ನಮ್ಮ ಕ್ರೈಸ್ತ ಜೀವನ
ಅಂತ್ಯದ ಸಮಯದಲ್ಲಿ ಯೆಹೋವನಿಗೆ ಹೆಚ್ಚು ನಿಷ್ಠೆ ತೋರಿಸಿ
ಯಾಕೆ ಪ್ರಾಮುಖ್ಯ: ಬಲುಬೇಗ ಕಂಡು ಕೇಳಿರದ ಘಟನೆಗಳು ನಡೆಯಲಿವೆ. ಆಗ ನಾವು ಯೆಹೋವನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಭರವಸೆ ಇಡಬೇಕು ಮತ್ತು ಧೈರ್ಯ ತೋರಿಸಬೇಕು. ಸುಳ್ಳು ಧರ್ಮಗಳ ನಾಶನದಿಂದ ಮಹಾಸಂಕಟ ಶುರು ಆಗುತ್ತೆ. (ಮತ್ತಾ 24:21; ಪ್ರಕ 17:16, 17) ಆ ಗೊಂದಲ ಗಲಿಬಿಲಿಯ ಸಮಯದಲ್ಲಿ ನಾವು ಬಹುಶಃ ನ್ಯಾಯತೀರ್ಪಿನ ಸಂದೇಶ ಸಾರ್ತೀವಿ. (ಪ್ರಕ 16:21) ನಂತ್ರ ನಮ್ಮ ಮೇಲೆ ಮಾಗೋಗಿನ ಗೋಗನಿಂದ ಆಕ್ರಮಣ ಆಗುತ್ತೆ. (ಯೆಹೆ 38:10-12, 14-16) ಆಗ ‘ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ’ ಶುರು ಆಗುತ್ತೆ. (ಪ್ರಕ 16:14, 16) ಈ ಎಲ್ಲಾ ಘಟನೆಗಳು ನಡೆಯುವಾಗ ನಾವು ಧೈರ್ಯದಿಂದ ಇರಬೇಕು. ಅದಕ್ಕಾಗಿ ಈಗ ನಮಗೆ ನಂಬಿಕೆಯ ಪರೀಕ್ಷೆಗಳು ಬಂದಾಗ ಯೆಹೋವನಿಗೆ ನಿಷ್ಠೆ ತೋರಿಸಬೇಕು.
ಹೇಗೆ ತೋರಿಸಬಹುದು:
ಎಂಥ ದೊಡ್ಡ ಪರೀಕ್ಷೆ ಬಂದ್ರೂ ಯೆಹೋವನಿಗೆ ಇಷ್ಟ ಆಗೋ ರೀತಿಯಲ್ಲೇ ನಡೆಯಿರಿ.—ಯೆಶಾ 5:20
ನಮ್ಮ ಸಹೋದರ ಸಹೋದರಿಯರ ಜೊತೆ ಸೇರಿ ಯೆಹೋವನನ್ನು ಆರಾಧಿಸಿ.—ಇಬ್ರಿ 10:24, 25
ಯೆಹೋವನ ಸಂಘಟನೆಯಿಂದ ಬರೋ ಎಲ್ಲ ನಿರ್ದೇಶನಗಳನ್ನ ತಕ್ಷಣ ಪಾಲಿಸಿ.—ಇಬ್ರಿ 13:17
ಈ ಹಿಂದೆ ಯೆಹೋವನು ತನ್ನ ಜನ್ರನ್ನ ಹೇಗೆಲ್ಲಾ ಕಾಪಾಡಿದ್ದಾನೆ ಅನ್ನೋ ವಿಷಯದ ಬಗ್ಗೆ ಧ್ಯಾನಿಸಿ.—2ಪೇತ್ರ 2:9
ಯೆಹೋವನಿಗೆ ಪ್ರಾರ್ಥಿಸುತ್ತಾ ಆತನಲ್ಲಿ ಭರವಸೆ ಇಡಿ.—ಕೀರ್ತ 112:7, 8
ಧೈರ್ಯದಿಂದ ಎದುರಿಸಬೇಕಾದ ಭವಿಷ್ಯದ ಘಟನೆಗಳು—ತುಣುಕು ಅನ್ನೋ ನಾಟಕರೂಪದ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ಕೆಲವರನ್ನ ನಾರ್ತ್ ಸಭೆಗೆ ಇನ್ನು ಕೆಲವರನ್ನ ಸೌತ್ ಸಭೆಗೆ ಹಾಕಲಾಗಿದೆ ಅಂತ ಹೇಳಿದಾಗ ವಿಧೇಯತೆ ತೋರಿಸಲು ಎಲ್ಲಾ ಪ್ರಚಾರಕರಿಗೆ ಸುಲಭ ಆಯ್ತಾ?
ವಿಧೇಯತೆ ತೋರಿಸಿದ್ರೆ ಧೈರ್ಯ ಬೆಳಸಿಕೊಳ್ಳೋಕೆ ಹೇಗೆ ಸಹಾಯ ಆಗುತ್ತೆ?
ಅರ್ಮಗೆದೋನ್ ಸಮಯದಲ್ಲಿ ನಮಗೆ ಧೈರ್ಯ ಯಾಕೆ ಬೇಕು?
ಮುಂದೆ ನಡೆಯಲಿರುವ ಘಟನೆಗಳಿಗಾಗಿ ಈಗಿಂದನೇ ಸಿದ್ಧರಾಗಿ
ಯೆಹೋವನು ನಮ್ಮನ್ನು ರಕ್ಷಿಸೇ ರಕ್ಷಿಸುತ್ತಾನೆ ಅಂತ ನಂಬಲು ಬೈಬಲಿನ ಯಾವ ಉದಾಹರಣೆ ಸಹಾಯ ಮಾಡುತ್ತೆ?—2ಪೂರ್ವ 20:1-24