ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜುಲೈ ಪು. 11
  • ಕುಟುಂಬದ ಖುಷಿಗೆ ನೀವೇನು ಮಾಡಬಹುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುಟುಂಬದ ಖುಷಿಗೆ ನೀವೇನು ಮಾಡಬಹುದು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತಾಯಿಯೊಬ್ಬಳ ವಿವೇಕಯುತ ಸಲಹೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಸುಖ ಸಂಸಾರ ಸಾಧ್ಯ!
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಶಿಸ್ತು—ಯೆಹೋವನು ಪ್ರೀತಿ ತೋರಿಸೋ ಒಂದು ವಿಧ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಬೈಬಲ್‌ ತತ್ವಗಳನ್ನ ತೋರಿಸಿ ನಿಮ್ಮ ಮಕ್ಕಳಿಗೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜುಲೈ ಪು. 11
ಚಿತ್ರಗಳು: “ಕುಟುಂಬ ಖುಷಿಯಿಂದ ಅರಳಲು” ವಿಡಿಯೋದ ಆಧಾರದ ಮೇಲಿರುವ ಚಿತ್ರಗಳು. 1. ಅಪ್ಪಅಮ್ಮ ಕೇಕ್‌ ತಿನ್ನೋದನ್ನ ನೋಡ್ತಿರೋ ಹೆಣ್ಣು ಮಕ್ಕಳು. 2. ಕುಟುಂಬ ಆರಾಧನೆ ನಡೆಯುತ್ತಿರುವಾಗ ನಸುನಗುತ್ತಿರುವ ಹೆಣ್ಣು ಮಕ್ಕಳು. 3. ಹುಷಾರಿಲ್ಲದ ಅಮ್ಮ ಸೋಫಾ ಮೇಲೆ ಮಲಗಿಕೊಂಡಿದ್ದಾರೆ, ಅವರನ್ನ ನೋಡ್ಕೊಳ್ಳುತ್ತಿರೋ ಮಗಳು.

ನಮ್ಮ ಕ್ರೈಸ್ತ ಜೀವನ

ಕುಟುಂಬದ ಖುಷಿಗೆ ನೀವೇನು ಮಾಡಬಹುದು?

ಎಲ್ಲ ಕುಟುಂಬಗಳು ಖುಷಿಯಾಗಿರಬೇಕು ಅನ್ನೋದೇ ಯೆಹೋವನ ಇಷ್ಟ. (ಕೀರ್ತ 127:3-5; ಪ್ರಸಂ 9:9; 11:9) ಆದ್ರೆ ನಮಗಿರೋ ಒತ್ತಡ ಮತ್ತು ಸಮಸ್ಯೆಗಳಿಂದ ಕೆಲವೊಮ್ಮೆ ಖುಷಿಯನ್ನ ಕಳ್ಕೊಳ್ತೀವಿ. ಕುಟುಂಬ ಖುಷಿಯಾಗಿರೋಕೆ ಪ್ರತಿಯೊಬ್ಬರೂ ಏನು ಮಾಡಬಹುದು?

ಗಂಡ ಹೆಂಡತಿಗೆ ಗೌರವ ಕೊಡ್ತಾನೆ. (1ಪೇತ್ರ 3:7) ಅವಳ ಜೊತೆ ಸಮಯ ಕಳೀತಾನೆ. ತನಗೆ ಮತ್ತು ಕುಟುಂಬಕ್ಕೆ ಅವಳು ಮಾಡೋ ತ್ಯಾಗವನ್ನ ಅರ್ಥಮಾಡ್ಕೊಳ್ತಾನೆ, ಮೆಚ್ತಾನೆ. (ಕೊಲೊ 3:15) ‘ನಿನ್ನನ್ನ ಪ್ರೀತಿಸ್ತೀನಿ’ ಅಂತ ಗಂಡ ಹೇಳ್ತಾನೆ ಮತ್ತು ಹೊಗಳ್ತಾನೆ.—ಜ್ಞಾನೋ 31:28, 31.

ಗಂಡನಿಗೆ ಹೇಗೆಲ್ಲ ಬೆಂಬಲ ಕೊಡಬಹುದು ಅಂತ ಹೆಂಡತಿ ಯೋಚಿಸ್ತಾ ಇರ್ತಾಳೆ. (ಜ್ಞಾನೋ 31:12) ಗಂಡನಿಗೆ ಅಧೀನಳಾಗಿ ಇರ್ತಾಳೆ, ಅವನಿಗೆ ಸಹಕರಿಸ್ತಾಳೆ. (ಕೊಲೊ 3:18) ಅವನ ಹತ್ರ ದಯೆ, ಕನಿಕರದಿಂದ ಮಾತಾಡ್ತಾಳೆ ಮತ್ತು ಬೇರೆಯವರ ಹತ್ರ ಅವನ ಬಗ್ಗೆ ಕೆಟ್ಟದಾಗಿ ಮಾತಾಡಲ್ಲ.—ಜ್ಞಾನೋ 31:26.

ಹೆತ್ತವರು ಮಕ್ಕಳ ಜೊತೆ ಸಮಯ ಕಳೀತಾರೆ. (ಧರ್ಮೋ 6:6, 7) ಮಕ್ಕಳ ಮೇಲೆ ಅವರಿಗಿರೋ ಪ್ರೀತಿಯನ್ನ ಮನಸ್ಸಲ್ಲೇ ಇಟ್ಟುಕೊಳ್ಳದೆ ಅವರ ಹತ್ರ ಹೇಳ್ತಾರೆ. (ಮತ್ತಾ 3:17) ಅವರಿಗೆ ಕಲಿಸುವಾಗ ಪ್ರೀತಿ ಮತ್ತು ವಿವೇಚನೆ ತೋರಿಸ್ತಾರೆ.—ಎಫೆ 6:4.

ಮಕ್ಕಳು ಹೆತ್ತವರು ಹೇಳಿದ ಮಾತನ್ನ ಕೇಳ್ತಾರೆ ಮತ್ತು ಅವರನ್ನ ಗೌರವಿಸ್ತಾರೆ. (ಜ್ಞಾನೋ 23:22) ಮನಸ್ಸಲ್ಲಿರೋದನ್ನ, ಭಾವನೆಗಳನ್ನ ಹೆತ್ತವರ ಹತ್ರ ಹೇಳ್ಕೊತಾರೆ. ಹೆತ್ತವರು ಶಿಸ್ತು ಕೊಡುವಾಗ ಬೇಜಾರ್‌ ಮಾಡ್ಕೊಳ್ಳಲ್ಲ, ಅವರ ಮಾತಿಗೆ ಬೆಲೆ ಕೊಡ್ತಾರೆ.—ಜ್ಞಾನೋ 19:20.

ಕುಟುಂಬ ಖುಷಿಯಿಂದ ಅರಳಲು ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗೆ ಉತ್ತರ ಕೊಡಿ:

ಕುಟುಂಬ ಖುಷಿಯಿಂದ ಅರಳೋಕೆ ಪ್ರತಿಯೊಬ್ಬರು ಏನು ಮಾಡಿದ್ರು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ