ನಮ್ಮ ಕ್ರೈಸ್ತ ಜೀವನ
ಇವರಿಂದ ನೀವೇನು ಕಲಿಯುತ್ತೀರಿ?
ನೀವು ಹೊಸದಾಗಿ ಹಿರಿಯ ಅಥವಾ ಸಹಾಯಕ ಸೇವಕ ಆದವರಾ? ನಿಮ್ಮ ಸಭೆಯಲ್ಲಿರುವ ಬೇರೆ ಹಿರಿಯರಿಗೆ ಅಥವಾ ಸಹಾಯಕ ಸೇವಕರಿಗೆ ನಿಮಗಿರುವಷ್ಟು ಕೌಶಲ, ಸಾಮರ್ಥ್ಯ, ವಿದ್ಯಾಭ್ಯಾಸ ಇಲ್ಲದಿರಬಹುದು. ಆದರೂ ಅವರಿಂದ ನೀವು ತುಂಬ ವಿಷಯಗಳನ್ನು ಕಲಿಯಬಹುದು. ಅಷ್ಟೇ ಅಲ್ಲ ವೃದ್ಧಾಪ್ಯ, ಆರೋಗ್ಯ ಸಮಸ್ಯೆ ಅಥವಾ ಕುಟುಂಬ ಜವಾಬ್ದಾರಿಯ ಕಾರಣ ಈಗ ಹಿರಿಯ ಅಥವಾ ಸಹಾಯಕ ಸೇವಕರಾಗಿಲ್ಲದೆ ಇರುವವರಿಂದಲೂ ತುಂಬ ವಿಷಯಗಳನ್ನು ಕಲಿಯಬಹುದು.
ಅನುಭವ ಇರುವ ಸಹೋದರರನ್ನು ಸನ್ಮಾನಿಸಿ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
1. ಸಹೋದರ ರಿಚರ್ಡ್ಸ್ ಸಹೋದರ ಬೆಲೊಗೆ ಹೇಗೆ ಗೌರವ ತೋರಿಸಿದರು?
2. ಬೆನ್ ಯಾವ ತಪ್ಪು ಮಾಡಿದ? ಯಾಕೆ?
3. ಎಲೀಷನ ಉದಾಹರಣೆಯಿಂದ ಬೆನ್ ಏನು ಕಲಿತುಕೊಂಡ?
4. ನೀವೊಬ್ಬ ಸಹೋದರ ಆಗಿರಲಿ ಸಹೋದರಿ ಆಗಿರಲಿ ಅನುಭವ ಇರುವ ಕ್ರೈಸ್ತರ ಜೊತೆ ಹೇಗೆ ಗೌರವದಿಂದ ನಡಕೊಳ್ಳಬಹುದು? ಅವರಿಂದ ಏನು ಕಲಿಯಬಹುದು?