ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಜೂನ್‌ ಪು. 7
  • ಮನೋರಂಜನೆಯನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮನೋರಂಜನೆಯನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಯೆಹೋವ ದೇವರಿಗೆ ಇಷ್ಟವಾಗುವ ಮನರಂಜನೆಯನ್ನ ಆರಿಸಿಕೊಳ್ಳಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಒಳ್ಳೆಯ ಮನೋರಂಜನೆಯನ್ನು ಆರಿಸಿಕೊಳ್ಳುವ ವಿಧ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ನೀವು ಹಿತಕರವಾದ ಮನೋರಂಜನೆಯನ್ನು ಕಂಡುಕೊಳ್ಳಸಾಧ್ಯವಿದೆ
    ಎಚ್ಚರ!—1997
  • ಸಾಮಾಜಿಕ ಮನೋರಂಜನೆ—ಪ್ರಯೋಜನಗಳಲ್ಲಿ ಆನಂದಿಸಿರಿ, ಪಾಶಗಳನ್ನು ತ್ಯಜಿಸಿರಿ
    ಕಾವಲಿನಬುರುಜು—1992
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಜೂನ್‌ ಪು. 7

ನಮ್ಮ ಕ್ರೈಸ್ತ ಜೀವನ

ಮನೋರಂಜನೆಯನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ

ಮನೋರಂಜನೆಯನ್ನು ಜಾಣ್ಮೆಯಿಂದ ಆರಿಸಿಕೊಳ್ಳಬೇಕು. ಯಾಕೆ? ಯಾಕೆಂದರೆ ನೀವು ಆರಿಸಿಕೊಳ್ಳುವ ಚಲನಚಿತ್ರ, ಗೀತೆ, ವೆಬ್‌ಸೈಟ್‌, ಪುಸ್ತಕ, ವಿಡಿಯೋ ಗೇಮ್‌ ಮೊದಲು ನಿಮ್ಮ ಮನಸ್ಸನ್ನು ತುಂಬಿಕೊಳ್ಳುತ್ತದೆ. ಆಮೇಲೆ ಅದು ನಿಮ್ಮ ನಡತೆಯನ್ನು ಪ್ರಭಾವಿಸುತ್ತದೆ. ಇವತ್ತಿನ ಹೆಚ್ಚಿನ ಮನೋರಂಜನೆಯಲ್ಲಿ ಯೆಹೋವನಿಗೆ ಸ್ವಲ್ಪನೂ ಇಷ್ಟ ಇಲ್ಲದಿರುವ ವಿಷಯಗಳೇ ತುಂಬಿರುತ್ತದೆ. (ಕೀರ್ತ 11:5; ಗಲಾ 5:19-21) ಹಾಗಾಗಿ ಯೆಹೋವನಿಗೆ ಇಷ್ಟ ಆಗುವಂಥ ವಿಷಯಗಳನ್ನೇ ಆರಿಸಿಕೊಳ್ಳಬೇಕು ಎಂದು ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ.—ಫಿಲಿ 4:8.

  • ರೋಮಿನ ಕತ್ತಿಮಲ್ಲರ ಆಟ

    ಎಂಥ ಮನರಂಜನೆಯನ್ನು ನಾನು ಆರಿಸಿಕೊಳ್ಳಬೇಕು? ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ: ಇಂದಿರುವ ಕೆಲವು ಮನೋರಂಜನೆ ಹೇಗೆ ಅಂದಿನ ರೋಮಿನ ಕತ್ತಿಮಲ್ಲರ ಆಟಗಳ ತರ ಇದೆ?

  • ಸಭೆಯಲ್ಲಿರುವ ಒಬ್ಬ ಯುವ ಸಹೋದರನೊಟ್ಟಿಗೆ ಸೇರಿ ಒಬ್ಬ ಪಯನೀಯರ್‌ ಸಹೋದರನು ಸೇವೆ ಮಾಡುತ್ತಿದ್ದಾನೆ

    ಮನೋರಂಜನೆಯನ್ನು ಜಾಣ್ಮೆಯಿಂದ ಆಯ್ಕೆ ಮಾಡಲು ಸಭೆಯವರು ತಮಗಿಂತ ಚಿಕ್ಕವರಿಗೆ ಹೇಗೆ ಸಹಾಯ ಮಾಡಬಹುದು?

  • ಸೈನಿಕ

    ಮನೋರಂಜನೆ ವಿಷಯದಲ್ಲಿ ರೋಮನ್ನರಿಗೆ 12:9 ನ್ನು ಹೇಗೆ ಅನ್ವಯಿಸಿಕೊಳ್ಳಬೇಕು?

  • ಯುವಪ್ರಾಯದ ಸಾಕ್ಷಿಗಳು ಫುಟ್‌ಬಾಲ್‌ ಆಟ ಆಡುತ್ತಿದ್ದಾರೆ

    ನೀವು ಇರುವ ಸ್ಥಳದಲ್ಲಿ ಯಾವ ಒಳ್ಳೇ ಮನೋರಂಜನೆ ಇದೆ?

ನೀವೇ ಏನಾದರೂ ಮಾಡಿ!

ಇಂದು ಎಷ್ಟೋ ಮನೋರಂಜನೆ ನಮ್ಮನ್ನು ಸೋಮಾರಿ ಮಾಡುತ್ತಿದೆ. ಯಾಕೆಂದರೆ ಚಲನಚಿತ್ರ, ಪುಸ್ತಕ, ಟಿವಿ ಕಾರ್ಯಕ್ರಮಗಳಲ್ಲಿ ಬೇರೆಯವರು ಮಾಡಿರುವ, ಬರೆದಿರುವ ವಿಷಯಗಳು ಬರುತ್ತವೆ. ಅದರಲ್ಲಿ ನಾವು ತಲೆ ಓಡಿಸಿ ಮಾಡಿದ್ದು ಒಂದೂ ಇಲ್ಲ. ಇಂಥ ಮನೋರಂಜನೆಯಿಂದ ಖುಷಿ ಸಿಗುವುದಾದರೂ ಅನೇಕರು ತಾವೇ ಏನಾದರೂ ಮಾಡಿ ಹೆಚ್ಚು ಆನಂದಿಸುತ್ತಿದ್ದಾರೆ. ಕೆಲವರು ಸಂಗೀತ ನುಡಿಸುತ್ತಾರೆ, ಚಿತ್ರ ಬಿಡಿಸುತ್ತಾರೆ, ಆಟ ಆಡುತ್ತಾರೆ, ಪ್ರವಾಸ ಹೋಗುತ್ತಾರೆ, ಗುಡ್ಡ-ಗಾಡು ಸುತ್ತುತ್ತಾರೆ. ನಾವು ಯಾವ ಮನೋರಂಜನೆಯನ್ನೇ ಆಯ್ಕೆ ಮಾಡಿದರೂ “ಎಲ್ಲವನ್ನು ದೇವರ ಮಹಿಮೆಗಾಗಿ” ಮಾಡಬೇಕು.—1ಕೊರಿಂ 10:31.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ