ಬೈಬಲಿನಲ್ಲಿರುವ ರತ್ನಗಳು
ಯೆಹೋವ ಹೇಳಿದ್ದನ್ನ ಪೂರ್ಣ ಹೃದಯದಿಂದ ಮಾಡಿ
ಕಾಲೇಬ ಮೊದಲಿಂದಾನೂ ಯೆಹೋವ ದೇವರು ಹೇಳಿದ್ದನ್ನ ಪೂರ್ಣ ಹೃದಯದಿಂದ ಮಾಡ್ತಿದ್ದ (ಯೆಹೋ 14:7, 8)
ಕಾಲೇಬನಿಗೆ ವಯಸ್ಸಾದಾಗಲೂ ಒಂದು ಕಷ್ಟವಾದ ಕೆಲಸ ಮಾಡುವಾಗ ದೇವರ ಮೇಲೆ ನಂಬಿಕೆ ಇಟ್ಟ (ಯೆಹೋ 14:10-12; ಕಾವಲಿನಬುರುಜು04 12/1 ಪುಟ 12 ಪ್ಯಾರ 2)
ಕಾಲೇಬ ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡಿದ್ದಿಕ್ಕೆ ಪ್ರತಿಫಲ ಸಿಕ್ತು (ಯೆಹೋ 14:13, 14; ಕಾವಲಿನಬುರುಜು06 10/1 ಪುಟ 19 ಪ್ಯಾರ 11)
ಯೆಹೋವ ಹೇಳಿದ ತರಾನೇ ಕೆಲಸ ಮಾಡಿ ಆಶೀರ್ವಾದ ಪಡಕೊಂಡಾಗ ಕಾಲೇಬನಿಗೆ ದೇವರ ಮೇಲೆ ನಂಬಿಕೆ ಇನ್ನೂ ಜಾಸ್ತಿ ಆಯ್ತು. ಅದೇ ತರ ನಮ್ಮ ಜೀವನದಲ್ಲಿ ದೇವರು ಪ್ರಾರ್ಥನೆಗಳಿಗೆ ಉತ್ತರ ಕೊಡೋದನ್ನ, ಬೇರೆ ರೀತಿಗಳಲ್ಲಿ ಸರಿಯಾದ ದಾರಿ ತೋರಿಸೋದನ್ನ ನೋಡಿದಾಗ ಆತನ ಸೇವೆ ಮಾಡ್ತಾ ಇರೋಕೆ ಬಲ ಸಿಗುತ್ತೆ.—1ಯೋಹಾ 5:14, 15.