ಬೈಬಲಿನಲ್ಲಿರುವ ರತ್ನಗಳು|1 ಥೆಸಲೊನೀಕ 1-5
“ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ”
ಪ್ರತಿಯೊಬ್ಬ ಸಹೋದರ-ಸಹೋದರಿಗೂ ಬೇರೆಯವರನ್ನು ಪ್ರೋತ್ಸಾಹಿಸಲು ಆಗುತ್ತದೆ. ಉದಾಹರಣೆಗೆ, ಕಾಯಿಲೆ ಅಥವಾ ಇನ್ಯಾವುದೇ ಕಷ್ಟಗಳಿದ್ದರೂ ನಾವು ತಪ್ಪದೆ ಕೂಟಗಳಿಗೆ ಮತ್ತು ಸೇವೆಗೆ ಹೋಗುವಾಗ ಅದನ್ನು ನೋಡಿನೇ ನಮ್ಮ ಸಹೋದರ-ಸಹೋದರಿಯರು ಪ್ರೋತ್ಸಾಹ ಪಡಕೊಳ್ಳುತ್ತಾರೆ. (1ಥೆಸ 2:2) ಅಷ್ಟೇ ಅಲ್ಲ, ಒಬ್ಬ ಸಹೋದರ ಅಥವಾ ಸಹೋದರಿಗೆ ಸಾಂತ್ವನ ಕೊಡಲು ಏನು ಮಾತಾಡಬಹುದು ಎಂದು ನಾವು ಮೊದಲೇ ಯೋಚಿಸುವುದಾದರೆ ಮತ್ತು ಸ್ವಲ್ಪ ಅಧ್ಯಯನ ಮಾಡುವುದಾದರೆ ಅವರಿಗೆ ಬೇಕಾದ ಪ್ರೋತ್ಸಾಹ ಕೊಡಲು ನಮ್ಮಿಂದ ಆಗುತ್ತದೆ.
ಒಂದು ನಿರ್ದಿಷ್ಟ ಸಮಸ್ಯೆಯಲ್ಲಿರುವ ವ್ಯಕ್ತಿಯನ್ನು ನೀವು ಪ್ರೋತ್ಸಾಹಿಸಬೇಕು ಅಂತ ಇದ್ದೀರಿ ಎಂದಿಟ್ಟುಕೊಳ್ಳಿ. ಅವರಿಗೆ ಸಹಾಯ ಆಗುವಂಥ ಮಾಹಿತಿ ನಿಮಗೆ ಎಲ್ಲಿ ಸಿಗುತ್ತದೆ?
ನೀವು ಸಭೆಯಲ್ಲಿ ಯಾರನ್ನು ಪ್ರೋತ್ಸಾಹಿಸಬೇಕು ಅಂದುಕೊಂಡಿದ್ದೀರಿ?