ನಮ್ಮ ಕ್ರೈಸ್ತ ಜೀವನ
ಬ್ರಾಡ್‌ಕಾಸ್ಟಿಂಗ್ ಹಾಡುಗಳಿಂದ ನೀವೇನು ಕಲಿಯಬಹುದು?
ಬ್ರಾಡ್‌ಕಾಸ್ಟಿಂಗ್ ಹಾಡುಗಳಲ್ಲಿ ನಿಮಗೆ ಯಾವ ಹಾಡು ಇಷ್ಟ? ಯಾಕೆ ಇಷ್ಟ? ಈ ಹಾಡು ನನಗಾಗೇ ಮಾಡಿದ್ದಾರೆ ಅಂತ ನಿಮಗೆ ಅನಿಸಿದೆಯಾ? ಬೇರೆ ಬೇರೆ ತರದ ಸಂಗೀತ ಮತ್ತು ವಿಷಯಗಳು ಈ ವಿಡಿಯೋಗಳಲ್ಲಿ ಇರೋದ್ರಿಂದ ಎಲ್ಲರಿಗೂ ಯಾವುದಾದರು ಒಂದು ಹಾಡು ಇಷ್ಟ ಆಗೇ ಆಗಿರುತ್ತೆ. ಈ ಬ್ರಾಡ್‌ಕಾಸ್ಟಿಂಗ್ ಹಾಡುಗಳನ್ನು ಮತ್ತು ಸಂಗೀತದ ವಿಡಿಯೋಗಳನ್ನು ಬರೀ ಮನೋರಂಜನೆಗೆ ಅಂತನೇ ಮಾಡಿಲ್ಲ.
ಪ್ರತಿಯೊಂದು ಬ್ರಾಡ್‌ಕಾಸ್ಟಿಂಗ್ ಹಾಡು ನಮ್ಮ ಜೀವನಕ್ಕೆ ಮತ್ತು ಸೇವೆಗೆ ಬೇಕಾದ ಪಾಠಗಳನ್ನು ಕಲಿಸುತ್ತೆ. ಕೆಲವು ಹಾಡುಗಳು ಅತಿಥಿ ಸತ್ಕಾರ, ಐಕ್ಯತೆ, ಗೆಳೆತನ, ಧೈರ್ಯ, ಪ್ರೀತಿ ಅಥವಾ ನಂಬಿಕೆಗಳ ಬಗ್ಗೆ ಇದೆ. ಇನ್ನು ಕೆಲವು ಹಾಡುಗಳು ಯೆಹೋವನ ಹತ್ತಿರ ಮರಳಿ ಬರುವುದರ ಬಗ್ಗೆ, ಕ್ಷಮಿಸುವುದರ ಬಗ್ಗೆ, ಸಮಗ್ರತೆ ಕಾಪಾಡಿಕೊಳ್ಳುವುದರ ಬಗ್ಗೆ ಮತ್ತು ನಮ್ಮ ಆಧ್ಯಾತ್ಮಿಕ ಗುರಿಗಳ ಬಗ್ಗೆನೂ ಇದೆ. ಉದಾಹರಣೆಗೆ, ಒಂದು ಬ್ರಾಡ್‌ಕಾಸ್ಟಿಂಗ್ ಹಾಡಂತೂ ಮೊಬೈಲ್‌ಗಳನ್ನು ಹೇಗೆ ಉಪಯೋಗಿಸಬೇಕು ಅನ್ನೋದರ ಬಗ್ಗೇನೇ ಇದೆ. ಬ್ರಾಡ್‌ಕಾಸ್ಟಿಂಗ್ ಹಾಡುಗಳಿಂದ ಇನ್ಯಾವ ಪಾಠಗಳನ್ನು ನೀವು ಕಲಿತಿರಿ?
ಒಂಚೂರು ತಾಳು ಎಂಬ ಬ್ರಾಡ್‌ಕಾಸ್ಟಿಂಗ್ ಹಾಡಿನ ವಿಡಿಯೋ ನೋಡಿ. ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:
ಮುಂದೆ ಸಿಗುವ ಯಾವ ಆಶೀರ್ವಾದದ ಬಗ್ಗೆ ವೃದ್ಧ ದಂಪತಿ ಯೋಚಿಸುತ್ತಿದ್ದರು?—ಆದಿ 12:3
ತನ್ನ ಮಾತುಗಳನ್ನು ನೆರವೇರಿಸುವ ಯೆಹೋವನ ಸಾಮರ್ಥ್ಯದ ಬಗ್ಗೆ ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸಬಹುದು?
ಯಾವ ಸಂತೋಷದ ಪುನರ್ಮಿಲನ ನಮಗೆಲ್ಲ ಕಾದಿದೆ?
ದೇವರ ಸರ್ಕಾರ ಮಾಡಲಿರುವ ವಿಷಯಗಳನ್ನು ನಾವು ಮನಸ್ಸಲ್ಲಿ ಇಡೋದು ಈಗ ಇರುವ ಕಷ್ಟಗಳನ್ನು ತಾಳಿಕೊಳ್ಳಲು ನಮಗೆ ಹೇಗೆ ಸಹಾಯ ಮಾಡುತ್ತೆ?—ರೋಮ 8:25