ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ನವೆಂಬರ್‌ ಪು. 15
  • ಆಧ್ಯಾತ್ಮಿಕವಾಗಿ ಪೋಷಿಸಿಕೊಳ್ಳೋಕೆ ವಿದ್ಯಾರ್ಥಿಗೆ ಕಲಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಧ್ಯಾತ್ಮಿಕವಾಗಿ ಪೋಷಿಸಿಕೊಳ್ಳೋಕೆ ವಿದ್ಯಾರ್ಥಿಗೆ ಕಲಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಯೆಹೋವ ದೇವರ ಸ್ನೇಹಿತರಾಗಲು ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ದುಶ್ಚಟ ಬಿಡಲು ವಿದ್ಯಾರ್ಥಿಗಳಿಗೆ ಸಹಾಯಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮನಸ್ಸಿಗೆ ನಾಟಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ನವೆಂಬರ್‌ ಪು. 15

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಆಧ್ಯಾತ್ಮಿಕವಾಗಿ ಪೋಷಿಸಿಕೊಳ್ಳೋಕೆ ವಿದ್ಯಾರ್ಥಿಗೆ ಕಲಿಸಿ

ನಮ್ಮ ಬೈಬಲ್‌ ವಿದ್ಯಾರ್ಥಿಗಳು ಯೆಹೋವನ ಬಗ್ಗೆ ಇನ್ನೂ ಚೆನ್ನಾಗಿ ತಿಳ್ಕೊಬೇಕು, ಪ್ರೌಢರಾಗಬೇಕು. (ಮತ್ತಾ 5:3; ಇಬ್ರಿ 5:12–6:2) ಅದಕ್ಕೆ ನಾವು ಕಲಿಸೋ ವಿಷಯಗಳ ಜೊತೆ ಇನ್ನೂ ತುಂಬ ವಿಷಯಗಳನ್ನ ಅವರಾಗೇ ಕಲಿಬೇಕು.

ಅವರು ಬೈಬಲ್‌ ಸ್ಟಡಿಗೆ ಒಪ್ಪಿಕೊಂಡಾಗಲೇ ಸ್ಟಡಿಗೆ ತಯಾರಿ ಮಾಡೋದು ಹೇಗೆ ಅಂತ ಹೇಳಿಕೊಡಿ. (ಕೂಟದ ಕೈಪಿಡಿ18.03 ಪುಟ 6) ಅವರು ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡೋ ಮುಂಚೆ ಪ್ರಾರ್ಥನೆ ಮಾಡೋಕೆ ಹೇಳಿ. ಅಧ್ಯಯನ ಮಾಡುವಾಗ ಮೊಬೈಲ್‌ ಅಥವಾ ಟ್ಯಾಬನ್ನ ಬಳಸೋದು ಹೇಗೆ ಅಂತ ಹೇಳಿಕೊಡಿ. jw.orgನಲ್ಲಿ ಮತ್ತು JW ಪ್ರಸಾರದಲ್ಲಿ ಬರೋ ಹೊಸ ಆಡಿಯೋ, ವಿಡಿಯೋ, ಲೇಖನಗಳನ್ನ ಕಂಡುಹಿಡಿಯೋದು ಹೇಗೆ ಅಂತ ಹೇಳಿಕೊಡಿ. ಹೋಗ್ತಾ ಹೋಗ್ತಾ ಬೈಬಲನ್ನ ದಿನಾಲೂ ಓದೋಕೆ, ಕೂಟಕ್ಕೆ ತಯಾರಿ ಮಾಡೋಕೆ ಮತ್ತು ಅವರಿಗೆ ಬರೋ ಪ್ರಶ್ನೆಗಳಿಗೆ ಅವರೇ ಸಂಶೋಧನೆ ಮಾಡಿ ಉತ್ತರ ಕಂಡುಹಿಡಿಯೋಕೆ ಕಲಿಸಿ. ಕಲಿತ ವಿಷಯಗಳನ್ನ ಧ್ಯಾನಿಸೋದು ಹೇಗೆ ಅಂತ ಹೇಳಿಕೊಡಿ.

ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯಮಾಡಿ—ಆಧ್ಯಾತ್ಮಿಕವಾಗಿ ಪೋಷಿಸಿಕೊಳ್ಳಲು ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • “ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯಮಾಡಿ—ಆಧ್ಯಾತ್ಮಿಕವಾಗಿ ಪೋಷಿಸಿಕೊಳ್ಳಲು” ಅನ್ನೋ ವಿಡಿಯೋದಲ್ಲಿ ಬರೋ ದೃಶ್ಯಗಳು. ಜಾಸ್ಮಿನ್‌ ಬೈಬಲಿಂದ ಇಷ್ಟವಾದ ವಿಷಯಗಳನ್ನ ನೆನಪಿಸಿಕೊಂಡು ಹೇಳ್ತಿದ್ದಾಳೆ.

    ಸ್ಟಡಿ ಮಾಡುವಾಗ ಬರೀ ಉತ್ತರ ಹುಡುಕದ್ರೆ ಸಾಕಾಗಲ್ಲ ಅಂತ ನೀತಾ ಜಾಸ್ಮಿನ್‌ಗೆ ಹೇಗೆ ಅರ್ಥ ಮಾಡಿಸಿದ್ರು?

  • “ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯಮಾಡಿ—ಆಧ್ಯಾತ್ಮಿಕವಾಗಿ ಪೋಷಿಸಿಕೊಳ್ಳಲು” ಅನ್ನೋ ವಿಡಿಯೋದಲ್ಲಿ ಬರೋ ದೃಶ್ಯಗಳು. ಬೈಬಲ್‌ ವಚನದಲ್ಲಿ ಉತ್ತರ ಹುಡುಕೋಕೆ ಜಾಸ್ಮಿನ್‌ಗೆ ನೀತಾ ಸಹಾಯ ಮಾಡ್ತಿದ್ದಾಳೆ.

    ಲೈಂಗಿಕ ಅನೈತಿಕತೆ ಮಾಡಬಾರದು ಅಂತ ಯೆಹೋವ ದೇವರು ಹೇಳ್ತಿರೋದು ಸರಿ ಅಂತ ಜಾಸ್ಮಿನ್‌ಗೆ ಅರ್ಥ ಮಾಡ್ಕೊಳ್ಳೋಕೆ ಯಾವುದು ಸಹಾಯ ಮಾಡ್ತು?

  • “ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯಮಾಡಿ—ಆಧ್ಯಾತ್ಮಿಕವಾಗಿ ಪೋಷಿಸಿಕೊಳ್ಳಲು” ಅನ್ನೋ ವಿಡಿಯೋದಲ್ಲಿ ಬರೋ ದೃಶ್ಯಗಳು. ಜಾಸ್ಮಿನ್‌ ಬಾಯ್‌ಫ್ರೆಂಡ್‌ ಜೊತೆ ಇದ್ದಾಗ ಒಂದು ಬೈಬಲ್‌ ವಚನದ ಬಗ್ಗೆ ಯೋಚಿಸ್ತಾ ಇದ್ದಾಳೆ.

    ಮುಖ್ಯವಾಗಿರೋ ವಿಷಯಗಳನ್ನ ಹೇಗೆ ಕಲಿಯೋದು ಮತ್ತು ಪಾಲಿಸೋದು ಅಂತ ವಿದ್ಯಾರ್ಥಿಗೆ ಕಲಿಸಿ

    ಧ್ಯಾನ ಅಂದ್ರೆ ಏನು ಅಂತ ಜಾಸ್ಮಿನ್‌ಗೆ ಅರ್ಥ ಆಯ್ತು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ