ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 5
  • ಮದುವೆ—ಒಂದು ಶಾಶ್ವತ ಬಂಧ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮದುವೆ—ಒಂದು ಶಾಶ್ವತ ಬಂಧ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಅವಿವಾಹಿತ ಸ್ಥಿತಿ ಮತ್ತು ಮದುವೆ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ವಿವಾಹ—ಪ್ರೀತಿಭರಿತ ದೇವರ ಒಂದು ಕೊಡುಗೆ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ಒಂದು ಯಶಸ್ವೀ ವಿವಾಹಕ್ಕಾಗಿ ತಯಾರಿಸುವುದು
    ಕುಟುಂಬ ಸಂತೋಷದ ರಹಸ್ಯ
  • ಒಬ್ಬ ವಿವಾಹ ಸಂಗಾತಿಯ ಆಯ್ಕೆಮಾಡಲು ದೈವಿಕ ಮಾರ್ಗದರ್ಶನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 5
ಒಬ್ಬ ದಂಪತಿ ಒಟ್ಟಿಗೆ ಸಿಹಿಸುದ್ದಿ ಸಾರುತ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ಮದುವೆ—ಒಂದು ಶಾಶ್ವತ ಬಂಧ

ಸಂಸಾರದ ದೋಣಿ ಚೆನ್ನಾಗಿ ಸಾಗುತ್ತಿದ್ರೆ ಅದ್ರಿಂದ ಯೆಹೋವನಿಗೆ ಗೌರವ ಸಿಗುತ್ತೆ, ಗಂಡ ಹೆಂಡತಿ ಸಂತೋಷವಾಗಿ ಇರುತ್ತಾರೆ. (ಮಾರ್ಕ 10:9) ಕ್ರೈಸ್ತರು ಬಾಳ ಸಂಗಾತಿಯನ್ನ ಆರಿಸಿಕೊಳ್ಳುವಾಗ ಬೈಬಲ್‌ ಮೂಲತತ್ತ್ವಗಳನ್ನ ಪಾಲಿಸಿದ್ರೆ, ಅವರ ಮದುವೆ ಬಂಧ ಶಾಶ್ವತವಾಗಿರುತ್ತೆ, ಜೀವನ ಸಂತೋಷವಾಗಿರುತ್ತೆ.

‘ಲೈಂಗಿಕ ಆಸೆಗಳನ್ನ ಹತೋಟಿಯಲ್ಲಿ ಇಡೋಕೆ ಆಗದಿರೋ ಯುವಪ್ರಾಯ ದಾಟಿದ‘ ಮೇಲೆ ಮದುವೆಯಾಗೋಕೆ ಯೋಚಿಸಿದ್ರೆ ಒಳ್ಳೇದು. ಆಗ ಸರಿಯಾಗಿ ನಿರ್ಧಾರ ಮಾಡೋಕೆ ಆಗುತ್ತೆ. (1ಕೊರಿಂ 7:36) ನಿಮಗೆ ಇನ್ನೂ ಮದುವೆ ಆಗಿಲ್ಲಾಂದ್ರೆ ಈ ಸಮಯವನ್ನ ಯೆಹೋವನ ಜೊತೆ ನಿಮಗಿರೋ ಸ್ನೇಹನ ಗಟ್ಟಿಮಾಡಿಕೊಳ್ಳೋಕೆ ಮತ್ತು ಆತನಿಗೆ ಇಷ್ಟವಾಗೋ ಗುಣಗಳನ್ನ ಬೆಳೆಸಿಕೊಳ್ಳೋಕೆ ಉಪಯೋಗಿಸಿಕೊಳ್ಳಿ. ಇದ್ರಿಂದ ಮುಂದೆ ನಿಮ್ಮ ಕುಟುಂಬ ಜೀವನವನ್ನ ಚೆನ್ನಾಗಿ ನಡೆಸೋಕೆ ಆಗುತ್ತೆ.

ನೀವು ಒಬ್ಬರನ್ನ ಮದುವೆಯಾಗೋಕೆ ಒಪ್ಪಿಕೊಳ್ಳೋಕೂ ಮುಂಚೆ ಅವರು “ಹೃದಯದಲ್ಲಿ” ಎಂಥವರಾಗಿದ್ದಾರೆ ಅಂತ ತಿಳಿದುಕೊಳ್ಳಿ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ. (1ಪೇತ್ರ 3:4) ನಿಮಗೆ ಅವರಲ್ಲಿ ಏನಾದರೂ ಕುಂದುಕೊರತೆಗಳು ಕಂಡ್ರೆ, ಮುಂದೆ ಅದ್ರಿಂದ ದೊಡ್ಡ ಸಮಸ್ಯೆ ಆಗುತ್ತೆ ಅಂತ ಅನಿಸಿದ್ರೆ, ಅದರ ಬಗ್ಗೆ ಅವರ ಜೊತೆ ಮಾತಾಡಿ. ಬೇರೆ ಸ್ನೇಹ ಸಂಬಂಧಗಳ ತರಾನೇ ಮದುವೆಯ ಬಂಧದಲ್ಲೂ, ಸಂಗಾತಿಯಿಂದ ನಿಮಗೆ ಏನು ಸಿಗುತ್ತೆ ಅಂತ ಅಲ್ಲ, ನಿಮ್ಮಿಂದ ಅವರಿಗೆ ಏನು ಕೊಡೋಕೆ ಆಗುತ್ತೆ ಅಂತ ಯೋಚಿಸಬೇಕು. (ಫಿಲಿ 2:3, 4) ಮದುವೆ ಮುಂಚೆನೇ ನೀವು ಬೈಬಲ್‌ ತತ್ವಗಳನ್ನ ಪಾಲಿಸಿದ್ರೆ, ಮುಂದೆ ಕುಟುಂಬ ಜೀವನ ನಡೆಸೋಕೆ ಒಳ್ಳೇ ಅಸ್ತಿವಾರ ಹಾಕೋಕೆ ಆಗುತ್ತೆ.

ಮದುವೆ ಜೀವನಕ್ಕಾಗಿ ತಯಾರಿ—ಭಾಗ 3: ‘ಮೊದಲು ಕೂತು ಲೆಕ್ಕ ಹಾಕಿ’ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಶೇನ್‌ ಜೊತೆ ಸಹೋದರಿಯ ಸಂಬಂಧ ಹೇಗೆ ಬೆಳೀತು?

  • ಅವನ ಬಗ್ಗೆ ತಿಳಿದುಕೊಳ್ತಾ ಹೋದ ಹಾಗೆ ಆ ಸಹೋದರಿ ಏನನ್ನ ಗಮನಿಸಿದಳು?

  • ಹೆತ್ತವರು ಅವಳಿಗೆ ಹೇಗೆ ಸಹಾಯ ಮಾಡಿದರು ಮತ್ತು ಅವಳು ವಿವೇಕದಿಂದ ಯಾವ ತೀರ್ಮಾನ ಮಾಡಿದಳು?

ಮದುವೆಯಾಗೋಕೆ ಯೋಚನೆ ಮಾಡ್ತಿರೋ ಒಬ್ಬ ಸಹೋದರ ಈ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು:

ಅವಳಲ್ಲಿ ಯಾವ ಕ್ರೈಸ್ತ ಗುಣಗಳಿವೆ? ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡುತ್ತಿದ್ದಾಳಾ? ಬೈಬಲ್‌ ಮತ್ತು ಸಂಘಟನೆಯಿಂದ ನಿರ್ದೇಶನಗಳು ಸಿಕ್ಕಿದಾಗ ಅದನ್ನ ಕೇಳಿ, ಪಾಲಿಸ್ತಾಳಾ? ಬೇರೆಯವರ ಮೇಲೆ ಅವಳಿಗೆ ಅಕ್ಕರೆ ಇದೆಯಾ?

ಮದುವೆಯಾಗೋಕೆ ಯೋಚನೆ ಮಾಡ್ತಿರೋ ಒಬ್ಬ ಸಹೋದರಿ ಈ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು:

ಅವನಲ್ಲಿ ಯಾವ ಕ್ರೈಸ್ತ ಗುಣಗಳಿವೆ? ಅವನಿಗೆ ತನ್ನ ಕೆಲಸ, ಹಣ, ಕ್ರೀಡೆ ಮತ್ತು ಮನೋರಂಜನೆಗಿಂತ, ಯೆಹೋವನ ಆರಾಧನೆ ಮತ್ತು ಸಭೆಯಲ್ಲಿರೋ ಜವಾಬ್ದಾರಿಗಳು ಮುಖ್ಯವಾಗಿದೆಯಾ? ತನ್ನ ಮನೆಯಲ್ಲಿರುವವರ ಜೊತೆ ಹೇಗೆ ನಡೆದುಕೊಳ್ತಾನೆ? ಬೇರೆಯವರ ಜೊತೆ ಪ್ರೀತಿಯಿಂದ ನಡೆದುಕೊಳ್ತಾನಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ