ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮೇ ಪು. 13
  • ಕುಟುಂಬದಲ್ಲಿ ಪ್ರೀತಿ ತೋರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುಟುಂಬದಲ್ಲಿ ಪ್ರೀತಿ ತೋರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಸುಖ ಸಂಸಾರ ಸಾಧ್ಯ!
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ನಿಮ್ಮ ಕುಟುಂಬ ಜೀವನವನ್ನು ಸಂತೋಷವುಳ್ಳದ್ದಾಗಿ ಮಾಡುವ ವಿಧ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಚಿರಸ್ಥಾಯಿಯಾದ ವಿವಾಹಕ್ಕೆ ಎರಡು ಕೀಲಿ ಕೈಗಳು
    ಕುಟುಂಬ ಸಂತೋಷದ ರಹಸ್ಯ
  • ನಿಮ್ಮ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿರಿ
    ಕುಟುಂಬ ಸಂತೋಷದ ರಹಸ್ಯ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮೇ ಪು. 13
ಕೂಟದಲ್ಲಿ ಒಟ್ಟಾಗಿ ಹಾಡುತ್ತಿರೋ ಒಂದು ಕುಟುಂಬ.

ನಮ್ಮ ಕ್ರೈಸ್ತ ಜೀವನ

ಕುಟುಂಬದಲ್ಲಿ ಪ್ರೀತಿ ತೋರಿಸಿ

ಒಂದು ಕುಟುಂಬದಲ್ಲಿ ಪ್ರೀತಿ ತುಂಬಾನೇ ಮುಖ್ಯ. ಪ್ರೀತಿ ಇಲ್ಲ ಅಂದ್ರೆ ಕುಟುಂಬದಲ್ಲಿ ಐಕ್ಯತೆ ಇರಲ್ಲ. ಒಬ್ರಿಗೊಬ್ರು ಸಹಕಾರ ಕೊಡೋದು ಕಷ್ಟ ಆಗುತ್ತೆ. ಗಂಡ, ಹೆಂಡತಿ ಮತ್ತು ಅಪ್ಪ-ಅಮ್ಮ ಕುಟುಂಬದಲ್ಲಿ ಹೇಗೆ ಪ್ರೀತಿ ತೋರಿಸಬಹುದು?

ತನ್ನ ಹೆಂಡತಿಯನ್ನ ಪ್ರೀತಿಸೋ ಗಂಡ ಅವಳ ಅವಶ್ಯಕತೆಗಳನ್ನ ಪೂರೈಸ್ತಾನೆ, ಅವಳ ಅಭಿಪ್ರಾಯಕ್ಕೆ ಕಿವಿಗೊಡ್ತಾನೆ ಮತ್ತು ಅವಳ ಭಾವನೆಗಳನ್ನ ಅರ್ಥಮಾಡಿಕೊಳ್ತಾನೆ. (ಎಫೆ 5:28, 29) ಅವನು ತನ್ನ ಕುಟುಂಬದ ಸದಸ್ಯರಿಗೆ ಊಟ ಬಟ್ಟೆಗಳನ್ನ ಒದಗಿಸುತ್ತಾ ಅವರನ್ನ ಚೆನ್ನಾಗಿ ನೋಡ್ಕೊಳ್ತಾನೆ. ಅವರು ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಸಹಾಯ ಮಾಡ್ತಾನೆ. ಪ್ರತಿ ವಾರ ತಪ್ಪದೇ ಕುಟುಂಬ ಆರಾಧನೆ ನಡೆಸುತ್ತಾನೆ. (1ತಿಮೊ 5:8) ತನ್ನ ಗಂಡನನ್ನ ಪ್ರೀತಿಸೋ ಹೆಂಡತಿ ಅವನಿಗೆ ಅಧೀನತೆ ತೋರಿಸ್ತಾಳೆ, ಅವನು ಮಾಡಿದ ನಿರ್ಣಯಗಳನ್ನ ಒಪ್ಪಿಕೊಳ್ತಾಳೆ ಮತ್ತು “ಆಳವಾದ ಗೌರವ” ಕೊಡ್ತಾಳೆ. (ಎಫೆ 5:22, 33; 1ಪೇತ್ರ 3:1-6) ಗಂಡ-ಹೆಂಡತಿ ಇಬ್ರೂ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾರೆ. (ಎಫೆ 4:32) ತಮ್ಮ ಮಕ್ಕಳನ್ನ ಪ್ರೀತಿಸೋ ಅಪ್ಪ-ಅಮ್ಮ ಭೇದಭಾವ ಮಾಡದೆ ಎಲ್ಲಾ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ತಾರೆ ಮತ್ತು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಅವರಿಗೆ ಕಲಿಸ್ತಾರೆ. (ಧರ್ಮೋ 6:6, 7; ಎಫೆ 6:4) ಅಷ್ಟೇ ಅಲ್ಲ ಮಕ್ಕಳು ಶಾಲೆಯಲ್ಲಿ ಯಾವೆಲ್ಲಾ ಸಮಸ್ಯೆಗಳನ್ನ ಎದುರಿಸ್ತಿದ್ದಾರೆ, ಸ್ನೇಹಿತರಿಂದ ಒತ್ತಡ ಬಂದಾಗ ಅದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದಕ್ಕೂ ಗಮನ ಕೊಡ್ತಾರೆ ಮತ್ತು ಬೇಕಾದ ಸಹಾಯ ಮಾಡ್ತಾರೆ. ಕುಟುಂಬದಲ್ಲಿ ಎಷ್ಟು ಪ್ರೀತಿ ಇರುತ್ತೋ ಅಷ್ಟು ಸಂತೋಷ ಮತ್ತು ಭದ್ರತೆನೂ ಇರುತ್ತೆ.

ಕುಟುಂಬದಲ್ಲಿ ಶಾಶ್ವತ ಪ್ರೀತಿ ತೋರಿಸಿ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ‘ಕುಟುಂಬದಲ್ಲಿ ಶಾಶ್ವತ ಪ್ರೀತಿ’ ವಿಡಿಯೋದ ಒಂದು ಸೀನ್‌. ಕೂಟ ಮುಗಿಸಿ ವಾಪಸ್‌ ಮನೆಗೆ ಬಂದ ಮೇಲೆ ಒಂದು ದಂಪತಿ ಒಟ್ಟಿಗೆ ಕೂತು ಒಂದು ವಚನದ ಬಗ್ಗೆ ಚರ್ಚಿಸುತ್ತಿದ್ದಾರೆ.

    ತನ್ನ ಹೆಂಡತಿಯನ್ನ ಪ್ರೀತಿಸೋ ಗಂಡ ಅವಳನ್ನ ಅಮೂಲ್ಯವಾಗಿ ನೋಡ್ತಾನೆ ಅಂತ ಹೇಗೆ ತೋರಿಸ್ತಾನೆ?

  • ‘ಕುಟುಂಬದಲ್ಲಿ ಶಾಶ್ವತ ಪ್ರೀತಿ’ ವಿಡಿಯೋದ ಒಂದು ಸೀನ್‌. ಕೂಟ ಮುಗಿಸಿ ವಾಪಸ್‌ ಮನೆಗೆ ಬಂದ ಮೇಲೆ ಒಬ್ಬ ಸಹೋದರಿ ಸತ್ಯದಲ್ಲಿ ಇಲ್ಲದ ತನ್ನ ಗಂಡನ ಮಾತನ್ನ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದಾರೆ ಮತ್ತು ಭರವಸೆ ಮೂಡಿಸುತ್ತಿದ್ದಾರೆ.

    ತನ್ನ ಗಂಡನನ್ನ ಪ್ರೀತಿಸೋ ಹೆಂಡತಿ ಅವನಿಗೆ ಆಳವಾದ ಗೌರವ ಹೇಗೆ ತೋರಿಸ್ತಾಳೆ?

  • ‘ಕುಟುಂಬದಲ್ಲಿ ಶಾಶ್ವತ ಪ್ರೀತಿ’ ವಿಡಿಯೋದ ಒಂದು ಸೀನ್‌. ಒಂದು ಕುಟುಂಬ ಸ್ನ್ಯಾಕ್ಸ್‌ ತಿನ್ನುತ್ತಾ ಕೂಟದಲ್ಲಿ ತಮಗೆ ಇಷ್ಟವಾದ ವಿಷಯವನ್ನ ಹಂಚಿಕೊಳ್ಳುತ್ತಿದ್ದಾರೆ.

    ತಮ್ಮ ಮಕ್ಕಳನ್ನ ಪ್ರೀತಿಸೋ ಅಪ್ಪ-ಅಮ್ಮ ಅವರ ಹೃದಯದಲ್ಲಿ ದೇವರ ಮಾತುಗಳನ್ನ ನಾಟಿಸಲು ಏನು ಮಾಡ್ತಾರೆ?

ಮೊಬೈಲ್‌, ಟ್ಯಾಬ್‌ಗಳ ವಿಷಯದಲ್ಲಿ ಎಚ್ಚರಿಕೆಯ ಮಾತುಗಳು

ಮೊಬೈಲ್‌, ಟ್ಯಾಬ್‌ ಮತ್ತು ಇತರ ಎಲೆಕ್ಟ್ರಾನಿಕ್‌ ಸಾಧನಗಳನ್ನ ಬಳಸುವಾಗ ತುಂಬಾ ಸಮಯ ಕಳೆದುಹೋಗಬಹುದು. ಕುಟುಂಬ ಸದಸ್ಯರಿಗಾಗಿ ಸಮಯನೇ ಇರಲ್ಲ. ಹೆತ್ತವರು ತಾವು ಮತ್ತು ತಮ್ಮ ಮಕ್ಕಳು ಎಷ್ಟು ಸಮಯದವರೆಗೆ ಮೊಬೈಲ್‌, ಟ್ಯಾಬ್‌ ಮತ್ತು ಇತರ ಎಲೆಕ್ಟ್ರಾನಿಕ್‌ ಸಾಧನಗಳನ್ನ ಬಳಸಬೇಕು ಅಂತ ಮೊದಲೇ ನಿರ್ಧರಿಸಬಹುದು. ಅಷ್ಟೇ ಅಲ್ಲ, ಅವರ ಮಕ್ಕಳು ಇನ್ನು ಚಿಕ್ಕವರಾಗಿದ್ರೆ ಅವರ ಕೈಯಲ್ಲಿ ಮೊಬೈಲ್‌-ಟ್ಯಾಬ್‌ ಕೊಡೋದು ಸರೀನಾ ಅಂತ ಯೋಚಿಸಬೇಕು. ಒಂದು ವೇಳೆ ಕೊಟ್ರೂ ಅಪರಿಚಿತರ ಜೊತೆ ಮಾತಾಡದಂತೆ ಎಚ್ಚರ ವಹಿಸಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ