ಬೈಬಲಿನಲ್ಲಿರುವ ರತ್ನಗಳು | ತೀತ 1-ಫಿಲೆಮೋನ
“ಹಿರಿಯರನ್ನು ನೇಮಿಸಿರಿ”
ಪೌಲ, ತೀತನಿಗೆ “ಪಟ್ಟಣ ಪಟ್ಟಣಗಳಲ್ಲಿ ಹಿರೀಪುರುಷರ ನೇಮಕಗಳನ್ನು ಮಾಡಲು” ಹೇಳಿದನು. ಈ ಮಾದರಿಯನ್ನು ಪಾಲಿಸುತ್ತಾ ಸಂಚರಣ ಮೇಲ್ವಿಚಾರಕರು ಸಭೆಗಳಲ್ಲಿ ಹಿರಿಯರನ್ನು ನೇಮಿಸುತ್ತಾರೆ.
ಆಡಳಿತ ಮಂಡಲಿ
ಒಂದನೇ ಶತಮಾನದ ಈ ಮಾದರಿಯನ್ನೇ ನಮ್ಮ ಆಡಳಿತ ಮಂಡಲಿ ಪಾಲಿಸುತ್ತೆ. ಆಡಳಿತ ಮಂಡಲಿ ಸಂಚರಣ ಮೇಲ್ವಿಚಾರಕರಿಗೆ, ಹಿರಿಯರನ್ನು ಮತ್ತು ಸಹಾಯಕ ಸೇವಕರನ್ನು ನೇಮಿಸುವ ಜವಾಬ್ದಾರಿ ಕೊಟ್ಟಿದೆ.
ಸಂಚರಣ ಮೇಲ್ವಿಚಾರಕರು
ಸಂಚರಣಾ ಮೇಲ್ವಿಚಾರಕರು, ಸಭೆಯ ಹಿರಿಯರು ಶಿಫಾರಸ್ಸು ಮಾಡಿದ ಸಹೋದರರ ಬಗ್ಗೆ ಪ್ರಾರ್ಥನೆ ಮಾಡಿ, ಜಾಗರೂಕತೆಯಿಂದ ಪರಿಶೀಲಿಸಿ, ಅರ್ಹತೆ ಇರುವವರನ್ನು ನೇಮಿಸುತ್ತಾರೆ.
ನೇಮಿತ ಹಿರಿಯರು
ಹಿರಿಯರಾಗಿ ನೇಮಕ ಆದಮೇಲೂ, ಅವರು ಬೈಬಲ್ ಅರ್ಹತೆಗಳನ್ನು ಬೆಳೆಸಿಕೊಳ್ಳುತ್ತಲೇ ಇರಬೇಕು.