ನಮ್ಮ ಕ್ರೈಸ್ತ ಜೀವನ
ಕ್ವಿಬೆಕ್ನಲ್ಲಿ ನಮ್ಮ ಕೆಲಸಕ್ಕೆ ಕಾನೂನಿನ ಮನ್ನಣೆ
ಪೌಲನು ತನ್ನ ವಿಚಾರಣೆ ನಡೆಯುವಾಗ ಕೈಸರನಿಗೆ ಮನವಿಮಾಡಿದನು. ರೋಮನ್ ಪ್ರಜೆಯಾಗಿದ್ದ ತನ್ನ ಹಕ್ಕನ್ನು ಬಳಸುವ ಮೂಲಕ ನಾವೇನು ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾನೆ. ಕ್ವಿಬೆಕ್ನಲ್ಲಿ ನಮ್ಮ ಕೆಲಸಕ್ಕೆ ಕಾನೂನಿನ ಮನ್ನಣೆ ಎಂಬ ವಿಡಿಯೋ ನೋಡಿ. ಕ್ವಿಬೆಕ್ನಲ್ಲಿ ಸುವಾರ್ತೆಯನ್ನು ಸಮರ್ಥಿಸಲು ನಮ್ಮ ಸಹೋದರರು ಕಾನೂನುಬದ್ಧ ಹಕ್ಕುಗಳನ್ನು ಹೇಗೆ ಬಳಸಿಕೊಂಡಿದ್ದಾರೆ ಎಂದು ಗಮನಿಸಿ. ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:
ಕ್ವಿಬೆಕ್ನಲ್ಲಿ ನಮ್ಮ ಸಹೋದರರು ಎದುರಿಸಿದ ಸವಾಲುಗಳೇನು?
ಯಾವ ವಿಶೇಷ ಕರಪತ್ರವನ್ನು ಅವರು ಹಂಚಿದರು ಮತ್ತು ಅದರ ಫಲಿತಾಂಶವೇನು?
ಸಹೋದರ ಎಮೀ ಬೂಶೇಗೆ ಏನಾಯಿತು?
ಸಹೋದರ ಬೂಶೇಯ ಕೇಸ್ನಲ್ಲಿ ಕೆನಡದ ಸರ್ವೋಚ್ಛ ನ್ಯಾಯಾಲಯ ಯಾವ ತೀರ್ಪು ಹೊರಡಿಸಿತು?
ಅಪರೂಪವಾಗಿ ಬಳಸುತ್ತಿದ್ದ ಯಾವ ಕಾನೂನುಬದ್ಧ ಹಕ್ಕನ್ನು ಸಹೋದರರು ಬಳಸಿದರು ಮತ್ತು ಅದರ ಫಲಿತಾಂಶ ಏನಾಯಿತು?
ಪೊಲೀಸರಿಗೆ ಪಾದ್ರಿಗಳು ಕುಮ್ಮಕ್ಕು ಕೊಟ್ಟು ಒಂದು ಕ್ರೈಸ್ತ ಕೂಟವನ್ನು ನಿಲ್ಲಿಸಿದ ಮೇಲೆ ಏನಾಯಿತು?