ಕ್ರೈಸ್ತ ಜೀವ
ಕ್ಷೇತ್ರಸೇವಾ ಕೂಟ ಹೇಗಿರಬೇಕು ಗೊತ್ತಾ?
ಕ್ಷೇತ್ರಸೇವಾ ಕೂಟನೂ ಯೆಹೋವ ಕೊಟ್ಟ ಉಡುಗೊರೆ. ಸಹೋದರ ಸಹೋದರಿಯರನ್ನ ಪ್ರೀತಿಸೋಕೆ, ಒಳ್ಳೇ ಕೆಲಸ ಮಾಡೋಕೆ ಈ ಕೂಟನೂ ನಮಗೆ ಸಹಾಯ ಮಾಡುತ್ತೆ. (ಇಬ್ರಿ 10:24, 25) ಈ ಕೂಟ 5 ರಿಂದ 7 ನಿಮಿಷ ಮಾತ್ರ ಇರಬೇಕು. ಈ ಸಮಯದೊಳಗೇ ಯಾರು ಯಾರ ಜೊತೆ ಸೇವೆ ಮಾಡಬೇಕು, ಯಾವ ಟೆರಿಟೊರಿಗೆ ಹೋಗಬೇಕು ಅಂತ ಹೇಳಬೇಕು ಮತ್ತು ಪ್ರಾರ್ಥನೆ ಮಾಡಿ ಮುಗಿಸಬೇಕು. (ಈ ಕೂಟದ ನಂತರ ಬೇರೆ ಕೂಟ ಇದ್ರೆ ಇನ್ನೂ ಕಡಿಮೆ ಸಮಯದಲ್ಲೇ ಮುಗಿಸಿ.) ಆ ದಿನ ಸೇವೆ ಮಾಡುವವರಿಗೆ ಸಹಾಯ ಆಗೋ ವಿಷಯಗಳನ್ನು ಚರ್ಚೆ ಮಾಡಿ. ಉದಾಹರಣೆಗೆ ಶನಿವಾರ ಕೂಟಕ್ಕೆ ಹಾಜರಾದವರಲ್ಲಿ ತುಂಬ ಜನ ಸೇವೆ ಮಾಡಿ ಒಂದು ವಾರ ಆಗಿರಬಹುದು. ಹಾಗಾಗಿ ಮನೆಯವರ ಹತ್ರ ಏನು ಮಾತಾಡಬೇಕು ಅಂತ ಮಾತ್ರ ಆ ದಿನ ಚರ್ಚೆ ಮಾಡಿದ್ರೂ ಸಾಕು. ಇನ್ನೂ ಯಾವ ವಿಷಯಗಳ ಬಗ್ಗೆ ಚರ್ಚೆ ಮಾಡಬಹುದು?
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿರೋ ಮಾದರಿ ಸಂಭಾಷಣೆ ಬಳಸೋದು ಹೇಗೆ?
ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಅಥವಾ ನ್ಯೂಸ್ ಬಳಸಿ ಮಾತಾಡೋದು ಹೇಗೆ?
ಮನೆಯವರು ಸಂಭಾಷಣೆ ತಡೆಯುವಂಥ ಮಾತುಗಳನ್ನ ಆಡಿದರೆ ಸಂಬಾಳಿಸಿಕೊಂಡು ಸಾರೋದು ಹೇಗೆ?
ನಾಸ್ತಿಕರು, ವಿಕಾಸವಾದ ನಂಬುವವರು, ಬೇರೆ ಭಾಷೆ ಮಾತಾಡುವವರು, ಒಂದು ಹೊಸ ಧರ್ಮದವರು ಸಿಕ್ಕಿದ್ರೆ ಮಾತಾಡೋದು ಹೇಗೆ?
jw.org ವೆಬ್‌ಸೈಟ್, JW ಲೈಬ್ರರಿ ಆ್ಯಪ್, ಬೈಬಲ್ ಬಳಸೋದು ಹೇಗೆ?
ಬೋಧನಾ ಸಾಧನಗಳನ್ನ ಉಪಯೋಗಿಸೋದು ಹೇಗೆ?
ಫೋನ್ ಸಾಕ್ಷಿಕಾರ್ಯ, ಪತ್ರ ಬರೆಯೋದು, ಸಾರ್ವಜನಿಕ ಸಾಕ್ಷಿಕಾರ್ಯ, ಪುನರ್ಭೇಟಿ, ಬೈಬಲ್ ಸ್ಟಡಿ ಮಾಡೋದು ಹೇಗೆ?
ಸುರಕ್ಷತೆ, ಹೊಂದಾಣಿಕೆ, ಒಳ್ಳೇ ನಡತೆ, ಖುಷಿಯಾಗಿ ಸೇವೆ ಮಾಡೋದು ಇಂಥ ಗುಣಗಳ ಬಗ್ಗೆ ಮಾತಾಡಬಹುದು
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ ಕಿರುಹೊತ್ತಿಗೆಯಲ್ಲಿರೋ ಪಾಠ ಅಥವಾ ವಿಡಿಯೋ ಬಗ್ಗೆ ಮಾತಾಡಬಹುದು
ಜೊತೆಯಲ್ಲಿ ಸೇವೆ ಮಾಡುವವರಿಗೆ ಪ್ರೋತ್ಸಾಹ, ಸಹಾಯ ಕೊಡೋದು ಹೇಗೆ?
ಸೇವೆಗೆ ಸಂಬಂಧಪಟ್ಟ ವಚನ ಅಥವಾ ಸೇವೆಯಲ್ಲಿ ಸಿಕ್ಕಿದ ಒಳ್ಳೇ ಅನುಭವದ ಬಗ್ಗೆ ಮಾತಾಡಬಹುದು