂದೆ ಅಳುವುದಕ್ಕೆ ಅವನು ಸಂಕೋಚಪಟ್ಟುಕೊಳ್ಳಲಿಲ್ಲ
ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದೆ ಬಂದನು