ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp21 ನಂ. 2 ಪು. 7-9
  • ಲೋಕಾಂತ್ಯದ ಬಗ್ಗೆ ಯೇಸು ಏನು ಹೇಳಿದ್ರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲೋಕಾಂತ್ಯದ ಬಗ್ಗೆ ಯೇಸು ಏನು ಹೇಳಿದ್ರು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಲೋಕಾಂತ್ಯದ ಬಗ್ಗೆ ಯೇಸು ಹೇಳಿದ ಎರಡು ವಿಷಯಗಳು:
  • ಸೂಚನೆಗಳು
  • “ಕೊನೇ ದಿನಗಳು”
  • ಹೊಸಲೋಕ ತುಂಬ ಹತ್ತಿರದಲ್ಲಿದೆ!
  • ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೊ?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರ ಉದ್ದೇಶವು ಬೇಗನೆ ಕೈಗೂಡಲಿದೆ
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
  • ಲೋಕದ ಅಂತ್ಯ ಹತ್ತಿರವಿದೆಯಾ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ನಾವು “ಕಡೇ ದಿವಸಗಳಲ್ಲಿ” ಇದ್ದೇವೆ ಎಂದು ನಮಗೆ ತಿಳಿದಿರುವ ವಿಧ
    ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
wp21 ನಂ. 2 ಪು. 7-9
ಕೊನೇ ದಿನಗಳ ಸೂಚನೆ ಬಗ್ಗೆ ಯೇಸು ಅಪೊಸ್ತಲರಿಗೆ ವಿವರಿಸುತ್ತಿದ್ದಾರೆ.

ಲೋಕಾಂತ್ಯದ ಬಗ್ಗೆ ಯೇಸು ಏನು ಹೇಳಿದ್ರು?

ಲೋಕಾಂತ್ಯ ಅಂದ್ರೆ ಭೂಮಿ ಮತ್ತು ಮನುಷ್ಯರೆಲ್ಲರೂ ನಾಶ ಆಗ್ತಾರೆ ಅಂತಲ್ಲ. ಬದಲಿಗೆ, ಈ ಲೋಕದಲ್ಲಿರೋ ಕೆಟ್ಟ ವಿಷಯಗಳು ಮತ್ತು ಕೆಟ್ಟ ಜನರು ಮಾತ್ರ ನಾಶ ಆಗ್ತಾರೆ ಅಂತ ಹಿಂದಿನ ಲೇಖನದಲ್ಲಿ ಓದಿದ್ವಿ. ಹಾಗಾದ್ರೆ ಈ ದುಷ್ಟ ಲೋಕದ ಅಂತ್ಯ ಯಾವಾಗ ಆಗುತ್ತೆ ಅಂತ ಬೈಬಲ್‌ ಹೇಳುತ್ತಾ?

ಲೋಕಾಂತ್ಯದ ಬಗ್ಗೆ ಯೇಸು ಹೇಳಿದ ಎರಡು ವಿಷಯಗಳು:

“ಹಾಗಾಗಿ ಎಚ್ಚರವಾಗಿರಿ. ಯಾಕಂದ್ರೆ ಆ ದಿನ, ಆ ಸಮಯ ನಿಮಗೆ ಗೊತ್ತಿಲ್ಲ.”—ಮತ್ತಾಯ 25:13.

“ದೇವರು ಆರಿಸ್ಕೊಂಡಿರೋ ಸಮಯ ಯಾವಾಗ ಅಂತ ಗೊತ್ತಿಲ್ಲದೆ ಇರೋದ್ರಿಂದ ಜಾಗ್ರತೆಯಿಂದ ಇರಿ, ಎಚ್ಚರವಾಗಿ ಇರಿ.”—ಮಾರ್ಕ 13:33.

ಈ ಲೋಕ ಯಾವಾಗ ಅಂತ್ಯ ಆಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಆದ್ರೆ ದೇವರು ಲೋಕಾಂತ್ಯಕ್ಕೆ “ದಿನ ಮತ್ತು ಸಮಯ” ನಿಶ್ಚಯಿಸಿದ್ದಾರೆ. (ಮತ್ತಾಯ 24:36) ಹಾಗಾದ್ರೆ ಲೋಕಾಂತ್ಯ ಯಾವಾಗ ಆಗುತ್ತೆ ಅನ್ನೋದು ನಮಗೆ ಗೊತ್ತೇ ಆಗಲ್ವಾ? ಖಂಡಿತ ಗೊತ್ತಾಗುತ್ತೆ. ಲೋಕಾಂತ್ಯಕ್ಕೆ ಮುಂಚೆ ನಡೆಯೋ ಕೆಲವು ಸೂಚನೆಗಳನ್ನ ಗಮನಿಸೋಕೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ರು.

ಸೂಚನೆಗಳು

“ಲೋಕದ ಅಂತ್ಯಕ್ಕೆ” ಅನೇಕ ಸೂಚನೆಗಳಿವೆ. ಯೇಸು ಹೇಳಿದ್ದು: “ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ. ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುತ್ತೆ, ಭೂಕಂಪ ಆಗುತ್ತೆ.” (ಮತ್ತಾಯ 24:3, 7) ಅಷ್ಟೇ ಅಲ್ಲ “ಅಂಟುರೋಗಗಳು” ಇರುತ್ತೆ ಅಂತನೂ ಯೇಸು ಹೇಳಿದ್ರು. (ಲೂಕ 21:11) ಯೇಸು ಹೇಳಿದ್ದೆಲ್ಲ ನಮ್ಮ ಕಣ್ಣ ಮುಂದೆ ನಡೀತಿದೆ ಅಲ್ವಾ?

ಭೂಕಂಪ, ಯುದ್ಧ, ಹಸಿವಿನಿಂದ ಮತ್ತು ಹೊಸಹೊಸ ರೋಗಗಳಿಂದ ಜನರು ತುಂಬ ಕಷ್ಟ ಪಡ್ತಿದ್ದಾರೆ. ಉದಾಹರಣೆಗೆ, 2004 ರಲ್ಲಿ ಹಿಂದೂಮಹಾಸಾಗರದಲ್ಲಿ ಒಂದು ದೊಡ್ಡ ಭೂಕಂಪ ಆಯ್ತು. ಅದ್ರಿಂದಾದ ಸುನಾಮಿಯಲ್ಲಿ 2,25,000 ಜನರ ಜೀವ ಹೋಯ್ತು. ಮೂರು ವರ್ಷದಲ್ಲಿ ಕೋವಿಡ್‌ ಅಂಟುರೋಗದಿಂದ 69,00,000 ಜನ ತೀರಿ ಹೋದ್ರು. ಈ ಎಲ್ಲಾ ಸೂಚನೆಗಳು ಲೋಕಾಂತ್ಯ ತುಂಬ ಹತ್ತಿರದಲ್ಲಿದೆ ಅಂತ ಸೂಚಿಸುತ್ತೆ.

“ಕೊನೇ ದಿನಗಳು”

ಲೋಕಾಂತ್ಯ ಆಗೋಕೆ ಸ್ವಲ್ಪ ಮುಂಚೆ ಇರೋ ಸಮಯವನ್ನು ಬೈಬಲ್‌ “ಕೊನೇ ದಿನಗಳು” ಅಂತ ಹೇಳುತ್ತೆ. (2 ಪೇತ್ರ 3:3, 4) ಕೊನೇ ದಿನಗಳಲ್ಲಿ ಜನರು ಎಷ್ಟು ಕೀಳ್ಮಟ್ಟಕ್ಕೆ ಇಳಿತಾರೆ ಅಂತ ಎರಡನೇ ತಿಮೊತಿ 3:1-5 ರಲ್ಲಿ ಹೇಳುತ್ತೆ. (“ಅಂತ್ಯಕ್ಕೆ ಸ್ವಲ್ಪ ಮುಂಚಿನ ಸಮಯ” ಅನ್ನೋ ಚೌಕ ನೋಡಿ) ಇವತ್ತು ಸ್ವಾರ್ಥಿಗಳು, ಆಸೆಬುರುಕರು, ಕ್ರೂರಿಗಳು, ಪ್ರೀತಿನೇ ಇಲ್ಲದಿರೋ ಜನ್ರನ್ನ ನೀವು ನೋಡ್ತಿದ್ದೀರ ಅಲ್ವಾ? ಈ ಎಲ್ಲಾ ವಿಷಯಗಳು ನಾವು ಲೋಕಾಂತ್ಯಕ್ಕೆ ತುಂಬ ಹತ್ತಿರದಲ್ಲಿದ್ದೀವಿ ಅಂತ ತೋರಿಸುತ್ತೆ.

ಹಾಗಾದ್ರೆ ಕೊನೇ ದಿನಗಳ ಸಮಯಾವಧಿ ಎಷ್ಟು? “ಸಮಯ ತುಂಬ ಕಮ್ಮಿ” ಅಂತ ಬೈಬಲ್‌ ಹೇಳುತ್ತೆ. ಆಮೇಲೆ “ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ” ದೇವರು ನಾಶ ಮಾಡ್ತಾರೆ.—ಪ್ರಕಟನೆ 11:15-18, 12:12.

ಯುದ್ಧಗಳು

ಯುದ್ಧದಲ್ಲಿ ಸೈನಿಕರು ತಡೆಗೋಡೆ ಹಿಂದೆ ನಿಂತು ಶೂಟ್‌ ಮಾಡ್ತಿದ್ದಾರೆ.
  • 2007 ರಿಂದ 2017 ರವರೆಗೆ ಸಶಸ್ತ್ರ ಹೋರಾಟದಿಂದ ಮತ್ತು ಭಯೋತ್ಪಾದನೆಯಿಂದ 118% ಸಾವಿನ ಸಂಖ್ಯೆ ಹೆಚ್ಚಾಗಿತ್ತು

ಕಾಯಿಲೆಗಳು

ಹುಷಾರಿಲ್ಲದ ವ್ಯಕ್ತಿ ಆಸ್ಪತ್ರೆಯಲ್ಲಿ ಇದ್ದಾರೆ.
  • ಹೃದ್ರೋಗ, ಲಕ್ವ, ಶ್ವಾಸಕೋಶದ ಕಾಯಿಲೆ, ನವಜಾತ ಶಿಶುಗಳಿಗೆ ಬರೋ ಕಾಯಿಲೆ, ಅತಿಸಾರ ರೋಗ, ಕ್ಯಾನ್ಸರ್‌ ಮತ್ತು ಟಿ.ಬಿ ಕಾಯಿಲೆಗಳು

ಹಸಿವು

ಚಿಕ್ಕ ಹುಡುಗಿ ಹಸಿವೆಯಿಂದ ಊಟಕ್ಕಾಗಿ ಪಾತ್ರೆ ಹಿಡಿದುಕೊಂಡಿದ್ದಾಳೆ.
  • 2021 ರಲ್ಲಿ ಲೋಕದ ಜನಸಂಖ್ಯೆಯ 9.8% ಜನ ಹಸಿವಿಂದ ನರಳಿದ್ರು 5 ವಯಸ್ಸಿಗಿಂತ ಕೆಳಗಿರೋ ಮೂರರಲ್ಲಿ ಒಂದು ಮಗುಗೆ ಪೌಷ್ಠಿಕ ಆಹಾರ ಸಿಗದೆ ಬೆಳವಣಿಗೆ ಆಗಲಿಲ್ಲ

ಲೋಕವ್ಯಾಪಕ ಸಾರುವ ಕೆಲಸ

ಯೆಹೋವನ ಸಾಕ್ಷಿಗಳು ತಳ್ಳುಬಂಡಿ ಹತ್ರ ನಿಂತು ಒಬ್ಬ ವ್ಯಕ್ತಿ ಹತ್ರ ಮಾತಾಡ್ತಿದ್ದಾರೆ.
  • ಸುವಾರ್ತೆ ಸಾರ್ತಿರೋ 86 ಲಕ್ಷಕ್ಕಿಂತ ಹೆಚ್ಚಿನ ಯೆಹೋವನ ಸಾಕ್ಷಿಗಳು 240 ದೇಶಗಳಲ್ಲಿ 1,000 ಕ್ಕಿಂತ ಹೆಚ್ಚು ಭಾಷೆಯ ಸಾಹಿತ್ಯಗಳನ್ನ ತಯಾರಿಸ್ತಿದ್ದಾರೆ

ಹೊಸಲೋಕ ತುಂಬ ಹತ್ತಿರದಲ್ಲಿದೆ!

ದೇವರು ಈ ದುಷ್ಟ ಲೋಕವನ್ನು ಅಂತ್ಯ ಮಾಡೋಕೆ ಈಗಾಗ್ಲೇ ದಿನ ಮತ್ತು ಸಮಯವನ್ನ ನಿಶ್ಚಯಿಸಿದ್ದಾರೆ. (ಮತ್ತಾಯ 24:36) ಆದ್ರೆ “ಯಾರೂ ನಾಶ ಆಗಬಾರದು” ಅಂತ ದೇವರು ಬಯಸ್ತಾರೆ. (2 ಪೇತ್ರ 3:9) ದೇವರು ತನ್ನ ಬಗ್ಗೆ ಕಲಿಯೋಕೆ ಜನರಿಗೆಲ್ಲ ಒಂದು ಅವಕಾಶ ಕೊಡ್ತಿದ್ದಾರೆ. ಹೀಗೆ ಜನರೆಲ್ಲ ಈ ಅಂತ್ಯವನ್ನ ಪಾರಾಗಿ ಹೊಸಲೋಕದಲ್ಲಿ ಸಂತೋಷದಿಂದ ಜೀವಿಸಬೇಕು ಅಂತ ಬಯಸ್ತಿದ್ದಾರೆ.

ತನ್ನ ರಾಜ್ಯದಲ್ಲಿ ಇರೋಕೆ ಜನರು ಏನು ಮಾಡಬೇಕು ಅಂತ ದೇವರು ಈಗಾಗ್ಲೇ ಕಲಿಸ್ತಿದ್ದಾರೆ. ಅದಕ್ಕೇ ಯೇಸು ಹೇಳಿದ್ದು, ದೇವರ ರಾಜ್ಯದ ಸಂದೇಶ “ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ.” (ಮತ್ತಾಯ 24:14) ಲೋಕದ ಎಲ್ಲಾ ಕಡೆ ಇರೋ ಯೆಹೋವನ ಸಾಕ್ಷಿಗಳು ಸಿಹಿಸುದ್ದಿ ಸಾರೋದ್ರಲ್ಲಿ ಕೋಟಿಗಟ್ಟಲೆ ತಾಸುಗಳನ್ನ ಕಳೆಯುತ್ತಾರೆ. ಯೇಸು ಹೇಳಿದ ಹಾಗೆ ಅಂತ್ಯ ಬರೋಕೆ ಮುಂಚೆ ದೇವರ ರಾಜ್ಯದ ಈ ಸಿಹಿಸುದ್ದಿಯನ್ನು ಇಡೀ ಭೂಮಿಯಲ್ಲಿರೊ ಜನ ಕೇಳಿರುತ್ತಾರೆ.

ಮನುಷ್ಯರ ಆಳ್ವಿಕೆ ಆದಷ್ಟು ಬೇಗ ಕೊನೆಯಾಗುತ್ತೆ. ಆದರೆ ಇನ್ನೂ ಖುಷಿಕೊಡೋ ವಿಷಯ ಏನಂದ್ರೆ ನಾವು ಅಂತ್ಯ ಪಾರಾಗಿ ಹೊಸ ಲೋಕಕ್ಕೆ ಹೋಗಬಹುದು. ಹೊಸ ಲೋಕದಲ್ಲಿ ನಾವು ಹೇಗೆ ಬದುಕ್ತೀವಿ ಅಂತ ಮುಂದಿನ ಪುಟ ವಿವರಿಸುತ್ತೆ.

ಅಂತ್ಯಕ್ಕೆ ಸ್ವಲ್ಪ ಮುಂಚಿನ ಸಮಯ

“ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು, ತಮ್ಮ ಬಗ್ಗೆ ಕೊಚ್ಕೊಳ್ಳುವವರು, ಅಹಂಕಾರಿಗಳು, ಬೈಯೋರು, ಅಪ್ಪಅಮ್ಮನ ಮಾತು ಕೇಳದವರು, ಮಾಡಿದ ಉಪಕಾರ ಮರೆತುಬಿಡುವವರು, ನಂಬಿಕೆದ್ರೋಹ ಮಾಡುವವರು, ಕುಟುಂಬದವ್ರನ್ನ ಪ್ರೀತಿಸದವರು, ಯಾವುದಕ್ಕೂ ಒಪ್ಪದವರು, ಬೇರೆಯವ್ರ ಹೆಸ್ರು ಹಾಳು ಮಾಡುವವರು, ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು, ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು, ದೇವರನ್ನ ಪ್ರೀತಿಸದೆ ತಮ್ಮ ಆಸೆಗಳನ್ನ ತೀರಿಸ್ಕೊಳ್ಳೋಕೆ ಇಷ್ಟಪಡುವವರು, ಮೇಲೆ ದೇವಭಕ್ತಿಯ ವೇಷ ಹಾಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಮಾಡದವರು ಇರ್ತಾರೆ.”—2 ತಿಮೊತಿ 3:1-5.

ಕೊನೇ ದಿನಗಳ ಬಗ್ಗೆ ಯೇಸು ಹೇಳಿದ ಭವಿಷ್ಯವಾಣಿಯಿಂದ ಹೊಸ ಲೋಕದ ನಿರೀಕ್ಷೆ ಬಗ್ಗೆ ತಿಳಿಯೋಕೆ ಆಗುತ್ತೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ